ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಲ್ಲಿ ಪ್ರಾಬ್ಲಂ ಆದ್ರೆ ರಾಜಧಾನಿಗೆ ಕತ್ತಲೆ

By Mahesh
|
Google Oneindia Kannada News

Karnataka in dark after snags in RTPS
ರಾಯಚೂರು, ಜು 13 : ರಾಜ್ಯಕ್ಕೆ ಬೆಳಕು ನೀಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ನಿರ್ವಹಣೆ ವಿಭಾಗದ ಬಿಕ್ಕಟ್ಟು ಉಲ್ಬಣಿಸಿ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದ್ದು, ರಾಜ್ಯಕ್ಕೆ ವಿದ್ಯುತ್ ಅಭಾವದ ಬಿಸಿ ತಟ್ಟಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅವ್ಯಾಹತವಾಗಿ ಸುಮಾರು 5 -7 ಗಂಟೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ರಾಯಚೂರು ಘಟಕ ನಿರ್ವಾಹಣಾ ವಿಭಾಗದ ದೋಷದಿಂದ ಕಲ್ಲಿದ್ದಲು ಸಾಗಾಣಿಗೆ ಅಡ್ಡಿಯಾಗಿದ್ದು ಐದು ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದೆ. ಈಗ 3 ಮತ್ತು 5ನೇ ಘಟಕ ಮಾತ್ರ ವಿದ್ಯುತ್ ಉತ್ಪಾದಿಸುತ್ತಿದ್ದು 6 ಮತ್ತು 7ನೇ ಘಟಕ ಸೋಮವಾರ (ಜು 12) ರಾತ್ರಿ ವಿದ್ಯುತ್ ಉತ್ಪಾದನೆಪುನರಾರಂಭಿಸಿದೆ.

ಆಮದು ಹಾಗೂ ಜಲ ಮೂಲದಿಂದ ನಿರೀಕ್ಷಿತ ಪ್ರಮಾಣದ ವಿದ್ಯುತ್ ದೊರೆಯದೆ ವಿದ್ಯುತ್ ಕಡಿತ ಯದ್ವಾತದ್ವ ಹೆಚ್ಚಾಗಿದ್ದು, ಪುನರಾರಂಭ ಗೊಂಡ ಘಟಕಗಳು ಕೂಡ ಪೂರ್ಣ ಸಾಮರ್ಥ್ಯದ ಅಂದರೆ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿಲ್ಲ ಬದಲಿಗೆ ಕೇವಲ 150 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ.

ವಿದ್ಯುತ್ ಕೇಂದ್ರದ ಅಧಿಕಾರಿಗಳು ಅಹೋರಾತ್ರಿ ಕಸರತ್ತು ನಡೆಸಿದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಗುತ್ತಿಲ್ಲ ಎಂದು ಮುಖ್ಯ ಇಂಜಿನಿಯರ್ ಹೇಳಿದ್ದಾರೆ. ಸದನದಲ್ಲಿ ಗಣಿ, ಬಳ್ಳಾರಿ ವಿವಾದ ಚರ್ಚೆ, ಧರಣಿಯಲ್ಲಿ ಎಲ್ಲರೂ ನಿರತರಾಗಿರುವಾಗ ಕರ್ನಾಟಕ ಕತ್ತಲೆಯಲ್ಲಿ ಮುಳುಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X