ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಪ್ರವಚನ ಆರಂಭಿಸಿದ ನಿತ್ಯಾನಂದ

By Prasad
|
Google Oneindia Kannada News

Swami Nithyananda
ಬೆಂಗಳೂರು, ಜು. 12 : "ಈ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಶಾಂತಿ, ಅಹಿಂಸೆ ಮತ್ತು ಕರುಣೆ ಪ್ರಮುಖ ಅಸ್ತ್ರ. ಈ ಎಲ್ಲಾ ಗುಣಗಳನ್ನು ಮನುಷ್ಯ ತನ್ನಲ್ಲಿ ಅಳವಡಿಸಿಕೊಂಡರೆ ಜಗತ್ತನ್ನೇ ಗೆಲ್ಲಬಹುದು. ಈ ಮೂರು ಗುಣಗಳು ನನ್ನಲ್ಲಿರುವುದರಿಂದ ನಾನು ಜೈಲಿನಲ್ಲಿ ನಿಶ್ಚಿಂತೆಯಿಂದ ಇದ್ದೆ."

ಇವು ನಟಿ ರಂಜಿತಾ ಜೊತೆಗಿನ ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಿಡದಿ ಧ್ಯಾನಪೀಠ ಆಶ್ರಮದ ನಗುಮೊಗದ ನಿತ್ಯಾನಂದ ಸ್ವಾಮಿ ಉಲಿದ ನುಡಿಗಳು. ಜೈಲಿನಿಂದ ಹೊರಬಂದ ನಂತರ ತನ್ನ ಭಕ್ತ ಸಮೂಹಕ್ಕೆ ನಿತ್ಯಾನಂದ ಪ್ರಥಮ ಬಾರಿಗೆ ಪ್ರವಚನ ನೀಡಿದ್ದಾರೆ.

ದೇಶ, ವಿದೇಶಗಳಿಂದ ಬಂದಿದ್ದ ನೂರಾರು ಭಕ್ತರಿಗೆ ಪ್ರವಚನ ನೀಡುತ್ತಾ, ನನ್ನ ಪ್ರಕರಣದ ನಂತರ ಮಾಧ್ಯಮ ಬಂಧುಗಳು ನನ್ನನ್ನು ಏನೆಲ್ಲಾ ಜರಿದರು. ಕೆಲ ಪತ್ರಿಕೆಗಳು ನನ್ನ ಹೆಸರನ್ನು ವಿಚಿತ್ರ ರೀತಿಯಲ್ಲಿ ಬಳಸಲು ಆರಂಭಿಸಿದರು. ಆದರೆ ನಾನು ಅದನ್ನೆಲ್ಲಾ ಸಹಸ್ರನಾಮ ಎಂದು ಭಾವಿಸಿದೆ. ಗೂಗಲ್ ನಲ್ಲಿ ನನ್ನ ಬಗ್ಗೆ ಅತಿ ಹೆಚ್ಚು ಜನ ಸರ್ಚ್ ಮಾಡಿದ್ದಾರೆ. ಮೈಕಲ್ ಜಾಕ್ಸನ್ ನಂತರ ಅತಿ ಹೆಚ್ಚು ಜನ ನನ್ನ ಹುಡುಕಾಟ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರವಚನಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಹೇರಿದ್ದ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಧ್ಯಾನಪೀಠ ಮತ್ತೆ ನಿತ್ಯಾನಂದರ ಪ್ರವಚನ ಏರ್ಪಡಿಸಿತ್ತು. ಮಾಧ್ಯಮ ಮತ್ತು ಪತ್ರಿಕೆಯವರಿಗೆ ನಿತ್ಯಾನಂದರ ಶಿಷ್ಯರು ಆಶ್ರಮ ಪ್ರವೇಶಿಸದಂತೆ ತಡೆಯೊಡ್ಡಿ ನಂತರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಘಟನೆ ಕೂಡ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X