ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್ ಶಿಸ್ತಿಗೆ ತಲೆಬಾಗಿದ ಫೀಫಾ ವಿಶ್ವಕಪ್

By Mahesh
|
Google Oneindia Kannada News

Spain lifts FIFA WC 2010
ಜೋಹಾನ್ಸ್ ಬರ್ಗ್, ಜು.12: ಶಿಸ್ತುಬದ್ಧ ಆಟಕ್ಕೆ ತಕ್ಕ ಪುರಸ್ಕಾರ. ಯುರೋ ಚಾಂಪಿಯನ್ಸ್ ಸ್ಪೇನ್ ಈಗ ವಿಶ್ವದ ಫುಟ್ಬಾಲ್ ಸಾಮ್ರಾಟ. ಒರಟಾಟವಾಡಿದ ಡಚ್ಚರು ಅಂತಿಮ ಹಣಾಹಣಿಯಲ್ಲಿ ಮತ್ತೊಮ್ಮೆ ಸೋಲು ಅನುಭವಿಸಿ, ಕಂಬನಿ ಸುರಿಸಿದರು.ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಹೊಚ್ಚ ಹೊಸ ಚಾಂಪಿಯನ್ ಸ್ಪೇನ್ ಆಟಕ್ಕೆ ಎಲ್ಲರೂ ಬಹುಪರಾಕ್ ಹೇಳಿದರು.

ಈ ವಿಶ್ವಕಪ್ ನಲ್ಲಿ ಒಂದೂ ಸೋಲನ್ನು ಕಾಣದ ಡಚ್ಚರಿಗೆ ಕೊನೆಗೂ ಸ್ಪೇನ್ ತಂಡ ಸೋಲಿನ ರುಚಿ ತೋರಿಸಿತು. ಪಂದ್ಯದ ಪೂರ್ಣಾವಧಿಯ ನಂತರ ಹೆಚ್ಚುವರಿ ಅವಧಿಯ 116 ನೇ ನಿಮಿಷದಲ್ಲಿ ಆಂಡ್ರೆಸ್ ಇನಿಯೆಸ್ಟಾ ಹೊಡೆದ ಏಕೈಕ ಗೋಲು ಸ್ಪೇನ್ ಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿತು.ಉತ್ತಮ ಆಟವಾಡಿದ ಇನೆಷ್ಟಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ನಿರೀಕ್ಷೆಯಂತೆ ಸ್ಪೇನ್ ಪರ ಟೊರೆಸ್ ಕಣಕ್ಕಿಳಿಯಲಿಲ್ಲ. ಪೆಡ್ರೋ, ವಿಲ್ಲಾ ಸಮರ್ಥ ದಾಳಿ ನಡೆಸಿದರೂ ಫಲ ದೊರೆಯಲಿಲ್ಲ. ಮೊದಲಾರ್ಧದಲ್ಲಿ ಮಿಂಚಿದ್ದು ರೊಮೊಸ್ ಮಾತ್ರ. ಹಾಲೆಂಡ್ ಪರ ರೊಬೆನ್ ಮಾತ್ರ ಸ್ಪೇನ್ ಗೋಲಿ ಕ್ಯಾಸಿಲಸ್ ರನ್ನು ಕಾಡಿದರು. ಸ್ನೈಡರ್ ಚೆಂಡು ಸಿಗದೇ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

ಪಂದ್ಯದುದ್ದಕ್ಕೂ ವಾನ್ ಪರ್ಸಿ ಉತ್ತಮ ಆಟ ಪ್ರದರ್ಶಿಸಿದರೂ ಸ್ಪೇನ್ ನ ರಕ್ಷಣಾ ಪಂಕ್ತಿಯ ಪುಯೋಲ್, ಕ್ಯಾಪಡಿವಿಲ್ಲಾರನ್ನು ದಾಟಿ ಮುನ್ನುಗ್ಗಲಾಗಲಿಲ್ಲ. ಸ್ಪೇನ್ ರಕ್ಷಣಾ ವ್ಯೂಹವನ್ನು ಹೊಡೆದು ಮುನ್ನುಗ್ಗಲಾಗದೆ ಡಚ್ಚರು ಒರಟಾಟಕ್ಕೆ ಇಳಿದಿದ್ದು ಸುಂದರ ಆಟಕ್ಕೆ ಶೋಭೆ ತರಲಿಲ್ಲ.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ಯಾರು ಎಷ್ಟು ಗೋಲು ಹೊಡೆದರು ಎಂಬ ಲೆಕ್ಕಾಚಾರಕ್ಕಿಂತ ರೆಫ್ರಿ ಎಷ್ಟು ಜನಕ್ಕೆ ಕಾರ್ಡ್ ತೋರಿಸಿದರು ಎಂಬ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದರು. ಇಂಗ್ಲೆಂಡ್ ರೆಫ್ರಿ ವೆಬ್ ಗಂತೂ ಆಟಗಾರರಿಗೆ ತಿಳಿಹೇಳುವುದರಲ್ಲಿ ಸಾಕು ಸಾಕಾಯಿತು.

ಕೈ ಚೆಲ್ಲಿದ ಅತ್ಯುತ್ತಮ ಅವಕಾಶಗಳು: ಪಂದ್ಯದ 61 ನೇ ನಿಮಿಷದಲ್ಲಿ ರೊಬೆನ್ ಸ್ಪೇನ್ ಪಾಳೆಯಕ್ಕೆ ದಾಳಿ ಮಾಡಿದಾಗ ಇದ್ದದ್ದು ಇಬ್ಬರು ಡಿಫೆಂಡರ್ ಗಳು ಮಾತ್ರ ಆದರೆ, ಚೆಂಡಿನ ಮೇಲೆ ನಿಯಂತ್ರಣ್ ಕಳೆದುಕೊಂಡರೊಬೆನ್ ಗೋಲು ಗಳಿಸುವಲ್ಲಿ ವಿಫಲರಾದರು.

ದ್ವಿತೀಯಾರ್ಧದಲ್ಲಿ ಮತ್ತೊಮ್ಮೆ ಇದೇ ರೀತಿ ಅವಕಾಶ ದೊರೆತಾಗ ಗೋಲಿ ಮಾತ್ರ ಎದುರಿಗಿದ್ದದ್ದು, ಡಿಫೆಂಡರ್ ಪುಯೋಲ್ ಹಿಂದಿನಿಂದ ಚೆಂಡು ಕಸಿಯಲು ಪ್ರಯತ್ನಿಸುತ್ತಿದ್ದರು. ಆದರೆ, ಈ ಬಾರಿ ವಿಫಲರಾದ ರೊಬೆನ್, ಪುಯೋಲ್ ವಿರುದ್ಧ ರೆಫ್ರಿಗೆ ದೂರು ನೀಡಲು ಹೋಗಿ ಹಳದಿ ಕಾರ್ಡ್ ಪಡೆಯಬೇಕಾಯಿತು.

ಡೇವಿಡ್ ವಿಲ್ಲಾ ಉತ್ತಮವಾಗಿ ಆಡಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸಲು ವಿಫಲರಾದರು. ಸ್ಪೇನ್ ಕೋಚ್ ಬೋಸ್ಕಿ ಪೆಡ್ರೊರನ್ನು ಬದಲಿಗೆ ಟೊರೆಸ್ ಅನ್ನು ಇಳಿಸದೆ ನವಸ್ ಅನ್ನು ಕಳಿಸಿದ್ದು, ಅಚ್ಚರಿಯಾದರೂ, ಸೂಕ್ತ ಆಯ್ಕೆ ಅಗಿತ್ತು.

ಯುರೋಪ್ ಖಂಡದ ಹೊರಗೆ ನಡೆದ ಟೂರ್ನಿಯಲ್ಲಿ ಯುರೋಪ್ ರಾಷ್ಟ್ರವೊಂದು ವಿಶ್ವಕಪ್ ಗೆದ್ದಿದ್ದು ಹಾಗೂ ಲೀಗ್ ನಲ್ಲಿ ಮೊದಲ ಪಂದ್ಯ ಸೋತರೂ ಸ್ಪೇನ್ ಕಪ್ ಎತ್ತಿದ್ದು ದಾಖಲೆಯಾಯಿತು.

ಮತ್ತೆ ಹೀರೋ ಪೌಲ್ : ಜರ್ಮನಿಯ ಆಕ್ಟೋಪಸ್ ಪೌಲ್ ಭವಿಷ್ಯ ನಿಜವಾಗಿದೆ. ಸಿಂಗಪುರದ ಮಣಿ ಗಿಳಿ ಭವಿಷ್ಯ ಸುಳ್ಳಾಗಿದೆ. ಬುಕ್ಕಿಗಳ ನೆಚ್ಚಿನ ತಂಡ ಸ್ಪೇನ್ ಗೆದ್ದ ಪರಿಣಾಮ ಬೆಟ್ಟಿಂಗ್ ನಲ್ಲಿ ಹಣದ ಹೊಳೆಯೇ ಹರಿದಿದೆ.

English summary
Spain clobbered the Oranje in the all-European final showdown at the FIFA World Cup 2010 here on Sunday, Jul, to become football"s eight world champions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X