ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯೆಂದರೆ ಗೂಂಡಾಗಳ ಜಿಲ್ಲೆಯೇ : ಪ್ರಕಾಶ್

By Mrutyunjaya Kalmat
|
Google Oneindia Kannada News

MP Prakash
ಬೆಂಗಳೂರು, ಜು. 12 : ಮಾಜಿ ಉಪಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಆರೋಗ್ಯ ಸುಧಾರಿಸಲಿ, ಅವರು ನೂರ್ಕಾಲ ಬಾಳಲಿ, ಮೌಲ್ಯಾಧಾರಿತ, ಆದರ್ಶ ರಾಜಕಾರಣದ ಬಗ್ಗೆ ಮಾರ್ಗದರ್ಶನ ಮಾಡಲಿ. ಇದು ಸೆಂಟ್ರಲ್ ಕಾಲೇಜಿನ ಜ್ಞಾಮಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಡೆದ ಮಾಜಿ ಉಪಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಅವರ 70 ನೇ ವರ್ಷದ ಅಭಿನಂದನೆ ಸಮಾರಂಭದಲ್ಲಿ ಕೇಳಿ ಬಂದ ಹಾರೈಕೆ.

ಪ್ರಕಾಶ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿತ್ತಾ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿಯತಕಾಲಿಕೆಯೊಂದರಲ್ಲಿ ಬಂದ ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿದರು. ಇದರಲ್ಲಿ ಆರ್ಎಸ್ಎಸ್ ಹೆಸರೂ ಬಂದಿದೆ. ಹಿಂದೂ ಭಯೋತ್ಪಾದನೆ ದೇಶಕ್ಕೆ ಅಪಾಯಕಾರಿ ಎಂದರು. ಇದೇ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ತಕ್ಷಣವೇ ಎದ್ದು ನೀವು ಮಾತನಾಡಿಕೊಳ್ಳಿ ಎಂದು ಪ್ರಕಾಶ್ ಕಾಲಿಗೆ ಮನಸ್ಕಾರ ಮಾಡಿ ಹೊರಟೇಬಿಟ್ಟರು.

ಬಳ್ಳಾರಿಗೆ ವಿಶಿಷ್ಟ ಸ್ಥಾನವಿದೆ. ಆದರೆ, ಇತ್ತೀಚಿನ ಬೆಳವಣಿಗೆಯಿಂದ ಇಂದು ಬಳ್ಳಾರಿಯವರು ಎಂದರೆ ಗುಂಡಾಗಳು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಬಾರಿ ನಾವು ಯಾಕಾದರೂ ಬಳ್ಳಾರಿಯವರಾದೆವೇನೋ ಎಂದೆನಿಸುತ್ತದೆ ಎಂದು ಪ್ರಕಾಶ್ ಆತಂಕ ವ್ಯಕ್ತಪಡಿಸಿದರು. ಹಣ, ಅಧಿಕಾರ ಸಿಕ್ಕಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ಬಳ್ಳಾರಿಯಲ್ಲಿದೆ. ಬಳ್ಳಾರಿ ಮಂದಿಗೆ ಅಧಿಕಾರ ಕೊಟ್ಟಿದ್ದು ಮಂಗನಿಗೆ ಹೆಂಡ ಕುಡಿಸಿ, ಚೇಳು ಕಚ್ಚಿಸಿದಂತಾಗಿದೆ ಎಂದು ಪರೋಕ್ಷವಾಗಿ ರೆಡ್ಡಿ ಬಳಗವನ್ನು ಟೀಕಿಸಿದರು.

ಇತ್ತೀಚಿನ ರಾಜಕೀಯ ಬೆಳವಣಿಗೆ ಕೇವಲ ತಾತ್ಕಾಲಿಕ ಬೆಳವಣಿಗೆ. ಅದು ಜಯವಲ್ಲ, ಜನರನ್ನು ಯಾರೂ ಕೊಳ್ಳಲಾಗಲಿಲ್ಲ. ಕಾಲ ಬದಲಾಗುತ್ತದೆ ನಿರೀಕ್ಷಿಸಿ ಎಂದರು. ಹಿಟ್ಲರ್ ಕೊಡ ಮೊದಲ ಬಾರಿಗೆ ಜನರಿಂದ ಆಯ್ಕೆಯಾದವ. ಅವರು ಏನಾದ, ಅವನ ಪರಿಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲವನ್ನೂ ಕಾಯ್ದು ನೋಡಿ ಎಂದು ಪ್ರಕಾಶ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X