ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕ್ಲೇಮ್ ಪಾಲಿಸಿ ಶುಲ್ಕರಹಿತ ಸೇವೆ ಇಲ್ಲ

By Mahesh
|
Google Oneindia Kannada News

Mediclaim cashless facility withdrawn for top hospitals
ನವದೆಹಲಿ,ಜು.12: ಮೆಡಿಕ್ಲೇಮ್ ವಿಮಾ ಪಾಲಿಸಿಗಳು ಇಂದು ಪ್ರತಿಯೊಬ್ಬರ ಜೀವನದ ಅವಶ್ಯಕತೆ. ಈ ಪಾಲಿಸಿಗಳ ವಿತರಣೆಯಲ್ಲಿ ಖಾಸಗೀ ವಿಮಾ ಕಂಪೆನಿಗಳದೇ ಸಿಂಹಪಾಲು. ಈ ಪಾಲಿಸಿಗಳ ಬಹಳ ಅನುಕೂಲಕರ ಅಂಶವೆಂದರೆ ಜೇಬಿನಲ್ಲಿ ಒಂದು ರೂಪಾಯಿ ಹಣವಿಲ್ಲದೆ ಪ್ರಖ್ಯಾತ, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಈಗ ಈ ಸೇವೆ ಅಂತ್ಯಗೊಳ್ಳಲಿದೆ.

ಅದರೆ ಇದೀಗ ಜುಲೈ 1 ರಿಂದ ಸರ್ಕಾರಿ ವಿಮಾ ಕಂಪೆನಿಗಳೂ ಸೇರಿದಂತೆ ಎಲ್ಲಾ ಖಾಸಗಿ ವಿಮಾ ಕಂಪೆನಿಗಳು ಪ್ರತಿಷ್ಠಿತ ಆಸ್ಪತ್ರೆಗಳಾದ ಅಪೋಲೋ, ಫೋರ್ಟಿಸ್, ಗಂಗಾರಾಮ್, ಮೆಡಿಸಿಟಿ ಹಾಗೂ ಇತರ 150 ಆಸ್ಪತ್ರೆಗಳಲ್ಲಿ ಸೇವೆಯನ್ನು ಹಿಂತೆಗೆದುಕೊಂಡಿವೆ.

ದೆಹಲಿ, ಬೆಂಗಳೂರು, ಮುಂಬೈ ಹಾಗೂ ಚೆನ್ನೈನ ಪ್ರಮುಖ ಆಸ್ಪತ್ರೆಗಳಲ್ಲಿ ಮೆಡಿಕ್ಲೇಮ್ ಪಾಲಿಸಿ ಗಳಿಗೆ ಇನ್ನು ಸೇವೆ ದೊರೆಯುವುದಿಲ್ಲ. ಪಾಲಿಸಿದಾರರು ಇಲ್ಲೇ ಸೇವೆ ಬಯಸಿದರೆ ತಮ್ಮ ಜೇಬಿನಿಂದ ಹಣ ಪಾವತಿ ಮಾಡಿ ನಂತರ ವಿಮಾ ಕಂಪೆನಿಗಳಿಂದ ಪರಿಹಾರ ಪಡೆಯಬಹುದಾಗಿದೆ.

ಆದರೆ ಪೂರ್ಣ ಹಣ ಮರುಪಾವತಿ ಆಗುತ್ತದೆಂಬ ಖಾತರಿಯೇನೂ ಇಲ್ಲ. ವಿಮಾ ಕಂಪೆನಿಗಳು ಈ ಸೌಲಭ್ಯವನ್ನು ವಾಪಸ್ ಪಡೆಯಲು ಇವುಗಳ ದುಬಾರಿ ಬಿಲ್ ಕಾರಣ ಎನ್ನಲಾಗಿದೆ. ಈ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಶ್ರೀಸಾಮಾನ್ಯನಂತೂ ಕನಸಿನಲ್ಲೂ ಕಾಲಿಡಲು ಸಾದ್ಯವಿಲ್ಲ. ಇದೀಗ ವಿಮಾ ಕಂಪೆನಿಗಳಿಗೂ ಇವುಗಳ ಬಿಲ್ ನ ಬಿಸಿ ತಟ್ಟಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

ಮೆಡಿಕ್ಲೇಮ್ ಪಾಲಿಸಿಗಳಿಂದ ವಾರ್ಷಿಕ 6000 ಕೋಟಿ ರೂಪಾಯಿ ಪ್ರೀಮಿಯಂ ಸಂಗ್ರಹವಾಗುತ್ತಿದ್ದು ಇದರಲ್ಲಿ ಸುಮಾರು 1500 ಕೋಟಿ ರೂಪಾಯಿಗಳಷ್ಟು ನಷ್ಟ ಈ ಆಸ್ಪತ್ರೆಗಳ ದುಬಾರಿ ಬಿಲ್ ನಿಂದಾಗಿ ಆಗುತ್ತಿದೆ.

ದೇಶದ 18 ವಿಮಾ ಕಂಪೆನಿಗಳು ದೇಶಾದ್ಯಂತ 3000 ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ನೀಡಿದ್ದು, ಇದರಲ್ಲಿ 350 ಆಸ್ಪತ್ರೆಗಳು ಶೇ 80 ರಷ್ಟು ಕ್ಲೇಮ್ ಗಳನ್ನು ಕಬಳಿಸಿವೆ. ಅದ್ಯಯನದ ಪ್ರಕಾರ ಅನೇಕ ಪ್ರತಿಷ್ಠಿತ ಆಸ್ಪತ್ರೆಗಳು ನಿಗದಿಗಿಂತ ಅಧಿಕ ದರ ವಿಧಿಸಿವೆ.

ವಿಮಾ ಕಂಪೆನಿಗಳು ಇದೀಗ ಶಸ್ತ್ರ ಚಿಕಿತ್ಸೆ ಮಾಡಿದ ವೆಚ್ಚವನ್ನೂ ತಗ್ಗಿಸಿವೆ. ಉದಾಹರಣೆಗೆ ಈ ಹಿಂದೆ ಗಾಲ್ ಬ್ಲಾಡರ್ ಶಸ್ತ್ರ ಚಿಕಿತ್ಸೆಗೆ ವಿಮಾ ಕಂಪೆನಿಗಳ ಸರಪಳಿಯಲ್ಲಿರುವ ಆಸ್ಪತ್ರೆಗಳು 58,000 ಶುಲ್ಕ ವಿಧಿಸುತಿದ್ದವು. ಈಗ ಅದನ್ನು 30 ರಿಂದ 48 ಸಾವಿರ ರುಪಾಯಿ ವರೆಗೆ ನಿಗದಿಪಡಿಸಲಾಗಿದೆ.

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ 35,000 ರುಪಾಯಿ ಶುಲ್ಕ ವಿಧಿಸುತ್ತಿದ್ದು, ಅದನ್ನು ಈಗ ಗರಿಷ್ಟ 24,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಆದರೆ ಆಸ್ಪತ್ರೆಗಳು ಈ ದರ ನಿಗದಿಯನ್ನು ತಿರಸ್ಕರಿಸಿದ್ದರಿಂದ ವಿಮಾ ಕಂಪೆನಿಗಳು ಈ ಪ್ರತಿಷ್ಟಿತ ಆಸ್ಪತ್ರೆಗಳನ್ನು ತಮ್ಮ ಸರಪಳಿಯಿಂದ ಕೈ ಬಿಟ್ಟಿವೆ.

ದೇಶದ ಮೆಡಿಕ್ಲೇಮ್ ಪಾಲಿಸಿಗಳಲ್ಲಿ ಸಂಗ್ರಹವಾಗುವ ವಾರ್ಷಿಕ 6000 ಕೋಟಿ ರೂಪಾಯಿಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ನ ಪಾಲು ಶೇ50 ಆಗಿದ್ದು ಮುಂದಿನ ವರ್ಷ ಮೆಡಿಕ್ಲೇಮ್ ನಿಂದ 9000 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X