ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಸ್ರೋದಿಂದ ಪಿಎಸ್ಎಲ್ ವಿ -ಸಿ15 ಯಶಸ್ವಿ ಉಡಾವಣೆ
ಪಿಎಸ್ ಎಲ್ ವಿ-ಸಿ 15ಭಾರತದ ದೂರಸಂವೇದಿ ಉಪಗ್ರಹ ಕಾರ್ಟೋಸ್ಯಾಟ್ 2ಬಿ, ಅಲ್ಜೀರಿಯಾದ ಅಲ್ ಸ್ಯಾಟ್, ಕೆನಡಾ ಮತ್ತು ಸ್ವಿಟ್ಜರ್ಲೆಂಡಿನ ಎರಡು ನ್ಯಾನೋ ಉಪಗ್ರಹಗಳು ಮತ್ತು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಪಿಕೋ ಉಪಗ್ರಹ ಸೇರಿದಂತೆ ಒಟ್ಟು ಐದು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳಿಸಲಿದೆ.
ಕಾರ್ಟೋಸ್ಯಾಟ್ ಉಪಯೋಗ: ಹೆದ್ದಾರಿಗಳ ಮರುನಿರ್ಮಾಣ, ರಿಂಗ್ ರಸ್ತೆಗಳ ನಿರ್ಮಾಣ, ಮೂಲಸೌಕರ್ಯ ಅಭಿವೃದ್ದ್ಧಿ ಮತ್ತು ನಗರ ಯೋಜನೆಗೆ ಸಹಕಾರಿಯಾಗಲಿದೆ.
ಕಳೆದ ಏಪ್ರಿಲ್ ನಲ್ಲಿ ದೇಶಿಯ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಚಾಲಿತ ಮಹತ್ವಾಕಾಂಕ್ಷಿ ಜಿಎಸ್ಎಲ್ ವಿ-ಡಿ3 ವಿಫಲವಾದ ಬಳಿಕ ಸ್ವದೇಶಿ ನಿರ್ಮಿತ ಇಸ್ರೋ ಪ್ರಯೋಗ ಸಫಲವಾಗಿರುವುದು ಹರ್ಷ ತಂದಿದೆ ಎಂದು ಇಸ್ರೋ ವಕ್ತಾರ ಎಸ್ ಸತೀಶ್ ಹೇಳಿದರು.
Comments
ಇಸ್ರೋ ರಾಕೆಟ್ ಕೆನಡಾ ಭಾರತ ಶ್ರೀಹರಿಕೋಟ ಉಪಗ್ರಹ ಪಿಎಸ್ಎಲ್ ವಿ isro satellite algeria canada rocket sriharikota pslv
Story first published: Monday, July 12, 2010, 18:38 [IST]