ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಷ್ಟಪಾದಿ ಪಾಲ್ ಅಲೆನ್ ಸ್ತುತಿ
ಪಾಲಿಸೆಮ್ಮನು, ಭವಿಷ್ಯವನು ಉಸುರು.
ಕಾಲ್ಚೆಂಡಾಟದಲಿ
ನಿಜ
ನಿನ್ನ
ನುಡಿಯು
ಮೇಲ್ಕೊಂಡಾಡುವೆನು
'ನಿನಗಾರು
ಸರಿಯು?'
ಅಷ್ಟಪಾದಿಯೆ,
ನೀನು
ಈ
ಬುವಿಗೆ
ಇಷ್ಟವಾಗಿಹೆ,
ವಂದಿಸುವೆವೈ
ನಿನಗೆ.
ಅಷ್ಟದಿಕ್ಕುಗಳಲ್ಲು
ಅಹ
ನಿನ್ನ
ಸ್ತುತಿಯು!
ಅಷ್ಟದಿಗ್ಗಜಸಮಾನ
ನಿನ್ನ್
ಮತಿಯು!
ಅಷ್ಟಮಂಗಲಸಹಿತ
ಅರ್ಚಿಸುವೆವ್
ನಿನ್ನ
ಅಷ್ಟಾಂಗಸಹಿತ
ಪೊಡಮಡುವೆವ್
ಚಿನ್ನ!
ಎಷ್ಟು
ಹೊಗಳಿದರೂ
ಕಮ್ಮಿ
ನಿನ್ನನ್ನು
ಕಷ್ಟ
ತಿಳಿವುದು
ನಿನ್ನ
ಅಂತರಂಗವನು
ಜ್ಯೋತಿಷವು
ಶಾಸ್ತ್ರ;
ಅದಲ್ಲ
ಠಸ್ಪುಸ್
ಆದರದನಿಂದು
ನುಡಿವುದು
ಆಕ್ಟೊಪಸ್!
Comments
ಆಕ್ಟೋಪಸ್ ಜ್ಯೋತಿಷ್ಯ ಭವಿಷ್ಯ ಆನಂದರಾಮ ಶಾಸ್ತ್ರೀ ಕನ್ನಡ ಕವನ ಫೀಫಾ ವಿಶ್ವಕಪ್ 2010 octopus astrology prediction fifa world cup 2010 anandarama shastri kannada poem
Story first published: Monday, July 12, 2010, 12:29 [IST]