ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೂಟು ಮುಲ್ಲರ್ ಗೆ,ಚೆಂಡು ಫೊರ್ಲಾನ್ ಗೆ

By Mahesh
|
Google Oneindia Kannada News

Muller strike gold in Fifa WC 2010
ಜೋಹಾನ್ಸ್ ಬರ್ಗ್, ಜು.12: ಫೀಫಾ ವಿಶ್ವಕಪ್ 2010 ಅನ್ನು ಮೊಟ್ಟಮೊದಲ ಬಾರಿಗೆ ಸ್ಪೇನ್ ಎತ್ತಿ ಮುದ್ದಾಡಿದ ಸಂಭ್ರಮದ ಬೆನ್ನಲ್ಲೇ , ಟೂರ್ನಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಟಗಾರರನ್ನು ನೆನೆಯಲೇ ಬೇಕು. ಚಿನ್ನದ ಬೂಟು, ಚೆಂಡು, ಗ್ಲೋವ್ ಸೇರಿದಂತೆ ಹಲವಾರು ಚಿನ್ನದಂಥ ಪ್ರಶಸ್ತಿಗಳನ್ನು ಪಡೆದವರನ್ನು ಅಭಿನಂದಿಸಲೇ ಬೇಕು.

ಆಡಿಡಾಸ್ ಚಿನ್ನದ ಚೆಂಡು: ವಿಶ್ವಕಪ್ ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ಉರುಗ್ವೆ ತಂಡದ 31ವರ್ಷದ ಡಿಯಾಗೊ ಫೊರ್ಲಾನ್ ಆಯ್ಕೆಯಾಗಿದ್ದಾರೆ. ಫೊರ್ಲಾನ್ ಗೆ ಹಾಲೆಂಡ್ ನ ಸ್ನೈಡರ್ ಹಾಗೂ ಸ್ಪೇನ್ ನ ಡೇವಿಡ್ ವಿಲ್ಲಾ ಭಾರಿ ಪೈಪೋಟಿ ನೀಡಿದ್ದರು.

ಆದರೆ, ಟೂರ್ನಿಯಲ್ಲಿ 5 ಗೋಲುಗಳನ್ನು ಬಾರಿಸಿದ್ದೆ ಅಲ್ಲದೆ ಟೂರ್ನಿಯಲ್ಲಿ ಉರುಗ್ವೆ ನಾಲ್ಕನೇ ಸ್ಥಾನ ಗಳಿಸಲು ಕಾರಣರಾದರು. ಸಹಜವಾಗಿ ಮಾಧ್ಯಮದವರು ಚಿನ್ನದ ಚೆಂಡು ಪಡೆಯುವ ಅರ್ಹತೆ ಫೊರ್ಲಾನ್ ಗೆ ಮಾತ್ರ ಇದೇ ಎಂದು ಅಭಿಮತ ವ್ಯಕ್ತಪಡಿಸಿದರು.

ಅಡಿಡಾಸ್ ರಜತ ಚೆಂಡು: ವೆಸ್ಲೆ ಸ್ನೈಡರ್(ಹಾಲೆಂಡ್)
ಅಡಿಡಾಸ್ ಕಂಚಿನ ಚೆಂಡು : ಡೇವಿಡ್ ವಿಲ್ಲಾ(ಸ್ಪೇನ್)

ಅಡಿಡಾಸ್ ಚಿನ್ನದ ಬೂಟು ಯಾರಿಗೆ: ಫೈನಲ್ ಪಂದ್ಯಕ್ಕೂ ಮುನ್ನ ಜರ್ಮನಿಯ ಮುಲ್ಲರ್, ಉರುಗ್ವೆಯ ಫೊರ್ಲಾನ್, ಹಾಲೆಂಡ್ ನ ಸ್ನೈಡರ್, ಸ್ಪೇನ್ ನ ಡೇವಿಡ್ ವಿಲ್ಲಾ ಕೂಡಾ ಚಿನ್ನದ ಬೂಟು ಸ್ಪರ್ಧೆಯಲ್ಲಿದ್ದರು. ಆದರೆ, ಮುಲ್ಲರ್ ಉರುಗ್ವೆಯ ವಿರುದ್ಧದ ಪಂದ್ಯದಲ್ಲಿ ಮಹತ್ವದ ಗೋಲು ಗಳಿಸಿ, ಚಿನ್ನದ ಬೂಟು ಗೆಲ್ಲಲು ಕಾರಣವಾಯಿತು.

ಅಡಿಡಾಸ್ ರಜತ ಬೂಟು: ಡೇವಿಡ್ ವಿಲ್ಲಾ( 5 ಗೋಲು)
ಅಡಿಡಾಸ್ ಕಂಚಿನ ಬೂಟು: ವೆಸ್ಲೆ ಸ್ನೈಡರ್(5ಗೋಲು)

ಅಡಿಡಾಸ್ ಚಿನ್ನದ ಗೋವ್ಲ್: ಐಕರ್ ಕ್ಯಾಸಿಲ್ಲಾಸ್(ಸ್ಪೇನ್)
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಎರಡೇ ಎರಡು ಗೋಲುಗಳನ್ನು ಬಿಟ್ಟ ಕ್ಯಾಸಿಲ್ಲಾಸ್, ಫೈನಲ್ಸ್ ನಲ್ಲೂ ಸ್ನೈಡರ್ ಹಾಗೂ ರೊಬೆನ್ ಗೆ ಗೋಲು ಗಳಿಸುವ ಅವಕಾಶ ತಪ್ಪಿಸಿದರು. ಕ್ವಾಟರ್ ಫೈನಲ್ಸ್ ನಲ್ಲಿ ಪೆರುಗ್ವೆಯ ಕಾರ್ಡೊಜೊ ಅವರ ಪೆನಾಲ್ಟಿ ಕಿಕ್ ಸೇವ್ ಮಾಡಿದ್ದು, ಸೆಮೀಸ್ ನಲ್ಲಿ ಜರ್ಮನಿಯ ಟೋನಿ ಕ್ರೂಸ್, ಟ್ರೋಕೊಸ್ಕಿ ದಾಳಿಯನ್ನು ತಡೆ ಹಿಡಿದಿದ್ದು ಕ್ಯಾಸಿಲ್ಲಾಸ್ ಅವರ ಸಾಧನೆ.ಅಲ್ಲದೆ ಸ್ಪೇನ್ ತಂಡದ ನಾಯಕನಾಗಿ ಫೈನಲ್ಸ್ ನಲ್ಲಿ ಗೆಲುವಿಗೂ ಕಾರಣರಾದರು.

ಹ್ಯುಂಡೈಅತ್ಯುತ್ತಮ ಆಟಗಾರ: ಥಾಮಸ್ ಮುಲ್ಲರ್
ಬಾಯರ್ ಮ್ಯೂನಿಚ್ ಮುಂಪಡೆ ಆಟಗಾರ 20 ವರ್ಷದ ಥಾಮಸ್ ಮುಲ್ಲರ್ ಟೂರ್ನಿಯ ಶೋಧ ಎಂದರೆ ತಪ್ಪಾಗಲಾರದು. ಪ್ರತಿ ವಿಶ್ವಕಪ್ ನಲ್ಲೂ ಹೊಸ ಸ್ಟಾರ್ ಉದಯವಾಗುವುದು ಮಾಮೂಲಿ. ವಿಶ್ವಕಪ್ ನಲ್ಲಿ ಐದು ಗೋಲುಗಳಿಸಿದ ಮುಲ್ಲರ್, ಒಂದು ಪಂದ್ಯ ನಿಷೇಧವನ್ನು ಅನುಭವಿಸಿದ್ದರು.ಯುವ ಪಡೆಯೊಂದಿಗೆ ವಿಶ್ವಕಪ್ ಗೆ ಬಂದಿದ್ದ ಜರ್ಮನ್ನಿಗೆ ಭವಿಷ್ಯದ ಆಟಗಾರ ಒಬ್ಬ ದೊರೆತಂತೆ ಆಗಿದೆ.

ಫೀಫಾ ಫ್ಲೇ ರ್ ಪ್ಲೇ ಪ್ರಶಸ್ತಿ: ಸ್ಪೇನ್
ಪ್ರಶಸ್ತಿ ವಿಜೇತ ತಂಡ ಸ್ಪೇನ್, ಅಭಿಮಾನಿಗಳ, ಮಾಧ್ಯಮದವರ ಹಾಗೂ ಫೀಫಾ ಅಧಿಕಾರಿಗಳು, ರೆಫ್ರಿಗಳ ಮೆಚ್ಚುಗೆ ಪಡೆದಿದ್ದಲ್ಲಿ ಅಚ್ಚರಿಯೇನಿಲ್ಲ. ಟೂರ್ನಿಯುದ್ದಕ್ಕೂ ಶಿಸ್ತುಬದ್ಧ ಪ್ರದರ್ಶನ ನೀಡಿದ ಸ್ಪೇನ್ ತಂಡ ಫುಟ್ಬಾಲ್ ಆಟವನ್ನು ಸುಂದರ ಕ್ರೀಡೆ ಎಂದು ಎಲ್ಲರೂ ಕರೆಯುವುದಕ್ಕೆ ಉತ್ತರ ನೀಡಿದರು. ಸ್ಪೇನ್ ಚಾವಿ ಫೈನಲ್ ಗೆ ಕಾಲಿಟ್ಟಾಗ ಸರಿ ಸುಮಾರು 520ಕ್ಕೂ ಹೆಚ್ಚು ಪಾಸ್ ನೀಡಿದ್ದರು ಎಂದರೆ ಸ್ಪೇನ್ ಆಟಗಾರರ ಯಶಸ್ಸಿನ ರಹಸ್ಯ ಅರಿಯಬಹುದು.

ಟೂರ್ನಿಯಲ್ಲಿ 2 ಹಳದಿ ಕಾರ್ಡ್ ಮಾತ್ರ ಪಡೆದ ದ. ಕೊರಿಯಾ ತಂಡ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದು ಪರಿಗಣಿಸಲಾಯಿತು.8 ಹಳದಿ ಕಾರ್ಡ್ ಪಡೆದರೂ ಸ್ಪೇನ್, ಫೈನಲ್ ವರೆಗೂ ತೋರಿದ ಶಿಸ್ತು ಪ್ರಶಸ್ತಿಯನ್ನು ತಂದುಕೊಟ್ಟಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X