ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಜಿ ಅಂದ್ರೆ ಕ್ಯಾಜಿ ಎನ್ನುವ ಸಂಸದರಿಗೂ ಫೋನ್!

By Mahesh
|
Google Oneindia Kannada News

3G facility for MPs: Parl committee‎
ನವದೆಹಲಿ, ಜು.12: ಇತ್ತೀಚೆಗಷ್ಟೇ ಸಂಸದರ ವೇತನದಲ್ಲಿ ತೀವ್ರ ಏರಿಕೆಯ ಪ್ರಸ್ತಾಪ ಮಾಡಿರುವ ಸಂಸದೀಯ ಸಮಿತಿ, ಈಗ ಸಂಸದರಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಧಾರಿತ 3ಜಿ ತಂತ್ರಾಜ್ಞಾನವುಳ್ಳ ಮೊಬೈಲ್ ಫೋಣ್ ಸೌಲಭ್ಯವನ್ನು ಒದಗಿಸಬೇಕೆಂದು ಶಿಫಾರಸು ಮಾಡಿದೆ.

ಆದರೆ, ದುರಂತವೆಂದರೆ ಹೆಚ್ಚಿನ ನಮ್ಮ ನೇತಾರರಿಗೆ 3ಜಿ ಎಂದರೇನು ಎಂದು ತಿಳಿದಿಲ್ಲ. ಇನ್ನೂ ಗ್ರಾಮೀಣ ಭಾಗದ ಪ್ರತಿನಿಧಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಸಂಸದರು ಇಷ್ಟಪಡುತ್ತಾರೆ. ಅದು ಅವರಿಗೆ ಲಾಭದಾಯಕ ಕೂಡಾ. ತಂತ್ರಜ್ಞಾನದ ಬಗ್ಗೆ ಅರಿವಿಲ್ಲದಿದ್ದರೂ ಅಧುನಿಕ ಸೌಲಭ್ಯ ಬೇಕಂತೆ. ಅದನ್ನು ಸಮಾಜ ಹಾಗೂ ದೇಶದ ಉದ್ಧಾರಕ್ಕೆ ಬಳಸುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ಸಂಸದರೊಬ್ಬರು.

ಸಂಸದರಿಗೆ 3ಜಿ ಸೌಲಭ್ಯ ಒದಗಿಸುವ ವಿಚಾರವನ್ನುಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಪರಿಶೀಲಿಸುತ್ತಿದೆ ಎಂದು ಲೋಕಸಭಾ ಕಾರ್ಯಾಲಯ ಹೇಳಿದೆ. 3ಜಿ ಪ್ಯಾಕೇಜ್‌ಗೆ ಮತ್ತು ಆ ಸೌಲಭ್ಯದ ಹೆಚ್ಚುವರಿ ಬಳಕೆಗೆ ತಗಲುವ ವೆಚ್ಚಗಳನ್ನು ಪ್ರಸಕ್ತ ಸಂಸದರಿಗೆ ಪ್ರತಿವರ್ಷ ಲಭ್ಯವಾಗುವ 1,50,000 ಉಚಿತ ಕರೆಗಳಿಗೆ ತಗಲುವ ವೆಚ್ಚದ ಮಿತಿಯಲ್ಲಿ ಹೊಂದಾಣಿಕೆ ಮಾಡಬಹುದಾಗಿದೆ.

ಎಂಟಿಎನ್‌ಎಲ್/ಬಿಎಸ್‌ಎನ್‌ಎಲ್ ಒದಗಿಸಿರುವ ಈ ಹೊಸ ಸೌಲಭ್ಯ ಸಂಸದರಿಗೆ ಐಚ್ಛಿಕವಾಗಿರುತ್ತದೆ. ಆದರೆ 3ಜಿ ಸೌಲಭ್ಯ ಲಭಿಸುವ 3ಜಿ ಹ್ಯಾಂಡ್‌ಸೆಟ್‌ಗೆ ತಗಲುವ ವೆಚ್ಚವನ್ನು ಸದಸ್ಯರೇ ಭರಿಸಬೇಕಾಗುತ್ತದೆ. ಸಂಸದರ ಮಾಸಿಕ ವೇತನವನ್ನು 16,000 ರೂ. ಗಳಿಂದ 80,000 ರೂ.ಗಳಿಗೆ ಏರಿಸಬೇಕೆಂದು ಸಮಿತಿಯು ಇತ್ತೀಚೆಗಷ್ಟೇ ಶಿಫಾರಸು ಮಾಡಿತ್ತು.

ಸಂಸದರ ವೇತನ ಮತ್ತು ಭತ್ಯೆಗಳಲ್ಲಿ ಮಾಡಬೇಕಾದ ಹೆಚ್ಚಳದ ಪ್ರಮಾಣವನ್ನು ನಿರ್ಧರಿಸಲಾಗಿಲ್ಲ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಈ ಸಂಬಂಧ ಮಸೂದೆಯೊಂದನ್ನು ಮಂಡಿಸುವ ನಿರೀಕ್ಷೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್ ಹೇಳಿದ್ದಾರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X