ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನ್ನಿಗೆ ಕಂಚು, ಉರುಗ್ವೆ ದಿಟ್ಟ ಹೋರಾಟ

By Mahesh
|
Google Oneindia Kannada News

FIFA World Cup 2010 : Germany pip Uruguay to third place
ಪೋರ್ಟ್ ಎಲಿಜಬೆತ್ , ಜು.11: ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಜರ್ಮನ್ನರು, ನಾಲ್ಕನೇ ಬಾರಿ ಮೂರನೇ ಸ್ಥಾನವನ್ನು ಪಡೆದು ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ದಿಟ್ಟ ಹೋರಾಟದ ನಡುವೆಯೂ ಉರುಗ್ವೆ ತಂಡ ಜರ್ಮನಿಗೆ 2-3ಅಂತರದಿಂದ ಶರಣಾಯಿತು.

ನೆಲ್ಸನ್ ಮಂಡೇಲಾ ಬೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಜರ್ಮನಿಗೆ ಉತ್ತ್ತಮ ಪೈಪೋಟಿ ನೀಡಿದ ದಕ್ಷಿಣ ಅಮೆರಿಕಾದ ಏಕೈಕ ತಂಡ ಉರುಗ್ವೆ, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಎರಡೂ ತಂಡಗಳು ಆಕ್ರಮಣಕಾರಿ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದವು. ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಹೆಚ್ಚು ಗೋಲುಗಳು ದಾಖಲಾಗುತ್ತದೆ ಎಂಬ ಇತಿಹಾಸ ಮತ್ತೆ ಮರುಕಳಿಸಿತು.

ಗಾಯಳು ಮಿರಸ್ಲೋವ್ ಕ್ಲೋಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಜರ್ಮನಿಗೆ ಯುವ ಆಟಗಾರ ಥಾಮಸ್ ಮುಲ್ಲರ್ 18 ನೇ ನಿಮಿಷದಲ್ಲಿ ಮೊದಲ ಯಶ ತಂದುಕೊಟ್ಟರು. ಅದ್ಭುತ ಆಟ ಪ್ರದರ್ಶನ ನೀಡಿದ ಮುಲ್ಲರ್ ಕೊನೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು.

ಆರು ಪಂದ್ಯಗಳಿಂದ ಐದು ಗೋಲು ಗಳಿಸಿ ಚಿನ್ನದ ಬೂಟಿಗೆ ಸ್ಪರ್ಧಿಯಾಗಿ ಕೂಡಾ ಮುಲ್ಲರ್ ನಿಂತಿದ್ದಾರೆ. ಅಲ್ಲದೆ, ಒಂದು ವೇಳೆ ಚಿನ್ನದ ಬೂಟೂ ಮಿಸ್ ಆದರೂ, ವಿಶ್ವಕಪ್ ನ ಯುವ ಆಟಗಾರ ಪ್ರಶಸ್ತಿಯಂತೂ 20ರ ಹರೆಯ ಮುಲ್ಲರ್ ಗೆ ಸಿಗುವುದು ಗ್ಯಾರಂಟಿ.

ಉರುಗ್ವೆ ಪರ ಎಡಿಸನ್ ಕವಾನಿ 28 ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ನಂತರ ಉರುಗ್ವೆಯ ಅದ್ಭುತ ಆಟಗಾರಡಿಯಗೋ ಫೊರ್ಲಾನ್ 51 ನೇ ನಿಮಿಷದಲ್ಲಿ ಬಲ ಬದಿಯಿಂದ ಬಂದ ಪಾಸ್ ಅನ್ನು ಬಲಗಾಲಿನಿಂದ ಒದ್ದು ಗೋಲುಗಳಿಸಿ ಮುನ್ನಡೆ ಒದಗಿಸಿದರು. ಈ ಮೂಲಕ ಫೊರ್ಲಾನ್ ಕೂಡಾ ಟೂರ್ನಿಯಲ್ಲಿ 5ಗೋಲು ಗಳಿಸಿದವರ ಪಟ್ಟಿಗೆ ಸೇರಿದರು.

ಆದರೆ, ಇದಾದ ಕೆಲವೇ ನಿಮಿಷದಲ್ಲಿ ಜರ್ಮನಿ ಸಮಬಲ ಮಾಡಿಕೊಂಡಿತು. 56 ನೇ ನಿಮಿಷದಲ್ಲಿ ಜಾಸನ್ ಗೋಲುಗಳಿಸಿ, ಪಂದ್ಯದ ರೋಚಕತೆ ಹೆಚ್ಚಿಸಿದರು. ಆದರೆ ಕೊನೆಗೆ ಖದಿರಾ 82 ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಹೊಡೆದು ಜರ್ಮನಿಗೆ ಮೂರನೇ ಸ್ಥಾನ ಖಚಿತಪಡಿಸಿದರು.

ಉರುಗ್ವೆ ಸಮಬಲ ಹೋರಾಟ: ಫುಸಿಲ್ ಹಾಗೂ ಸೊರೆಜ್ ತಂಡಕ್ಕೆ ಮರಳಿದ್ದರಿಂದ ಉತ್ತಮ ಹೋರಾಟ ನೀಡುವಲ್ಲಿ ಉರುಗ್ವೆ ಸಫಲವಾಯಿತು. ಕೊನೆ ಸೆಕೆಂಡ್ ವರೆಗೂ ಉರುಗ್ವೆ ಆಸೆ ಜೀವಂತವಾಗಿತ್ತು. ಹ್ಯಾಂಡ್ ಆಫ್ ಗಾಡ್ ಖ್ಯಾತಿಯ ಸೊರೆಜ್ ಜರ್ಮನಿಯ ಡಿ ಅಂಗಳದಲ್ಲಿ ಎಡವಿಬಿದ್ದು, ಫ್ರೀಕಿಕ್ ಪಡೆದರು. ಪಂದ್ಯಮುಗಿಯಲು ಕೇವಲ 20ಸೆಕೆಂಡುಗಳು ಮಾತ್ರ ಇತ್ತು.

ಉರುಗ್ವೆ ಪರ ಫೊರ್ಲಾನ್ ಅಂತಿಮ್ ಕಿಕ್ ತೆಗೆದುಕೊಂಡರೂ, ಗೋಲ್ ಪೋರ್ಸ್ ನ ಅಂಚಿಗೆ ತಾಕಿ ಹಾರಿ ಹೋದಾಗ, ಅಭಿಮಾನಿಗಳಿಗೆ ನಿರಾಶೆಯಾಯಿತು. ಆದರೆ, ಉರುಗ್ವೆ ಉತ್ತಮ ಪ್ರದರ್ಶನದೊಂದಿಗೆ ಎಲ್ಲರ ಮೆಚ್ಚಿಗೆ ಪಡೆಯಿತು. ಅಂದ ಹಾಗೆ, ಆಕ್ಟೋಪಸ್ ಸೂಚಿಸಿದ್ದಂತೆ ಜರ್ಮನಿ ಗೆಲುವು ಸಾಧಿಸಿದ್ದು,ಅಭಿಮಾನಿಗಳಿಗೆ ಖುಷಿ ತಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X