• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಗಾರದ ಚೆಂಡು ಯಾರ ಪಾಲಾಗಲಿದೆ?

By Prasad
|

ಜೋಹಾನ್ಸ್ ಬರ್ಗ್, ಜು. 10 : ಫೀಫಾ ವಿಶ್ವಕಪ್ 2010ರ ಅತ್ಯುತ್ತಮ ಆಟಗಾರ ಯಾರು? ಬಂಗಾರದ ಚೆಂಡು ಯಾವ ರಾಷ್ಟ್ರದ ಆಟಗಾರನಿಗೆ ದಕ್ಕಲಿದೆ?

ಜುಲೈ 11ರಂದು ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯವನ್ನು ಎದುರು ನೋಡುತ್ತಿರುವ ಫುಟ್ಬಾಲ್ ಪ್ರೇಮಿಗಳಲ್ಲಿ ಈ ಪ್ರಶ್ನೆಗಳು ಭಾರೀ ಕುತೂಹಲ ಕೆರಳಿಸಿವೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 11ರ ರಾತ್ರಿ 12 ಗಂಟೆಗೆ ನಡೆಯಲಿರುವ ನೆದರ್ಲ್ಯಾಂಡ್ ಮತ್ತು ಸ್ಪೇನ್ ನಡುವಿನ ಫೈನಲ್ ಕಾಳಗದ ನಂತರವಷ್ಟೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

ಕಣದಲ್ಲಿರುವ ಹತ್ತು ಆಟಗಾರರಲ್ಲಿ ಸಿಂಹಪಾಲು ಫೈನಲ್ ತಲುಪಿರುವ ಸ್ಪೇನ್ ತಂಡದ ಆಟಗಾರರು ಪಡೆದಿದ್ದಾರೆ. ಹತ್ತರಲ್ಲಿ ಮೂರು ಸ್ಥಾನಗಳು ಸ್ಪೇನ್ ಪಾಲಾಗಿದೆ. ಸ್ಪೇನ್ ಪರ ಡೆವಿಡ್ ವಿಲ್ಲಾ, ಆಂಡ್ರೆಸ್ ಇನೀಸ್ಟಾ ಮತ್ತು ಕ್ಸೇವಿ ನಾಮನಿರ್ದೇಶನಗೊಂಡಿದ್ದರೆ, ಫೈನಲ್ ತಲುಪಿರುವ ನೆದರ್ಲ್ಯಾಂಡಿನಿಂದ ವೆಸ್ಲಿ ಸ್ನೀಜರ್ ಮತ್ತು ಅರ್ಜೆನ್ ರಾಬೆನ್ ಗೋಲ್ಡನ್ ಬಾಲ್ ಮೇಲೆ ಕಣ್ಣಿಟ್ಟಿದ್ದಾರೆ.

ಮೂರನೇ ಸ್ಥಾನಕ್ಕಾಗಿ ಉರುಗ್ವೆ ಜೊತೆ ಸೆಣಸಲಿರುವ ಜರ್ಮನಿ ಪರ ಮೇಸಟ್ ಓಜಿಲ್ ಮತ್ತು ಬಸ್ಟಿಯಾನ್ ಹತ್ತರಲ್ಲಿ ಇಬ್ಬರಾಗಿದ್ದಾರೆ. ಇಬ್ಬರೂ ಮಿಡ್ ಫೀಲ್ಡರ್ ಗಳು ಆಕರ್ಷಕ ಆಟದಿಂದಾಗಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದರು. ಉರುಗ್ವೆಯ ಮುನ್ಪಡೆ ಆಟಗಾರ ಡೀಗೊ ಫೋರ್ಲಾನ್ ಕೂಣ ಕಣದಲ್ಲಿದ್ದಾರೆ. ಘಾನಾದ ಗ್ಯಾನ್ ಮತ್ತು ಅರ್ಜೆಂಟೀನಾದ ಮೆಸ್ಸಿ ಉಳಿದವರಿಗೆ ಸ್ಪರ್ಧೆ ನೀಡುವುದು ಖಚಿತ.

ಭಾನುವಾರ ರಾತ್ರಿ ನಡೆಯಲಿರುವ ಫೈನಲ್ ಪಂದ್ಯದ ನಂತರವಷ್ಟೇ ಗೋಲ್ಡನ್ ಬಾಲ್ ಯಾರ ಪಾಲಾಗಲಿದೆ ಎಂದು ತಿಳಿಯಲಿದೆ.

ಕಣದಲ್ಲಿರುವವರ ಪಟ್ಟಿ ಕೆಳಗಿನಂತಿದೆ

1. ಡೀಗೊ ಫೋರ್ಲಾನ್ - ಉರುಗ್ವೆ

2. ಗ್ಯಾನ್ - ಘಾನಾ

3. ಆಂಡ್ರೆಸ್ ಇನೀಸ್ಟಾ - ಸ್ಪೇನ್

4. ಲಿಯೋನೆಲ್ ಮೆಸ್ಸಿ - ಅರ್ಜೆಂಟೀನಾ

5. ಮೇಸಟ್ ಓಜಿಲ್ - ಜರ್ಮನಿ

6. ಅರ್ಜೆನ್ ರಾಬೆನ್ - ನೆದರ್ಲ್ಯಾಂಡ್ಸ್

7. ಬಸ್ಟಿಯಾನ್ - ಜರ್ಮನಿ

8. ವೆಸ್ಲಿ ಸ್ನೀಜರ್ - ನೆದರ್ಲ್ಯಾಂಡ್ಸ್

9. ಡೆವಿಡ್ ವಿಲ್ಲಾ - ಸ್ಪೇನ್

10. ಕ್ಸೇವಿ - ಸ್ಪೇನ್

ಬಂಗಾರದ ಚೆಂಡು ಅತ್ಯುತ್ತಮ ಆಟಗಾರನಿಗೆ ನೀಡಿದರೆ, ಬಂಗಾರದ ಬೂಟು ಅತಿ ಹೆಚ್ಚು ಗೋಲು ಹೊಡೆದ ಆಟಗಾರನ ಪಾಲಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X