ಹಾಲೆಂಡ್ ಗೆ ವಿಶ್ವಕಪ್, ಇದು ಗಿಣಿಶಾಸ್ತ್ರ!
ಮಲೇಷ್ಯಾದ ಏಳು ವರ್ಷದ ಈ ಗಿಳಿ ಈಗ ಎಲ್ಲರ ಮನೆಮಾತಾಗಿದೆ. ಹಾಲೆಂಡ್, ಉರಗ್ವೆ, ಸ್ಪೇನ್ ಮತ್ತು ಜರ್ಮನಿ ತಂಡಗಳು ಉಪಾಂತ್ಯ ಪ್ರವೇಶಿಸುತ್ತವೆ ಮತ್ತು ಸ್ಪೇನ್ ಜರ್ಮನಿಯನ್ನು ಸೋಲಿಸಿ ಫೈನಲ್ ತಲುಪುತ್ತದೆ ಎಂದು ಭವಿಷ್ಯ ನುಡಿದಿತ್ತಂತೆ. ಹಾಲೆಂಡ್ ತಂಡ ಸ್ಪೇನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದು ಕೊಳ್ಳಲಿದೆ ಎಂದು ಗಿಳಿ ಭವಿಷ್ಯ ನುಡಿದಿದೆ. ಈ ಭವಿಷ್ಯ ಕೂಡ ನಿಜವಾಗುತ್ತದೆ ಎಂದು ಗಿಳಿಯ ಮಾಲೀಕ ಮುನಿಯಪ್ಪನ್ ಆಶಾವಾದ ಹೊಂದಿದ್ದಾರೆ.
ಫುಟ್ ಬಾಲ್ ಅಲ್ಲದೆ ಸಾರ್ವಜನಿಕರ ಭವಿಷ್ಯವನ್ನು ಕೂಡ ಈ ಗಿಳಿ ನುಡಿಯುತ್ತದೆ. ಮದುವೆ, ಕೆಲಸ, ವೈವಾಹಿಕ ಜೀವನದ ಬಗ್ಗೆ ಕೂಡ ಭವಿಷ್ಯ ನುಡಿಯುತ್ತದೆ. ಈ ಗಿಳಿ ತನ್ನ ಮಾಲೀಕನೊಂದಿಗೆ ಸಿಂಗಾಪುರದ ತಮಿಳಿಗರು ಅಧಿಕ ಸಂಖ್ಯೆಯಲ್ಲಿರುವ 'ಲಿಟಲ್ ಇಂಡಿಯಾ' ಜಿಲ್ಲೆಯಲ್ಲಿ ವಾಸವಾಗಿದೆ.
ಗಿಣಿಶಾಸ್ತ್ರ ಸುಳ್ಳಾದರೆ? : ತಮ್ಮ ದೇಶದ ವಿರುದ್ಧ ಜ್ಯೋತಿಷ್ಯ ನುಡಿದಿದ್ದಕ್ಕಾಗಿ ಅಕ್ಟೋಪಸ್ ವಿರುದ್ಧ ಜರ್ಮನ್ನರು ಕೆಂಡ ಕಾರುತ್ತಿದ್ದಾರೆ. ಅದನ್ನು ತಿಂದು ತೀರ್ಥ ಕುಡಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ, ಮಾತಾಡುವ ಸಿಂಗಪುರದ ಗಿಣಿ ಜ್ಯೋತಿಷ್ಯ ಸುಳ್ಳಾದರೆ? ಅದು ಯಾರ ಕೈಗೂ ಸಿಗದೆ ಹಾರಿ ಹೋಗಲಿ.