ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಚಿ ಬಿತ್ತು ಎಲ್ಲಾ ಉಡುಗೆ ಲಾರಿಸ್ಸಾ ಆದಳು ಬೆತ್ತಲೆ

By Mahesh
|
Google Oneindia Kannada News

Model Larissa Riquelme strips naked for Paraguay, source: http://www.metro.co.uk/
ಅಸ್ಸಾನಿಯಾನ್, ಜು.9: ಪ್ರಪ್ರಥಮ ಬಾರಿಗೆ ವಿಶ್ವಕಪ್ ನ ಕ್ವಾಟರ್ ಫೈನಲ್ ಹಂತ ತಲುಪಿದ್ದ ಪೆರುಗ್ವೆ ತಂಡ, ಪ್ರಬಲ ಸ್ಪೇನ್ ವಿರುದ್ಧ ಸೋಲುಂಡಾಗ, ಅಭಿಮಾನಿಗಳಿಗೆ ಎರಡು ಕಾರಣಕ್ಕೆ ಭಾರಿ ನಿರಾಸೆಯಾಯಿತು. ಒಂದು ಪೆರುಗ್ವೆ ಮುಂದಿನ ಹಂತಕ್ಕೆ ತಲುಪದೆ ಟೂರ್ನಿಯಿಂದ ನಿರ್ಗಮಿಸಿದ್ದು, ಇನ್ನೊಂದು, ಲಾರಿಸ್ಸಾ ರಿಕ್ವೆಲ್ಮೆ ಬೆತ್ತಲೆ ಓಟ ಮಿಸ್ ಅಯ್ತಲ್ಲ ಎಂದು.

ಆದರೆ, ನಿರಾಶೆಯಾಗುವ ಕಾಲ ದೂರಾಗಿದೆ. ಲಾರಿಸ್ಸಾ ಆಗಲೇ, ಪೆರುಗ್ವೆಯ ಪತ್ರಿಕೆಯೊಂದಕ್ಕೆ ಸಂಪೂರ್ಣ ಬೆತ್ತಲೆ ಫೋಸ್ ಕೊಟ್ಟು 'Job Done' ಎಂದು ಘೋಷಿಸಿದ್ದಾಳೆ. ಇನ್ನೂ ಬೆತ್ತಲೆ ಓಟ ಒಂದೇ ಬಾಕಿ.

ಪೆರುಗ್ವೆಯ ಎಲ್ಲಾ ಪಂದ್ಯಗಳಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಚ್ಚೆದ್ದು ಕುಣಿದು ತಂಡವನ್ನು ಹುರಿದುಂಬಿಸಿದ್ದ 24 ರ ಹರೆಯದ ರೂಪದರ್ಶಿ ಲಾರಿಸ್ಸಾ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆ. 'ಪೆರುಗ್ವೆ ವಿಶ್ವಕಪ್ ಗೆಲ್ಲದೇ ಹೊದರೂ ಚಿಂತೆಯಿಲ್ಲ. ಕ್ವಾಟರ್ ಫೈನಲ್ಸ್ ಹಂತ ತಲುಪಿ ಸಾಧನೆ ಮೆರೆದಿದೆ. ದೇಶದ ಅಪ್ರತಿಮ ಆಟಗಾರರಿಗೆ ಹಾಗೂ ಪೆರುಗ್ವೆ ಅಭಿಮಾನಿಗಳಿಗಾಗಿ ನನ್ನ ಬೆತ್ತಲೆ ಫೋಸ್ ಕಾಣಿಕೆಯಾಗಿ ನೀಡುತ್ತಿರುವೆ' ಎಂದಿದ್ದಾಳೆ ಬೋಲ್ಡ್ ಹುಡ್ಗಿ.

ವಿಶ್ವಕಪ್ ಪಂದ್ಯಾವಳಿಯ ವೇಳೆ ಲಾರಿಸ್ಸಾ ತನ್ನ ಕುಂಭಕುಚಗಳ ಮಧ್ಯದಲ್ಲಿ ಮೊಬೈಲ್ ಫೋನ್ ಅನ್ನು ಭದ್ರವಾಗಿರಿಸಿಕೊಂಡು ಛಾಯಾಗ್ರಾಹಕರ ಗಮನ ಸೆಳೆದಿದ್ದಳು. ಪೆರುಗ್ವೆ ವಿಶ್ವಕಪ್ ಗೆದ್ದರೆ ಮೈಯೆಲ್ಲಾ ಪೆರುಗ್ವೆ ಬಾವುಟದ ಬಣ್ಣ ಬಳಿದುಕೊಂಡು ಹುಟ್ಟುಡುಗೆಯಲ್ಲಿ ವಿಜಯೋತ್ಸವದ ಓಟ ಓಡುವುದಾಗಿ ಘೋಷಿಸಿದ್ದಳು.

ಲಾರಿಸ್ಸಾಳ ಬೆತ್ತಲೆ ಓಟದ ಘೋಷಣೆಗೂ ಮುನ್ನ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಕೂಡಾ ಇದೇ ರೀತಿ ಘೋಷಣೆ ಮಾಡಿದ್ದರು. ಅರ್ಜೆಂಟೀನಾ ಗೆದ್ದರೆ ಬ್ಯುನೆಸ್ ಐರೀಸ್ ನ ಬೀದಿಗಳಲ್ಲಿ ನಗ್ನವಾಗಿ ಓಡುತ್ತೇನೆ ಎಂದಿದ್ದರು.

ತನ್ನ ಬೆತ್ತಲೆ ಓಟದ ದಿನಾಂಕವನ್ನು ಇನ್ನೂ ಈಕೆ ಪ್ರಕಟಿಸಿಲ್ಲ. Diario Popular ಪತ್ರಿಕೆಯ ಮುಖಪುಟದಲ್ಲಿ ಬೆತ್ತಲೆಯಾಗಿ ನಿಂತಿರುವ ಲಾರಿಸ್ಸಾ ಎದೆಯ ಮೇಲೆ 'icomplio!'(ಹಾಗಂದ್ರೆ 'job Done' ) ನಲ್ಲಿ ಲೇಬಲ್ ಹಾಕಲಾಗಿದೆ. ವಿಶ್ವಕಪ್ ನಲ್ಲಿ ಪ್ರಮುಖ ತಂಡಗಳ ನಿರ್ಗಮನದಿಂದ ಕೊಂಚ ಸಪ್ಪಗಾಗಿದ್ದ ಅಭಿಮಾನಿಗಳ ಪಾಲಿಗೆ ಲಾರಿಸ್ಸಾ ಹಾಟ್ ಹಾಟ್ ಆಗಿ ಪ್ರತ್ಯಕ್ಷಳಾಗುತ್ತಿದ್ದಾಳೆ.

ಫ್ಯಾಷನ್ ಲೋಕದಲ್ಲಿ ಚಾಲ್ತಿಯಲ್ಲಿರುವ ಒಳಉಡುಪುಗಳ ಜಾಹೀರಾತುಗಳ ರೂಪದರ್ಶಿ ಲಾರಿಸ್ಸಾ ಮಾಡುತ್ತಿರುವ ಸ್ಟಂಟ್ ಇದು ಎಂದು ವಿರೋಧಿಗಳ ಅಂಬೋಣ. ಆದರೆ, ರಸಿಕರ ಪಾಲಿಗೆ ಲಾರಿಸ್ಸಾ ಅಮೃತವಾಹಿನಿಯಾಗಿ ಸದಾ ತೆರೆದೆದೆಯ ದರ್ಶನ ನೀಡುವುದಂತೂ ತಪ್ಪುವುದಿಲ್ಲ.

ಡಚ್ಚರಿಗೆ ಕಾಮಯೋಗ: ಹಾಲೆಂಡಿನ ನೀಲಿಚಿತ್ರಗಳ ನಾಯಕಿ ಬೊಬ್ಬಿ ಎಡೆನ್ ಕೂಡಾ ಡಚ್ ರಸಿಕರ ಮನ ತಣಿಸಲು ಮುಂದೆ ಬಂದಿದ್ದು, ನೆದರ್ಲೆಂಡ್ ವಿಶ್ವಕಪ್ ಗೆದ್ದಿದ್ದೇ ಆದರೆ, ಟ್ವಿಟ್ಟರ್ ನಲ್ಲಿ ನನ್ನ ಹಿಂಬಾಲಕರಿಗೆಲ್ಲ ಉಚಿತವಾಗಿ 'ಓರಲ್ ಸೆಕ್ಸ್' ಸೇವೆ ನೀಡುವೆ ಎಂಬ ಕಾಮ ಸಂದೇಶ ಸಾರಿದ್ದಾಳೆ. ಎಡೆನ್ ಈ ರೀತಿ ಟ್ವೀಟ್ ಮಾಡಿದಾಗ ಸುಮಾರು 5 ಸಾವಿರ ಫಾಲೋವರ್ಸ್ ಇದ್ದರು. ಈಗ ಎಲ್ಲರ ಊಹೆಗೂ ಮೀರಿ 30 ಸಾವಿರ ದಾಟಿದೆ ಇನ್ನೂ ದಾಟುತ್ತಲೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X