ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಹಾನಿಯಾಗಿಲ್ಲ

By Mahesh
|
Google Oneindia Kannada News

India relatively unaffected by global economic crisis: U.S.
ವಾಷಿಂಗ್ಟನ್ , ಜು.9: ವಿದೇಶಿ ಬೇಡಿಕೆಗೆ ಸೀಮಿತ ಅವಲಂಬನೆ ಹಾಗೂ ಸರ್ಕಾರ ಕೈಗೊಂಡ ಉತ್ತೇಜನಾ ಕ್ರಮ ಮತ್ತು ಬಲಿಷ್ಠ ಆರ್ಥಿಕ ನೀತಿಯ ಕಾರಣದಿಂದ ವಿಶ್ವವನ್ನೇ ತಲ್ಲಣಗೊಳಿಸಿದ ಆರ್ಥಿಕ ಹಿಂಜರಿತ ಭಾರತದ ಮೇಲೆ ಪರಿಣಾಮ ಬೀರಿಲ್ಲ ಎಂದು ಬರಾಕ್ ಒಬಾಮ ಆಡಳಿತ ಅಮೆರಿಕದ ಕಾಂಗ್ರೆಸ್ ನಲ್ಲಿ ಗುರುವಾರ ಹೇಳಿದೆ.

ತನ್ನ ಸಂಕ್ಷಿಪ್ತ ವಾರ್ಷಿಕ ವರದಿಯಲ್ಲಿ ಈ ವಿಷಯ ತಿಳಿಸಿರುವ ಅಮೇರಿಕಾದ ಟ್ರೆಜರಿ ಇಲಾಖೆ ಈಗ ಭಾರತದ ಆರ್ಥಿಕ ಬೆಳವಣಿಗೆ ಸ್ವಸ್ಥಾನಕ್ಕೆ ಮರಳಿದ್ದರೂ ಹಿಂಜರಿತದ ಅವಧಿಯಲ್ಲಿ ಕುಂಠಿತಗೊಂಡಿತ್ತು ಎಂದು ಹೇಳಿದೆ.

2009 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.6.8ಕ್ಕೆ ಕುಸಿದಿದ್ದು, 2005-2007ರಲ್ಲಿ ಸರಾಸರೀ ಶೇ.9.4 ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದ್ದು, ಕಳೆದ ವರ್ಷದ ಮುಂಗಾರಿನ ವಿಫಲತೆಯಿಂದಾಗಿ ಕೃಷಿ ಬೆಳವಣಿಗೆ ತೀವ್ರ ಕುಂಠಿತವಾಗಿದೆ ಎಂದೂ ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಅಂದಾಜಿನಂತೆ ಭಾರತದ ಆರ್ಥಿಕ ಬೆಳವಣಿಗೆ 2010ರಲ್ಲಿ ಶೇ.9.4 ಆಗಲಿದೆ. 2009ರ ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಂಡ ಭಾರತದ ಆರ್ಥಿಕತೆ ಯಿಂದ ಹಣದುಬ್ಬರ ಏರಿಕೆ ದಾಖಲಿಸಿದ್ದು ರಿಸರ್ವ್ ಬ್ಯಾಂಕು ಸೂಕ್ತ ಕ್ರಮ ಕೈಗೊಂಡಿದೆ ಎಂದು ವರದಿ ಹೇಳಿದೆ.

ಕಾನ್ಸಾಸ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಮೆರಿಕದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X