ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಗೋದಾಮುಗಳಲ್ಲಿ ಅಕ್ಕಿ ಎಷ್ಟಿದೆ ಗೊತ್ತಾ?

By Mahesh
|
Google Oneindia Kannada News

Govt has 57.84 mn tonnes of wheat, rice in godowns
ನವದೆಹಲಿ, ಜು.9:ಜುಲೈ 1ರ ಲೆಕ್ಕದಂತೆ ಸರ್ಕಾರಿ ಗೋದಾಮುಗಳಲ್ಲಿ 57.48 ಮಿಲಿಯನ್ ಟನ್ ಅಕ್ಕಿ ಹಾಗೂ ಗೋಧಿ ದಾಸ್ತಾನಿದೆ ಎಂದು ಸರ್ಕಾರ ತಿಳಿಸಿದೆ. ಈ ದಾಸ್ತಾನು ದಾಸ್ತಾನು ನಿಯಮಕ್ಕಿಂತಲೂ ಶೇ.61 ರಷ್ಟು ಅಧಿಕ ಎನ್ನಲಾಗಿದೆ. ನಿಯಮದ ಪ್ರಕಾರ ಜುಲೈ 1 ಕ್ಕೆ ಒಟ್ಟು 31.9 ಮಿಲಿಯನ್ ಟನ್ ಅಕ್ಕಿ ಹಾಗೂ ಗೋಧಿ ದಾಸ್ತಾನು ಇರಬೇಕಿತ್ತು.

ಇದರಲ್ಲಿ 5 ಮಿಲಿಯ ಟನ್ ತುರ್ತು ದಾಸ್ತಾನು ಸೇರಿದೆ. ಜುಲೈ 1ಕ್ಕೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕೇಂದ್ರ ಪೂಲ್ ನಲ್ಲಿ 24.26 ಮಿಲಿಯ ಟನ್ ಗಳಷ್ಟು ದಾಸ್ತಾನು ಹೊಂದಿದ್ದು ನಿಯಮದ ಪ್ರಕಾರ 11.9 ಮಿಲಿಯನ್ ಟನ್ ದಾಸ್ತಾನು ಇರಬೇಕಾಗುತ್ತದೆ.

ಸರ್ಕಾರ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯವನ್ನು ಖರೀದಿಸಿದ್ದರಿಂದ ಈ ಹೆಚ್ಚಿನ ದಾಸ್ತಾನು ಆಗಿದೆ ಎನ್ನಲಾಗಿದ್ದು ಕಳೆದ ವರ್ಷ ಸರ್ಕಾರ 25.3 ಮಿಲಿಯ ಟನ್ ನಷ್ಟು ಗೋಧಿಯನ್ನು ಖರೀದಿಸಿತ್ತು.

ಈ ವರ್ಷ ಇಲ್ಲಿಯವರೆಗೆ 22.5 ಮಿಲಿಯನ್ ಟನ್ ಅಕ್ಕಿಯನ್ನು ಖರೀದಿಸಿದ್ದು ಒಟ್ಟು ದಾಸ್ತಾನು 33.6 ಮಿಲಿಯ ಟನ್ ಗಳಾಗಿವೆ. ಕಳೆದ ವರ್ಷದ ಬರದಿಂದಾಗಿ ದೇಶದ ಅಕ್ಕಿಯ ಉತ್ಪಾದನೆ ಒಟ್ಟು 89.31 ಟನ್ ಗಳಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X