ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.14ರಿಂದ ಸಿಇಟಿ ಕೌನ್ಸೆಲಿಂಗ್ ಶುರು

By Mrutyunjaya Kalmat
|
Google Oneindia Kannada News

CET Counselling
ಬೆಂಗಳೂರು, ಜು. 8 : ಕಳೆದ ಸಾಲಿನ ಸಿಇಟಿ ಹಂಚಿಕೆ (ಸೀಟ್ ಮಾಟ್ರಿಕ್ಸ್) ಅನುಗುಣವಾಗಿಯೇ ಈ ವರ್ಷವೂ (2010-11) ಪ್ರವೇಶ ನೀಡಬಹುದೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಯು) ಸೂಚಿಸಿದೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳ ಕೌನ್ಸೆಲಿಂಗ್ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ.

ಈ ಸಂಬಂಧ ಎಐಸಿಟಿಯುನಿಂದ ಪತ್ರ ಬಂದಿದ್ದು, 2009-10ನೇ ಸಾಲಿನ ಸೀಟ್ ಮ್ಯಾಟ್ರಿಕ್ಸ್ ಅನುಗುಣವಾಗಿಯೇ ಪ್ರಸಕ್ತ ಸಾಲಿನಲ್ಲೂ ಕೌನ್ಸೆಲಿಂಗ್ ನಡೆಸಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂಗ ಲಿಂಬಾವಳಿ ಬುದವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಹೇಳಿಕೆ ನೀಡಿದ್ದಾರೆ.

ರಾಜ್ಯದ 24 ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆಯನ್ನು ಎಐಸಿಟಿಇ ನವೀಕರಿಸದ ಕಾರಣ ಗೊಂದಲ ಉಂಟಾಗಿತ್ತು. ಹೀಗಾಗಿ ಸಿಇಟಿ ಕೌನ್ಸೆಲಿಂಗ್ 2 ಬಾರಿ ಮುಂದೂಡಲಾಗಿತ್ತು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಬಗ್ಗೆ ಮನವರಿಕೆ ಮಾಡಿದ ನಂತರ 2009-10ನೇ ಸಾಲಿನಲ್ಲಿ ಎಷ್ಟು ಮಂದಿಗೆ ಪ್ರವೇಶ ನೀಡಲಾಗಿತ್ತೋ ಅಷ್ಟೇ ಮಂದಿಗೆ ಈ ವರ್ಷವೂ ಪ್ರವೇಶ ನೀಡಬಹುದು ಎಂದು ಎಐಸಿಟಿಇ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X