ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದ ಹಿಂದೂ ದೇಗುಲಗಳಿಗೆ ಯಾರು ದಿಕ್ಕು?

By Mahesh
|
Google Oneindia Kannada News

500 Hindu temples damaged in North during war with LTTE
ಕೊಲಂಬೋ, ಜು.8: ಶ್ರೀಲಂಕಾದಲ್ಲಿ ಸರಕಾರಿ ಪಡೆಗಳು ಹಾಗೂ ಎಲ್ಟಿಟಿಇ ನಡುವೆ ನಡೆದ ಕಾಳಗ ವೇಳೆ 500ಕ್ಕೂ ಅಧಿಕ ಹಿಂದೂ ದೇಗುಲಗಳು ನಾಶಗೊಂಡಿವೆ. ಅವನ್ನು ಪುನರ್‌ನಿರ್ಮಿಸಿಕೊಡಬೇಕೆಂದು ತಮಿಳು ನ್ಯಾಷನಲ್‌ ಅಲಯನ್ಸ್ (ಟಿಎನ್‌ಎ)ಆಗ್ರಹಿಸಿದೆ.

ಹಾನಿಗೊಂಡಿರುವ ಹಿಂದು ದೇವಾಲಯಗಳನ್ನು ಮರು ನಿರ್ಮಿಸಿಕೊಡಬೇಕು. ವಿಶೇಷವಾಗಿ ಉತ್ತರ-ಪೂರ್ವ ಲಂಕಾದಲ್ಲಿ ನೂರಾರು ಹಿಂದು ದೇಗುಲಗಳು ಸಂಪೂರ್ಣ ನಾಶವಾಗಿವೆ ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಟಿಎನ್‌ಎಯ ನಾಯಕ ಯೋಗೇಶ್ವರನ್ ಅವರು ಲಂಕಾ ಸಂಸತ್ತಿನಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಲ್ಲದೆ ಹಿಂದು ದಾಹಾಮ್ ಶಾಲೆಗಳಲ್ಲಿ ಸುಮಾರು 1,543 ಶಿಕ್ಷಕರು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸರಕಾರ ವೇತನ ನೀಡಬೇಕೆಂದೂ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಲಂಕಾ ಪ್ರಧಾನಿ ಡಿ.ಎಂ.ಜಯರತ್ನೆ ಅವರು, ಈ ದೇವಾಲಯಗಳ ಪುನರ್‌ನಿರ್ಮಾಣಕ್ಕೆ ವಿದೇಶಿ ನೆರವನ್ನು ಪಡೆಯಲಾಗುವುದು ಎಂದರು.

ಶ್ರೀಲಂಕಾದಲ್ಲಿನ ದೇಗುಲಗಳ ಪುನರುಜ್ಜೀವನಗೊಳಿಸುವಂತೆ ಅಲ್ಲಿನ ಸರ್ಕಾರಕ್ಕೆ ಆಗ್ರಹಿಸಲು ಕಳೆದ ವರ್ಷದಲ್ಲಿ ಜುಲೈನಲ್ಲಿ ಭಾರತದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X