For Daily Alerts
ನಿವೇದಿತಾಗೆ ಅತ್ತೆಯಿಂದಲೇ ಪ್ರಾಣ ಬೆದರಿಕೆ
ದಾವಣಗೆರೆ, ಜು. 8 : ಸನ್ಯಾಸತ್ವ ಕಳಚಿ ವಿವಾಹ ಬಂಧನಕ್ಕೆ ಒಳಗಾಗಿರುವ ನಿವೇದಿತಾ ತನಗೆ ಗಂಡನ ತಾಯಿಯಿಂದಲೇ ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ್ದಾಳೆ.
ಗಂಡ ಚೇತನ ಜೊತೆಗೂಡಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಿವೇದಿತಾ ದೂರು ದಾಖಲಿಸಿದ್ದಾಳೆ. ಅತ್ತೆಯೇ ಪ್ರಾಣ ಬೆದರಿಕೆ ಒಡ್ಡಿದ್ದು ತಮಗೆ ರಕ್ಷಣೆ ನೀಡಬೇಕೆಂದು ನಿವೇದಿತಾ ಆಗ್ರಹಿಸಿದ್ದಾಳೆ.
ನಿವೇದಿತಾ ಅವರ ಪ್ರೇಮ ವಿವಾಹವನ್ನು ಸಮಾಜವೂ ಒಪ್ಪಿಕೊಂಡಿದೆ. ವಿವಾಹ ಜೀವನ ನಡೆಸುವುದಕ್ಕೆ ಅನುವು ಮಾಡಿಕೊಟ್ಟಿದೆ. ಸ್ವತಃ ಮುರುಘಾಮಠದ ಶ್ರೀಗಳಾದ ಶಿವಮೂರ್ತಿ ಸ್ವಾಮೀಜಿಗಳು, ನಿವೇದಿತಾ ಯಾವ ತಪ್ಪೂ ಮಾಡಿಲ್ಲ ಎಂದು ಹೇಳಿ ಆಶೀರ್ವಾದ ಮಾಡಿದ್ದಾರೆ. ಆದರೆ, ಅಡ್ಡಗಾಲಾಗಿರುವುದು ಗಂಡನ ತಾಯಿಯೇ.
ಹತ್ತು ವರ್ಷಗಳ ಕಾಲ ಚಿತ್ರದುರ್ಗದ ಮುರುಘಮಠದಲ್ಲಿ ಸನ್ಯಾಸಿಯಾಗಿದ್ದ ನಿವೇದಿತಾ ಪ್ರೇಮಿಸಿದ ಚೇತನ್ ಜೊತೆ ವಿವಾಹವಾಗಿದ್ದು ಚೇತನ್ ಅವರ ತಾಯಿ ತೀವ್ರವಾಗಿ ವಿರೋಧಿಸಿದ್ದಾರೆ. ತನ್ನ ಮಗನನ್ನು ನಿವೇದಿತಾ ದಾರಿ ತಪ್ಪಿಸಿದ್ದಾಳೆ ಎಂದು ಆರೋಪಿಸಿದ್ದಾಳೆ. ನಿವೇದಿತಾ ನೀಡಿರುವ ದೂರಿಗೆ ಪ್ರತಿಯಾಗಿ, ತಾವು ಯಾವುದೇ ರೀತಿ ಪ್ರಾಣ ಬೆದರಿಕೆ ಒಡ್ಡಿಲ್ಲ ಎಂದು ಚೇತನ್ ತಾಯಿ ಹೇಳಿದ್ದಾರೆ.