ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಟಿನ್ ಅಮೆರಿಕಕ್ಕೆ ಗೋದ್ರೆಜ್ ಕೇಶ ರಕ್ಷಣೆ ಲಗ್ಗೆ

By Mahesh
|
Google Oneindia Kannada News

Godrej Hair care enters Latin America
ನವದೆಹಲಿ, ಜು.8: ದೇಶದ ಪ್ರಮುಖ ಗ್ರಾಹಕ ಉತ್ಪನ್ನ ಹಾಗೂ ಕೇಶ ರಕ್ಷ ಉತ್ಪನ್ನ ತಯಾರಿಕಾ ಕಂಪೆನಿ ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ತಾನು ಅರ್ಜೆಂಟೈನಾದ ಕೇಶ ರಕ್ಷ ತಯಾರಿಕಾ ಕಂಪೆನಿ ಆರ್ಜೆನ್ಕೋಸ್ ನ ಖರೀದಿ ಪ್ರಕ್ರಿಯೆಯನ್ನು ಮುಗಿಸಿರುವುದಾಗಿ ಗುರುವಾರ ತಿಳಿಸಿದೆ.

ಕಳೆದ ಮೇ ತಿಂಗಳಿನಲ್ಲಿ ಅರ್ಜೆಂಟೈನಾ, ಉರುಗ್ವೇ ಮತ್ತು ಪೆರುಗ್ವೆಯಲ್ಲಿ ಕೇಶ ಬಣ್ಣಗಳ ಮಾರುಕಟ್ಟೆ ನಾಯಕನಾಗಿರುವ ಲ್ಯಾಟಿನ್ ಅಮೆರಿಕದ ಮೂಲದ ಇಷ್ಯೂ ಸಮೂಹವನ್ನು ಕಂಪೆನಿ ಖರೀದಿಸಿತ್ತು.

ಈ ಎರಡೂ ಕಂಪೆನಿಗಳ ಒಟ್ಟು ಮಾರಾಟ 45 ಮಿಲಿಯನ್ ಡಾಲರ್ ಗಳಾಗಿವೆ. ಈ ಖರೀದಿಯನ್ನು ಶೇರು ಹಂಚಿಕೆ ಮತ್ತು ಸಾಲದ ರೂಪದಲ್ಲಿ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ. ಈ ಎರಡೂ ಕಂಪೆನಿಗಳ ಸ್ವಾಧೀನದಿಂದ ಲ್ಯಾಟಿನ್ ಅಮೇರಿಕಾದ ದೇಶಗಳಲ್ಲಿ ಕಂಪೆನಿ ಬಲವಾದ ಹೆಜ್ಜೆಯನ್ನು ಊರಲು ಹಾಗೂ ಸಾಧನೆ ಮಾಡಲು ಸಹಾಯಕವಾಗಲಿದೆ ಎಂದು ಗೋದ್ರೆಜ್ ನ ಅದ್ಯಕ್ಷ ಆದಿ ಗೋದ್ರೆಜ್ ಹೇಳಿದರು.

ಗೋದ್ರೆಜ್ ವಿದೇಶಿ ಕಂಪೆನಿಗಳ ಸ್ವಾಧೀನಕ್ಕೆ ಮುಂದಾಗಿದ್ದು ಈ ಹಿಂದೆ ನೈಜೀರಿಯಾದ ಟುರಾ ಸಾಬೂನು ಬ್ರಾಂಡ್ ಹಾಗೂ ಇಂಡೋನೇಷ್ಯಾದ ಮಗಸೆರಿ ಸಮೂಹವನ್ನು ಖರೀದಿಸಿದೆ. ಅಲ್ಲದೆ ಗೋದ್ರೆಜ್ ಸರ ಲೀಯಲ್ಲಿ ಸರ ಲೀಯ ಶೇ51 ಪಾಲನ್ನೂ ಖರೀದಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X