ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲ್ಯಾಟಿನ್ ಅಮೆರಿಕಕ್ಕೆ ಗೋದ್ರೆಜ್ ಕೇಶ ರಕ್ಷಣೆ ಲಗ್ಗೆ
ಕಳೆದ ಮೇ ತಿಂಗಳಿನಲ್ಲಿ ಅರ್ಜೆಂಟೈನಾ, ಉರುಗ್ವೇ ಮತ್ತು ಪೆರುಗ್ವೆಯಲ್ಲಿ ಕೇಶ ಬಣ್ಣಗಳ ಮಾರುಕಟ್ಟೆ ನಾಯಕನಾಗಿರುವ ಲ್ಯಾಟಿನ್ ಅಮೆರಿಕದ ಮೂಲದ ಇಷ್ಯೂ ಸಮೂಹವನ್ನು ಕಂಪೆನಿ ಖರೀದಿಸಿತ್ತು.
ಈ ಎರಡೂ ಕಂಪೆನಿಗಳ ಒಟ್ಟು ಮಾರಾಟ 45 ಮಿಲಿಯನ್ ಡಾಲರ್ ಗಳಾಗಿವೆ. ಈ ಖರೀದಿಯನ್ನು ಶೇರು ಹಂಚಿಕೆ ಮತ್ತು ಸಾಲದ ರೂಪದಲ್ಲಿ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ. ಈ ಎರಡೂ ಕಂಪೆನಿಗಳ ಸ್ವಾಧೀನದಿಂದ ಲ್ಯಾಟಿನ್ ಅಮೇರಿಕಾದ ದೇಶಗಳಲ್ಲಿ ಕಂಪೆನಿ ಬಲವಾದ ಹೆಜ್ಜೆಯನ್ನು ಊರಲು ಹಾಗೂ ಸಾಧನೆ ಮಾಡಲು ಸಹಾಯಕವಾಗಲಿದೆ ಎಂದು ಗೋದ್ರೆಜ್ ನ ಅದ್ಯಕ್ಷ ಆದಿ ಗೋದ್ರೆಜ್ ಹೇಳಿದರು.
ಗೋದ್ರೆಜ್ ವಿದೇಶಿ ಕಂಪೆನಿಗಳ ಸ್ವಾಧೀನಕ್ಕೆ ಮುಂದಾಗಿದ್ದು ಈ ಹಿಂದೆ ನೈಜೀರಿಯಾದ ಟುರಾ ಸಾಬೂನು ಬ್ರಾಂಡ್ ಹಾಗೂ ಇಂಡೋನೇಷ್ಯಾದ ಮಗಸೆರಿ ಸಮೂಹವನ್ನು ಖರೀದಿಸಿದೆ. ಅಲ್ಲದೆ ಗೋದ್ರೆಜ್ ಸರ ಲೀಯಲ್ಲಿ ಸರ ಲೀಯ ಶೇ51 ಪಾಲನ್ನೂ ಖರೀದಿಸಿದೆ.
Comments
ಗೋದ್ರೇಜ್ ಅರ್ಜೆಂಟಿನಾ ಉರುಗ್ವೆ ಕೂದಲು ಪೆರುಗ್ವೆ ಆರೋಗ್ಯ ವಾಣಿಜ್ಯ godrej health argentina uruguay paraguay finance news
Story first published: Thursday, July 8, 2010, 17:48 [IST]