ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ ನುಡಿದ ಅಕ್ಟೋಪಸ್ ಭವಿಷ್ಯವೇ ಅತಂತ್ರ

By Mahesh
|
Google Oneindia Kannada News

German fans want Paul the Octopus 'dead'
ಒಬೆರ್ಸೆನ್, ಜು.8: ಜರ್ಮನಿಯ ಎರಡು ವರ್ಷ ವಯಸ್ಸಿನ ಜಗದ್ವಿಖ್ಯಾತ ಭವಿಷ್ಯಕಾರ ಅಷ್ಟಪದಿಗೆ ಈಗ ಜೀವ ಭಯ ಶುರುವಾಗಿದೆ. ಪೌಲ್ ಆಕ್ಟೋಪಸ್ ಸೂಚಿಸಿದಂತೆ ಸೆಮಿಫೈನಲ್ ನಲ್ಲಿ ಜರ್ಮನ್ನರು ಸ್ಪೇನ್ ಗೆ ಶರಣಾಗಿದ್ದು, ಜರ್ಮನ್ ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪೌಲ್ ವಿರುದ್ಧ ಮಾರಕವಾಗಿ ಕೆಂಡಕಾರಿದ್ದಾರೆ.

ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯ ಕರಾರುವಾಕ್ಕಾಗಿ ಹೇಳಿರುವ ಪೌಲ್ ಬಗ್ಗೆ ಈವರೆಗೂ ಹೆಮ್ಮೆ ಪಡುತ್ತಿದ್ದ ಜರ್ಮನ್ನರು, "ಇಂಗ್ಲೆಂಡ್ ನಿಂದ ಈ ಅನಿಷ್ಟವನ್ನು ಕರೆತಂದಿದ್ದು ಏಕೆ. ಉಂಡ ಮನೆಗೆ ಎರಡು ಬಗೆಯ ಕ್ರೂರಿ, ಇದನ್ನು ಕೂಡಲೇ ಸಿಗಿದು ಹಾಕಿ, ಷಾರ್ಕ್ ಬಾಯಿಗೆ ಹಾಕಿ, ಸಮುದ್ರಕ್ಕೆ ತಳ್ಳಿ.ಪೌಲ್ ಅನ್ನು ಕತ್ತರಿಸಿ ಸೂಪ್ ಮಾಡಿ ಅಥವಾ ಸಲಾಡ್ ಮಾಡಿ ಹಂಚಿಬಿಡಿ" ಎಂದು ಫೇಸ್ ಬುಕ್, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜು.5ರಂದು ಎಂದಿನಂತೆ ಭವಿಷ್ಯ ಸೂಚಿಸಿದ ಪೌಲ್ , ಜರ್ಮನ್ ಡಬ್ಬಿ ಮೇಲೆ ಕೂತರೂ ನಂತರ ಪಕ್ಕದಲ್ಲಿದ್ದ ಸ್ಪೇನ್ ಡಬ್ಬಿ ಮೇಲೆ ಹೊರಳಿ, ಡಬ್ಬಿ ತೆಗೆದು ಆಹಾರದತ್ತ ಮುಖಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಜರ್ಮನ್ ಪತ್ರಿಕೆಗಳ ವರದಿಯಂತೆ, ಜರ್ಮನ್ ಸೋಲಿನ ಕಾರಣದ ಬಗ್ಗೆ ಜನ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಆಕ್ಟೋಪಸ್ ಬಗ್ಗೆ ಓದುಗರ ರಂಜನೆಯ ಪ್ರತಿಕ್ರಿಯೆ ಯಾವ ಪತ್ರಿಕೆಯಲ್ಲಿ ಏನು ಬಂದಿದೆ ಎಂಬುದು ಎಲ್ಲರು ಕುತೂಹಲದಿಂದ ನೋಡುತ್ತಿದ್ದಾರೆ.

ಸೆಮಿಫೈನಲ್ ನಲ್ಲಿ ಜರ್ಮನಿಗೆ ಸೋಲು ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಡರ್ಬನ್ ಕ್ರೀಡಾಂಗಣದಲ್ಲಿ ಪೌಲ್ ಆಕ್ಟೋಪಸ್ ವಿರುದ್ಧ ಗೀತೆ ಹಾಡಿ, ಘೋಷಣೆ ಕೂಗಿದ್ದು ನಡೆಯಿತು. 2008 ರ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಜರ್ಮನಿ ಗೆಲುವನ್ನು ಸೂಚಿಸಿತ್ತು. ಆದರೆ, ಅಂತಿಮವಾಗಿ ಆ ಪಂದ್ಯವನ್ನು ಸ್ಪೇನ್ 1-0 ಅಂತರದಿಂದ ಗೆದ್ದಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X