ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಬಳ್ಳಾಪುರದ ಬಳಿ ಜವಳಿ ಪಾರ್ಕ್

By Mrutyunjaya Kalmat
|
Google Oneindia Kannada News

Bangalore-Karnataka
ಬೆಂಗಳೂರು, ಜು. 7 : ಕೇಂದ್ರ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ದೊಡ್ಡಬಳ್ಳಾಪುರ ಇಂಟಿಗ್ರೆಟೆಡ್ ಟೆಕ್ಸ್ ಟೈಲ್ ಪಾರ್ಕ್) ದೊಡ್ಡಬಳ್ಳಾಪುರ ಬಳಿ ಬೃಹತ್ ಜವಳಿ ಪಾರ್ಕ್ ನ್ನು ಕೇಂದ್ರದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಕಳೆದ ಶನಿವಾರ ಉದ್ಘಾಟಿಸಿದ್ದಾರೆ.

200 ಕೋಟಿ ರುಪಾಯಿಗಳ ವೆಚ್ಚದಲ್ಲಿ ಪಾರ್ಕ್ ನ್ನು ಸ್ಥಾಪಿಸುತ್ತಿದ್ದು, ಸುಮಾರು 8000 ಉದ್ಯೋಗಿಗಳಿಗೆ ಕೆಲಸ ನೀಡುವ ಭರವಸೆಯನ್ನು ಅವರು ನೀಡಿದರು. ಸದ್ಯಕ್ಕೆ 85 ಕೋಟಿ ರುಪಾಯಿಗಳ ಯೋಜನೆಯನ್ನು ತಯಾರಿಸಲಾಗಿದೆ. ಅದರಲ್ಲಿ 34 ಕೋಟಿ ರುಪಾಯಿಗಳನ್ನು ಕೇಂದ್ರದ ಜವಳಿ ಸಚಿವಾಲಯ ನೀಡಲಿದೆ. ಉಳಿದ ಹಣವನ್ನು ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿ ಉದ್ಯಮಗಳ ಮೂಲಕ ಬಂಡವಾಳ ಹೂಡಲಾಗುವುದು ಎಂದು ಮಾರನ್ ತಿಳಿಸಿದರು.

ಪಾರ್ಕ್ ಗೆ ಬೇಕಿರುವ ಮೂಲಭೂತ ಸೌಲಭ್ಯಗಳು ಶೀಘ್ರದಲ್ಲಿ ಆರಂಭವಾಗಲಿದೆ. ದೇಶದಲ್ಲಿ ಒಟ್ಟು 40 ಪಾರ್ಕ್ ಸ್ಥಾಪಿಸಲು ಜವಳಿ ಇಲಾಖೆ ಉದ್ದೇಶಿಸಿದೆ. ಇದಕ್ಕಾಗಿ 20 ಸಾವಿರ ಕೋಟಿ ರುಪಾಯಿಗಳನ್ನು ವೆಚ್ಚ ಮಾಡಲಾಗುವುದು ಎಂದರು. 5 ಲಕ್ಷ ಉದ್ಯೋಗಳನ್ನು ಸೃಷ್ಟಿಸುವ ಉದ್ದೇಶ ಸಚಿವಾಲಯಕ್ಕೆ ಇದೆ ದಯಾನಿದಿ ಮಾರನ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X