ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿಯಾದ ಸನ್ಯಾಸಿನಿಯ ಮನದ ಮಾತು

By Mrutyunjaya Kalmat
|
Google Oneindia Kannada News

Murugha Math
ಚಿತ್ರದುರ್ಗ, ಜು. 7 : ನಾನು ಅನಾಥೆಯಾಗಿ ಬಂದೆ, ಅನಾಥೆಯಾಗಿಯೇ ಇರಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಹೀಗಾಗಿ ಪೀಠ ತ್ಯಜಿಸಿದ ನಾನು ಮೆಚ್ಚಿದವನ ಜೊತೆ ಮದುವೆಯಾಗಲು ನಿರ್ಧರಿಸಿದೆ ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುರುಘಾಮಠದ ಸನ್ಯಾಸಿನಿಯಾಗಿದ್ದ ನಿವೇದಿತಾ ಅಲಿಯಾಸ್ ಸುವರ್ಣ ಅವರ ಮನದಾಳದ ಮಾತುಗಳು.

ನನ್ನನ್ನು ಯಾರೂ ಭೇಟಿ ಮಾಡುತ್ತಿರಲಿಲ್ಲ. ಜ್ವರ ಬಂದು ಮಲಗಿದರೂ ನನ್ನನ್ನು ಯಾರೂ ಕೇಳುತ್ತಿರಲಿಲ್ಲ. ಊಟ ಮಾಡಿದೆಯಾ ಅನ್ನೋರು ಇರಲಿಲ್ಲ. ಒಟ್ಟಿನಲ್ಲಿ ನನ್ನಲ್ಲಿ ಅನಾಥೆ ಪ್ರಜ್ಞೆ ಕಾಡುತ್ತಿತ್ತು, ಈ ಬಗ್ಗೆ ತುಂಬಾ ಫೀಲ್ ಆಗುತ್ತಿತ್ತು. ಇದರಿಂದ ಬಿಡುಗಡೆ ಹೊಂದಬೇಕು ಎಂದು ನಿರ್ಧರಿಸಿದ ನಾನು 15 ದಿನಗಳ ಹಿಂದೆಯೇ ಈ ಪೀಠವನ್ನು ತ್ಯಜಿಸಿ, ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಚೇತನ್ ಅವರ ಕೈಹಿಡಿದಿದ್ದೇನೆ ಎಂದು ಸುವರ್ಣ ತಿಳಿಸಿದ್ದಾರೆ.

ಆದರೆ, ಚೇತನ್ ಅವರ ತಾಯಿ ರತ್ನಮ್ಮ ಎಂಬುವವರು ಜಿಲ್ಲಾ ಪಂಚಾಯ್ತಿ ಸದಸ್ಯಯಾಗಿದ್ದು, ಈ ಮದುವೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಚೇತನ್ ಅಪ್ರಾಪ್ತವಾಗಿದ್ದು, ಚಿತ್ರದುರ್ಗ ಎಸ್ಪಿ ಲಾಭೋರಾಂ ಅವರನ್ನು ಭೇಟಿ, ಸುವರ್ಣ ವಿರುದ್ಧ ಅಪಹರಣ ದೂರು ದಾಖಲಿಸಿದ್ದಾರೆ. ಚೇತನ್ ಮನೆಯವರು ಒಪ್ಪಿದರೆ ಅವರೊಟ್ಟಿಗೆ ಬಾಳಲು ನಾನು ರೆಡಿ ಎಂದು ಸುವರ್ಣ ಸ್ಪಷ್ಟಪಡಿಸಿದ್ದಾಳೆ. ಚೇತನ್ ಅವರನ್ನು ಮದುವೆಯಾಗುವ ವಿಷಯ ಶಿವಮೂರ್ತಿ ಶರಣರಿಗೂ ಗೊತ್ತಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X