ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದ ಬಿದ್ದ ಆಸರೆ : ಏನ್ರೀ ಇದು ಸಿಎಂ

By Mrutyunjaya Kalmat
|
Google Oneindia Kannada News

Yeddyurappa
ಕೂಡಲಸಂಗಮ, ಜು. 7 : ರಾಜ್ಯ ಸರಕಾರ ಮತ್ತು ಸತ್ತೂರುಮಠದ ಸಹಭಾಗಿತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳುತ್ತಿರುವ ಆಸರೆ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅದರ ಮೇಲ್ಚಾವಣಿ ಕುಸಿದು ಬಿದ್ದಿದೆ. ನಂದನೂರು ಗ್ರಾಮದಲ್ಲಿ ನೆರೆ ಸಂತ್ರಸ್ತರಿಗಾಗಿ 105 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು.

ಮನೆ ನಿರ್ಮಾಣ ಅತ್ಯಂತ ಕಳಪೆ ಮಟ್ಟದಲ್ಲಿದ್ದು, ಗುತ್ತಿಗೆದಾರರು ಬೇಕಾಬಿಟ್ಟಿ ಮನೆ ನಿರ್ಮಿಸುತ್ತಿರುವುದರ ಬಗ್ಗೆ ವರದಿಯಾಗಿದೆ. ಈಗಾಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳ ತೊಡಗಿದೆ. ಸರಿಯಾಗಿ ಸಿಮೆಂಟ್, ಕಬ್ಬಿಣ, ನೀರು ಉಪಯೋಗಿಸುತ್ತಿಲ್ಲ. ಗುತ್ತಿಗೆದಾರರು ತಮಗಿಷ್ಟ ಬಂದಂತೆ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮನೆಗಳ ಗುಣಮಟ್ಟವನ್ನು ಪರಿಶೀಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನೆಗಳಿಗೆ ಹಾಕಿದ್ದ ಮೇಲ್ಚಾವಣಿ ಕುಸಿದಿದ್ದು ರಾತ್ರಿಯೇ ಸ್ವಚ್ಚಗೊಳಿಸಲಾಗಿದೆ. ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಸರಿಯಾದ ಕಾಂಕ್ರೀಟ್ ಬಳಸಲಾಗುತ್ತಿಲ್ಲ. ಗುಣಮಟ್ಟ ಕಾಯ್ದು ಕೊಳ್ಳದಿದ್ದರೆ ಗುತ್ತಿಗೆ ಹಿಂಪಡೆಯಲಾಗುವುದು ಅಲ್ಲದೆ ಭಾರೀ ಮೊತ್ತದ ದಂಡ ವಿಧಿಸಲಾಗುವುದೆಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X