ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಇಟಿ ಕೌನ್ಸೆಲಿಂಗ್ ಮತ್ತೆ ಮುಂದಕ್ಕೆ
ಎರಡನೇ ಬಾರಿ ಕೌನ್ಸೆಲಿಂಗ್ ಮುಂದಕ್ಕೆ ಹೋಗಿರುವುದರಿಂದ ಪೋಷಕರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯುವ ಅವಕಾಶದಿಂದ ಪ್ರತಿಭಾವಂಚ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಕಾರಣದಿಂದ ಸಿಇಟಿ ಕೌನ್ಸೆಲಿಂಗ್ ಮುಂದೂಡಲಾಗಿದೆ. ಈಗಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಜುಲೈ 14 ರಂದು ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
24 ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಖಿಲ ಭಾರತ ತಾಂತ್ರಿಕ ಮಂಡಳಿ (ಎಐಸಿಟಿಇ) ನೀಡಿಲ್ಲ. ಅಲ್ಲ13 ಕಾಲೇಜುಗಳ ಸೀಟುಗಳ ಸಂಖ್ಯೆಗೆ ಸಂಬಂಧಿಸಿದಂತೆ ಭಾಗಶಃ ಮಾಹಿತಿ ಬಂದಿದೆ. ಕಳೆದ ವರ್ಷ 167 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಇಟಿ ಕೋಟಾದಲ್ಲಿ 36,524 ಸೀಟುಗಳು ಲಭ್ಯವಿದ್ದವು. ಆದರೆ, ಈ ವರ್ಷ 148 ಕಾಲೇಜುಗಳಲ್ಲಿ 30,512 ಸೀಟುಗಳು ಲಭ್ಯವಾಗಲಿವೆ ಎಂದು ಅರವಿಂದ ಲಿಂಬಾವಳಿ ವಿವರಿಸಿದರು.
Story first published: Tuesday, July 6, 2010, 10:22 [IST]