ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟೀನಾ ಗೋಳಿನ ಕಥೆಗೆ ಕೊನೆ ಇಲ್ಲ

By Super
|
Google Oneindia Kannada News

ಕೇಪ್‌ಟೌನ್, ಜು.4:ಫುಟ್ಬಾಲ್ ಪ್ರಪಂಚದ ದಂತಕಂತೆ ಡಿಯಗೋ ಮರಡೋನಾ ಪಡೆಯನ್ನು ಯುವ ಜರ್ಮನ್ನರು ಚೆಂಡಾಡಿದ್ದು ಈಗ ಇತಿಹಾಸ. ಅರ್ಜೆಂಟೀನಾದ ವೈಫಲ್ಯಕ್ಕೆ ಕಣ್ಣೀರ ಸುರಿಸಿ ಸುಸ್ತಾದ ಕೋಚ್ ಮರಡೋನಾ ತಮ್ಮ ಸ್ಥಾನಕೆಕ್ ರಾಜೀನಾಮೆ ನೀಡುವ ಸೂಚನೆ ಹೊರಬಿದ್ದಿದೆ. ಬ್ರೆಜಿಲ್ ಗೆ ಆದ ಆಘಾತದಂತೆ ಅರ್ಜೆಂಟೀನಾ ಕೂಡಾ ತತ್ತರಿಸಿದೆ.

ಆದರೆ, ಫುಟ್ಬಾಲ್ ಪಂಡಿತರು, ಬುಕ್ಕಿಗಳ ಪ್ರಕಾರ, ಅರ್ಜೆಂಟೀನಾ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು, ಆದರೆ, 4 -0 ಅಂತರದಿಂದ ಜರ್ಮನ್ನರು ಮುನ್ನುಗ್ಗುತ್ತಾರೆ ಎಂದು ಯಾರೂ ಎನಿಸಿರಲಿಲ್ಲ. ಬಹುಶಃ ಜರ್ಮನ್ನರಿಗೂ ಈ ಬಗ್ಗೆ ವಿಶ್ವಾಸವಿರಲಿಲ್ಲ ಎನ್ನಬಹುದು.

ಗೋಲುಗಳ ಮಳೆ: ಅತ್ಯಂತ ದುರ್ಬಲ ರಕ್ಷಣಾ ವ್ಯೂಹ ರಚಿಸಿದ್ದ ಅರ್ಜೆಂಟೀನಾಗೆ ಜರ್ಮನ್ ಯುವ ಪಡೆ ತಕ್ಕ ಪಾಠ ಕಲಿಸಿದೆ.ಒಂದು ಕಾಲದಲ್ಲಿ ಮರಡೋನಾರಿಂದ ಬಾಲ್ ಬಾಯ್ ಎಂದು ಕರೆಸಿಕೊಂಡಿದ್ದ ಯುವ ಆಟಗಾರ ಥಾಮಸ್ ಮುಲ್ಲರ್ ಪಂದ್ಯದ ಆರಂಭದ 3 ನೇ ನಿಮಿಷದಲ್ಲಿ ಗೋಲು ಗಳಿಸಿದ ಕೂಡಲೇ ಅರ್ಜೆಂಟೀನಾದ ಗೋಳು ಆರಂಭವಾಯಿತು.

ನೂರನೇ ಪಂದ್ಯವಾಡುತ್ತಿದ್ದ ಜರ್ಮನಿಯ ಹಿರಿಯ ಆಟಗಾರ ಮಿರಾಸ್ಲೊವ್ ಕ್ಲೋಸ್ 68 ಹಾಗೂ 89 ನೇ ನಿಮಿಷದಲ್ಲಿ ಗೋಲು ಹೊಡೆದು ದಾಖಲೆ ಬರೆದರು. ವಿಶ್ವಕಪ್ ಇತಿಹಾಸದಲ್ಲಿ ಕ್ಲೋಸ್ ಒಟ್ಟು 14 ಗೋಲುಗಳನ್ನು ಗಳಿಸಿದ್ದು, ಪೀಲೆ ದಾಖಲೆಯನ್ನು ಧೂಳಿಪಟ ಮಾಡಿದರು. ರೊನೊಲ್ಡೊ(ಬ್ರೆಜಿಲ್) ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ದ್ವಿತೀಯಾರ್ಧದಲ್ಲಿ ಬಂದ ಎರಡನೇ ಗೋಲಿನ ನಂತರ ಸೋಲೊಪ್ಪಿಕೊಂಡಂತೆ ಕಂಡು ಬಂಅದ್ ಅರ್ಜೆಂಟೀನಾದ ಗಾಯಕ್ಕೆ ಉಪ್ಪು ಸವರಿದ ಫ್ರೆಡ್ರಿಚ್ 74 ನೇ ನಿಮಿಷದಲ್ಲಿ ಗೋಲುಗಳಿಸಿ ಜರ್ಮನಿಯ ವಿಜಯೋತ್ಸವಕ್ಕೆ ಅಣಿ ಮಾಡಿದರು. ಕದೀರಾ, ಓಜಿಲ್ ಕೂಡಾ ಉತ್ತಮ ಆಟದೊಂದಿಗೆ ಗಮನ ಸೆಳೆದರು.

ಮೊದಲಾರ್ಧದಲ್ಲಿ ಅರ್ಜೆಂಟೀನಾದ ಸ್ಟ್ರೈಕರ್‌ಗಳಾದ ಲಯೊನಲ್ ಮೆಸ್ಸಿ ಮತ್ತು ಕಾರ್ಲೋಸ್ ಟೆವೆಜ್ ಹಲವು ಬಾರಿ ಗೋಲು ಹೊಡೆಯಲು ಯತ್ನಿಸಿದರೂ ಇಬ್ಬರಿಗೂ ಜರ್ಮನಿಯ ಬಲಿಷ್ಠ ರಕ್ಷಣೆಯನ್ನು ದಾಟಲು ಸಾಧ್ಯವಾಗಲೇ ಇಲ್ಲ.

ಅರ್ಜೆಂಟೀನಾ ಗೋಳಿನ ಕಥೆ: 2006ರ ವಿಶ್ವಕಪ್‌ನಲ್ಲಿ ಕೂಡ ಜರ್ಮನಿಗೆ ಕ್ವಾಟರ್ ಫೈನಲ್ ನಲ್ಲಿ ಸೋತಿದ್ದ ಅರ್ಜೆಂಟೀನಾ ಆರಂಭಿಕ ಆಘಾತದ ನಂತರ ಚೇತರಿಸಿಕೊಳ್ಳಲಿಲ್ಲ.ಮೆಸ್ಸಿ ಗೋಲು ಗಳಿಸದೆ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಹಿಗ್ವೇನ್, ಟೆವೆಜ್ ಪದೇ ಪದೇ ಜರ್ಮನ್ ರಕ್ಷಣಾ ಕೋ ಟೆ ಮೇಲೆ ವ್ಯರ್ಥ ದಾಳಿ ನಡೆಸಿದರು.

ಕೈ ಕೊಟ್ಟ ಅರ್ಜೆಂಟೀನಾ ಗೇಮ್ ಪ್ಲಾನ್: ವೆರೋನ್ ಅನ್ನು ಪಂದ್ಯದಿಂದ ಹೊರಕೂರಿಸಿ, ರಕ್ಷಣಾ ತಂತ್ರ ಹೆಣೆಯದೆ, ಎದುರಾಳಿಯನ್ನು ತಂತ್ರ ಪ್ರತಿತಂತ್ರ ಹೂಡಲು ಆಗದೆ ಮರಡೋನಾ ವಿಫಲರಾದರು. ಡೆಮಿಚೆಲಿಸ್, ಹೈಂಜ್ ಮುಂಪಡೆಯಲ್ಲೆ ಹೆಚ್ಚು ಕಾಲ ಕಳೆದಿದ್ದು, ಜರ್ಮನ್ ಯೋಧ ಬಾಸ್ಟಿಯನ್ ಸ್ವಾಸ್ಟೈಗರ್ ಕಟ್ಟಿ ಹಾಕಲು ವಿಫಲವಾಗಿದ್ದು, ಅರ್ಜೆಂಟೀನಾ ಪಾಲಿಗೆ ಮುಳುವಾಯಿತು.

English summary
FIFA World Cup 2010
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X