ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ 'ಕೈ'ವಾಡದಿಂದ ಸೆಮೀಸ್ ಗೆ ಉರುಗ್ವೆ

By * ಮಹೇಶ್ ಮಲ್ನಾಡ್
|
Google Oneindia Kannada News

Gyan
ಜೋಹಾನ್ಸ್ ಬರ್ಗ್, ಜು.3 : ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಕ್ವಾಟರ್ ಫೈನಲ್ ಪಂದ್ಯದಲ್ಲಿ ಎರಡೂ ತಂಡದ ಸ್ಟಾರ್ ಆಟಗಾರರ ಪ್ರಜ್ಞಾಹೀನ ಆಟದಿಂದ ಇತಿಹಾಸ ನಿರ್ಮಾಣವಾಯಿತು. ದೇವರ 'ಕೈ'ವಾಡದಿಂದ ಪಂದ್ಯ ಗೆಲ್ಲುವ ಸದವಕಾಶ ಪಡೆದ ಘಾನಾ ಪಂದ್ಯಕ್ಕೆ ವಿಚಿತ್ರ ಕ್ಲೈಮಾಕ್ಸ್ ನೀಡಿ, ಇಡೀ ಅಫ್ರಿಕಾ ಖಂಡ ಶಪಿಸುವಂತೆ ಮಾಡಿಬಿಟ್ಟಿತು. ಪೆನಾಲ್ಟಿ ಶೂಟೌಟ್ ನಲ್ಲಿ 4-2 ಅಂತರದಿಂದ ಉರುಗ್ವೆ ಘಾನಾವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿತು.

ಅಂದು ಹೀರೊ ಆಗಿ ಮೆರೆದಿದ್ದ ಗ್ಯಾನ್(Gಯಾನ್) ಪಂದ್ಯದ ಅಂತಿಮ ಕ್ಷಣದಲ್ಲಿ ಸಿಕ್ಕ ಪೆನಾಲ್ಟಿ ಕಿಕ್ ಅನ್ನು ಗೋಲಾಗಿಸದೆ, ಸಿಕ್ಕಿದ ಚಿನ್ನದಂಥ ಅವಕಾಶವನ್ನು ತಪ್ಪಿಸಿಕೊಂಡಿದ್ದು, ಮುಳುವಾಯಿತು. ಗೋಲಿ ಇಲ್ಲದ ಸಮಯದಲ್ಲಿ ಉರುಗ್ವೆಯ ಸ್ಟಾರ್ ಆಟಗಾರ ಸೊರೆಜ್ ಗೋಲು ರಕ್ಷಣೆಗೆ ನಿಂತು ತಾನೇ ಗೋಲಿ ಎಂಬಂತೆ ಘಾನಾದ ಬದಲಿ ಆಟಗಾರ ಒದ್ದ ಚೆಂಡನ್ನು ಕೈಯಲ್ಲಿ ತಡೆದು, ರೆಡ್ ಕಾರ್ಡ್ ಪಡೆದು ಹೊರಬಿದ್ದದ್ದು ಉರುಗ್ವೆಗೆ ಕಪ್ಪು ಚುಕ್ಕೆಯಾಯಿತು.

ನಂತರ ಪೆನಾಲ್ಟಿ ಶೂಟೌಟ್ ನಲ್ಲಿ ಉರುಗ್ವೆ ತಂಡದ ಡಿಯಾಗೋ ಫೊರ್ಲಾನ್, ವಿಕ್ಟೋರಿನೊ, ಸ್ಕೊಟ್ಟಿ, ಸೆಬಾಸ್ಟಿಯನ್ ಗೋಲು ಗಳಿಸಿದರೆ, ಪೆರೆರಾ ಗೋಲನ್ನು ಘಾನಾ ಗೋಲಿ ತಡೆದರು. ಅದೇ, ಪೆನಾಲ್ಟಿ ಕಿಕ್ ಮಿಸ್ ಮಾಡಿಕೊಂಡಿದ್ದ ಗ್ಯಾನ್ ಈ ಬಾರಿ ಸುಲಭವಾಗಿ ಗೋಲುಗಳಿಸಿದರು. ಅಪ್ಪೆಯ ಕೂಡಾ ಗೋಲು ಹೊಡೆದು ಭರವಸೆ ಮೂಡಿಸಿದರು. ಆದರೆ ಮೆನ್ಸಾ, ಅಡಿಯಹಾ ಗೋಲುಗಳನ್ನು ಉರುಗ್ವೆ ಗೋಲಿ ತಡೆಯುತ್ತಿದ್ದಂತೆ ಉರುಗ್ವೆ ತಂಡದ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಫ್ರಿಕಾದ ಗುಡ್ ಹೋಪ್ ಆಗಿದ್ದ ಘಾನಾ ನೆಲಕಚ್ಚಿಬಿಟ್ಟಿತು.

ಇದಕ್ಕೂ ಮುನ್ನ ಉರುಗ್ವೆಯ ಸ್ಟಾರ್ ಆಟಗಾರ ಫೊರ್ಲಾನ್ 55 ನಿಮಿಷದಲ್ಲಿ ಹೊಡೆದ ಅದ್ಭುತ ಕಿಕ್ ಹಾಗೂ ಘಾನಾ ಪರ ಮುಂಟರಿ 45+2ನೇನಿಮಿಷದಲ್ಲಿ ಸುಮಾರು 35 ಯಾರ್ಡ್ ದೂರದಿಂದ ಕಿಕ್ ಹೊಡೆದು ಗಳಿಸಿದ ಗೋಲು ಸಮಬಲದ ಹೋರಾಟಕ್ಕೆ ನಾಂದಿಹಾಡಿದ್ದರು. ಆದರೆ ಪಂದ್ಯದ ಆರಂಭದ 20 ನಿಮಿಷ ಉರುಗ್ವೆ ಪ್ರಾಬಲ್ಯ ಮೆರೆದರೆ ನಂತರ ಘಾನಾ ತನ್ನ ಕಮಾಲ್ ತೋರಿಸಿತು. ದ್ವಿತೀಯಾರ್ಧದಲ್ಲಿ ಸಮಬಲದ ಹೋರಾಟ ನೀಡಿದರೂ ಎರಡು ಕಡೆಗೆ ಯಶ ದೊರೆಯಲಿಲ್ಲ.

ಉರುಗ್ವೆಯ ಮುಂಪಡೆ ಆಟಗಾರ ಸೊರೆಜ್ ಗೋಲುಗಳಿಸದಿದ್ದರೂ ಪಂದ್ಯದ 11 ಹಾಗೂ 71 ನಿಮಿಷದಲ್ಲಿ ಘಾನಾ ಗೋಲಿ ಕಿಂಗ್ಸನ್ ರನ್ನು ಕಾಡಿದರು. ಫೊರ್ಲನ್ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು. ಘಾನಾಗೆ 90ನೇ ನಿಮಿಷದ ನಂತರ ಹೆಚ್ಚುವರಿ ಅವಧಿಯಲ್ಲಿ ಉರುಗ್ವೆ ಡಿಫೆಂಡರ್ ಸ್ಕೊಟಿ ಲೋಪದಿಂದ ಲಾಭ ಪಡೆದ ಘಾನಾ ಪ್ರಿನ್ ಬೊಟೆಂಗ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಆ ನಂತರ ಘಾನಾ ತಾಳ್ಮೆ ಕಳೆದು ಕೊಂಡು ಸಿಕ್ಕ ಪೆನಾಲ್ಟಿ ಕಿಕ್, ಶೂಟೌಟ್ ಗಳನ್ನು ಹಾಳುಗೆಡವಿಗೊಂಡಿತು.

ದೇವರ ಕೈವಾಡ : ಅರ್ಜೆಂಟೀನಾದ ಕೋಚ್ ಡಿಯಾಗೋ ಮರಡೋನಾರ 'ಹ್ಯಾಂಡ್ ಆಫ್ ಗಾಡ್' ಗೋಲು ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಾದಂತೆ, ಉರುಗ್ವೆಯ ಸೊರೆಜ್ ತಡೆದ 'ಹ್ಯಾಂಡ್ ಆಫ್ ಲಕ್' ಕೂಡಾ ಉರುಗ್ವೆಗೆ ಯಶ ತಂದುಕೊಟ್ಟಿತು. ಆದರೆ, ಸೊರೆಜ್ ಗೆ ರೆಡ್ ಕಾರ್ಡ್ ಕೊಟ್ಟು ಕಳಿಸುವ ಬದಲು ಚೆಂಡನ್ನು ಗೋಲ್ ಪೋಸ್ಟ್ ಒಳಬದಿ ಸೇರಿದ ಹಿನ್ನೆಲೆಯಲ್ಲಿ ಯಶಸ್ವಿ ಗೋಲು ಎಂದು ಘೋಷಿಸುವಂತೆ ಘಾನಾ ಜೊತೆ ಇಡೀ ಮೈದಾನ ಕೂಗಿದ್ದು ಪೋರ್ಚುಗೀಸ್ ರೆಫ್ರಿ ಕಿವಿಗೆ ಬೀಳಲಿಲ್ಲ. ಉರುಗ್ವೆ ಕೋಚ್ ತಬರೆಜ್, ರೆಫ್ರಿ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸೊರೆಜ್ ಮಾಡಿದ್ದು ಸರಿ ಎಂದಿದ್ದಾರೆ.

ಘಾನಾದ Gಯಾನ್ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದು, ಇಟಲಿಯ ರಾಬರ್ಟೊ ಬಜ್ಜಿಯೋ ಗೋಲು ಮಿಸ್ ಅನ್ನು ನೆನಪಿಸುವಂತಿತ್ತು. ಆದರೆ, ವಿಶ್ವಕಪ್ ನ ಅತ್ಯಂತ ಕಳಪೆ ಗೋಲು ಮಿಸ್ ಮಾಡಿಕೊಂಡ ಕೀರ್ತಿ ಇನ್ನೂ ನೈಜೀರಿಯಾದ ಯುಕೂಬು ಅವರಿಗೆ ಸಲ್ಲುತ್ತದೆ. ಘಾನಾ ಗ್ಯಾನ ರಹಿತ ಆಟ ಉರುಗ್ವೆ ಸೊರೆಜ್ ಗೆ ಉಘೆ ಉಘೆ ಎನ್ನುತ್ತಾ ಮುಂದಿನ ಹಂತ ತಲುಪಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X