ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಆರೋಗ್ಯಶ್ರೀ ವರದಾನ: ಶ್ರೀರಾಮುಲು

By Mahesh
|
Google Oneindia Kannada News

Vajpayee Arogyasri is boon to BPL families
ಬೆಂಗಳೂರು, ಜು.2: ರಾಜ್ಯದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪ್ರತಿ ಕುಟುಂಬಕ್ಕೆ ಪ್ಯಾಮಿಲಿ ಪ್ಯೋಟರ್ ಆಧಾರದ ಮೇಲೆ 1,50,000/- ರಿಂದ 2,00,000/ರು ಗಳಿಗೆ ಸೀಮಿತವಾಗಿ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸದನದಲ್ಲಿ ತಿಳಿಸಿದ್ದಾರೆ.

402 ವಿವಿಧ ಅಘಾತಕಾರಿ ಕಾಯಿಲೆಗಳಿಗೆ ಅಂದರೆ, ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ ಇತ್ಯಾದಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಪಡೆಯುವ ಅವಕಾಶ ಒದಗಿಸಲಾಗಿದೆ.

ರಾಜ್ಯದಲ್ಲಿ ಪ್ರಸಕ್ತ ಗುಲ್ಬರ್ಗಾ ಕಂದಾಯ ವಿಭಾಗದ 6 ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಯಾದಗಿರ್, ರಾಯಚೂರು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 31/07/2007ರಿಂದ ಜಾರಿಗೊಂಡಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ತಿಳಿಸಿದರು.

ಸಚಿವರು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸುತ್ತಾ ಈ ಯೋಜನೆಯನ್ನು ಹೈದರಾಬಾದ್ - ಕರ್ನಾಟಕ ದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಸಾಧಕ ಬಾಧಕಗಳನ್ನು ನೋಡಿಕೊಂಡು ಇಡೀ ರಾಜ್ಯಕ್ಕೆ ಯೋಜನೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ಸಚಿವರು ವಿಧಾನಸಭಾ ಸದಸ್ಯ ಹ್ಯಾರಿಸ್ ಎನ್ ಎ ಅವರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X