ವಿಕ್ಟೋರಿಯಾದಿಂದ ಮಲ್ಯಗೆ ಶಿಫ್ಟ್ ಆದ ಹಾಲಪ್ಪ
ಆದರೆ, ಒಂದು ವಿಶೇಷ ಸಂಗತಿಯೆಂದರೆ, ಮೇ 14 ರಂದು ಆಸ್ಪತ್ರೆಗೆ ದಾಖಲಾಗಿದ್ದ ಹಾಲಪ್ಪ ಮೇ 17 ರಂದು ಸಂಪೂರ್ಣ ಗುಣಮುಖರಾಗಿದ್ದರು ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ ಬಿ ಜಿ ತಿಲಕ್ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣದಲ್ಲಿ ತಿಳಿಸಿದ್ದಾರೆ. ಈ ಪ್ರಮಾದಕ್ಕೆ ನ್ಯಾಯಾಲಯದ ಕ್ಷಮೆಯಾಚಿಸಿದ್ದಾರೆ. ಹೀಗಿದ್ದೂ ಹಾಲಪ್ಪ ಸುಮಾರು 50 ಕ್ಕಿಂತಲೂ ಹೆಚ್ಚು ದಿನ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದಾರೆ. ಹೇಗೆ ಅನ್ನುವುದು ಸರಕಾರಕ್ಕೆ ಮತ್ತು ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ಮಾತ್ರ ಗೊತ್ತಿದೆ.
ಸಂಪೂರ್ಣ ಗುಣಮುಖರಾಗಿರುವ ಹಾಲಪ್ಪ ಮತ್ತೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಡಿಲಕ್ಸ್ ವಾರ್ಡ್ ನಲ್ಲಿ ಎಡ್ಮಿಟ್ ಆಗಿರುವ ಹಾಲಪ್ಪ, ಈಗಾಗಲೇ 40 ಸಾವಿರ ರುಪಾಯಿಗಳನ್ನು ಅಡ್ವಾನ್ಸ್ ಹಣವನ್ನು ಪಾವತಿಸಿದ್ದಾರೆ. ಈ ಡಿಲಕ್ಸ್ ವಾರ್ಡ್ ಗೆ ದಿನಕ್ಕೆ 5,940 ರುಪಾಯಿಗಳು. ಬೆಳಗ್ಗೆ 10.15ಕ್ಕೆ ವಿಕ್ಟೋರಿಯಾದಿಂದ ಡಿಸ್ ಚಾರ್ಜ್ ಆದ 15 ನಿಮಿಷಕ್ಕೆ ಅಂದರೆ 10.30ಕ್ಕೆ ಮಲ್ಯಗೆ ಶಿಫ್ಟ್ ಆಗಿದ್ದಾರೆ. ಹಾಲಪ್ಪ ಅವರ ರೂಂ ನಂಬರ್ 309 ಆಗಿದೆ.