ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲಕಾರಿ ಕ್ವಾಟರ್ ಫೈನಲ್ ಪಂದ್ಯ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಜು.2: ಇಂದು ಮಧ್ಯರಾತ್ರಿ 12 ಗಂಟೆಗೆ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುವ ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಉರುಗ್ವೆ ಹಾಗೂ ಘಾನಾ ತಂಡಗಳು ಪರಸ್ಪರ ಎದುರಿಸಲಿವೆ. ನಿರ್ರಿಕ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಎರಡೂ ತಂಡಗಳು ಮುಂದಿನ ಹಂತ ತಲುಪಿದರೆ ಹೊಸ ಇತಿಹಾಸ ನಿರ್ಮಿಸಿದ್ದಂತೆ.

ಫಲಿತಾಂಶ ನಿರೀಕ್ಷೆ: ಉರುಗ್ವೆ ಹಾಗೂ ಘಾನಾ ತಂಡಗಳ ಆಕ್ರಮಣಕಾರಿ ಆಟದ ಪರಿಚಯವಿದ್ದರೂ, ಮಹತ್ವದ ಪಂದ್ಯದಲ್ಲಿ ರಕ್ಷಣಾ ತಂತ್ರವನ್ನು ಹೆಣೆಯಲಾಗಿದೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಈ ಪಂದ್ಯದಲ್ಲಿ ಉತ್ತಮ ಡಿಫೆಂಡ್ ಮಾಡುವ ತಂಡಕ್ಕೆ ಜಯ ನಿಶ್ಚಿತ.ಮೇಲ್ನೋಟಕ್ಕೆ ಉರುಗ್ವೆ ಡಿಫೆನ್ಸ್ ಉತ್ತಮವಾಗಿದ್ದು, ಪಂದ್ಯವನ್ನು 1-0 ಅಂತರದಿಂದ ಜಯಗಳಿಸಿ ಸುಮಾರು 40 ವರ್ಷಗಳ ನಂತರ ಸೆಮಿಸ್ ಬಾಗಿಲ ಬಳಿಗೆ ಬರುತ್ತದೆ ಎಂದು ಬುಕ್ಕಿಗಳು ಘೋಷಿಸಿದ್ದಾರೆ.

ವಿಶ್ವಕಪ್ ವಿಡಿಯೋಗಳು:
ಕ್ವಾಟರ್ ಫೈನಲ್ಸ್ ಗೆ ಭರ್ಜರಿ ಸಿದ್ಧತೆ
ಇಂಗ್ಲೆಂಡ್ ಗೆ ಗರ್ವಭಂಗ, ಜರ್ಮನಿಗೆ ವಿಜಯೋತ್ಸವ
ಚಿಲಿಯನ್ನು ಹೊಸಕಿದ ಸಾಂಬಾ ಬಾಯ್ಸ್
ಲ್ಯಾಂಪರ್ಡ್ ಕ್ಷಮೆ ಕೋರಿದ ಫೀಫಾ

ಕ್ವಾಟರ್ ಫೈನಲ್ ಗೂ ಮುನ್ನ: ಆಡಿದ ನಾಲ್ಕುಪಂದ್ಯಗಳಲ್ಲಿ ಉರುಗ್ವೆ ಮೂರರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಘಾನಾ ಎರಡು ಪಂದ್ಯಗಳನ್ನು ಗೆದ್ದು, ಒಂದು ಡ್ರಾಸಾಧಿಸಿ, ಮತ್ತೊಂದರಲ್ಲಿ ಸೋಲುಂಡಿದೆ.

ಪ್ರಮುಖ ಆಟಗಾರರು: ಸ್ಟ್ರೈಕರ್ ಲೂಯಿಸ್ ಸೊರೆಜ್ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ಈಗಾಗಲೇ 4ಪಂದ್ಯದಲ್ಲಿ 3 ಗೋಲು ಹೊಡೆದು ಗೋಲು ಗಳಿಕೆಯವರ ಪಟ್ಟಿಯಲ್ಲಿಯೂ ಪೈಪೋಟಿ ನೀಡುತ್ತಿದ್ದಾರೆ. ಉಳಿದಂತೆ ಫೊರ್ಲಾನೊ ಉತ್ತಮ ಲಯದಲ್ಲಿದ್ದಾರೆ.

ಉರುಗ್ವೆ ರಣತಂತ್ರ: (4-4-2) ಮಾದರಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.ಫೊರ್ಲೊನೊ, ಸೊರೆಜ್ ಗೆ ಕವಾನಿ, ಫರ್ನಾಂಡೆಜ್ ಸಾಥ್ ನೀಡಲಿದ್ದು, ಗೊನ್ಜಾಲಿಸ್, ಪೆರೆರಾ ಮಿಡ್ ಫೀಲ್ಡ್ ನೋಡಿಕೊಳ್ಳಲಿದ್ದಾರೆ. ಲೂಗಾನೊ, ಕಾಕೆರೆಸ್, ವಿಕ್ಟೊರಿನೋ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ರಕ್ಷಣೆ ಸಮರ್ಪಕವಾಗಿದ್ದರೆ ಜಯ ಖಂಡಿತ.

ಘಾನಾ ರಣತಂತ್ರ: ಮೆನ್ಸಾ ಪಡೆಯ ಡಿಫೆಂಡರ್ ಗಳೇ ತಂಡದ ನ್ಯೂನತೆ ಎನ್ನಬಹುದು. ಉರುಗ್ವೆಯಂತೆ ಘಾನಾ ಕೂಡಾ (4-4-2) ಮಾದರಿಯಲ್ಲೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಘಾನಾ ಗೆಲ್ಲಬೇಕಾದರೆ ಉತ್ತಮ ರಕ್ಷಣಾ ತಂತ್ರ ಹಾಗೂ ತಾಳ್ಮೆ ಅಗತ್ಯವಿದೆ.

ಕೆವಿನ್ ಪ್ರಿನ್ಸ್, ಎ.ಗ್ಯಾನ್ ಮೇಲೆ ಘಾನಾ ಹೆಚ್ಚು ಅವಲಂಬಿತವಾಗಿದೆ. ಈ ಇಬ್ಬರೂ ಆಟಗಾರರು ಕಷ್ಟದ ಪರಿಸ್ಥಿತಿಯಲ್ಲಿ ತಂಡದ ಕೈ ಹಿಡಿದು ಮುನ್ನೆಡೆಸಿದ್ದಾರೆ ಕೂಡಾ. ಗ್ಯಾನ್ 3 ಗೋಲು ಬಾರಿಸಿದ್ದು ಉತ್ತಮ ಲಯದಲ್ಲಿದ್ದಾರೆ.

English summary
south africa johanneburg soccer prince
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X