ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಅಧ್ಯಾಯಕ್ಕೆ 50ರ ಮಹಿಳಾಮಣಿಗಳ ಮುನ್ನುಡಿ

By Prasad
|
Google Oneindia Kannada News

ಬೆಂಗಳೂರು, ಜು. 1 : ನಲವತ್ತು ದಾಟುತ್ತಿದ್ದಂತೆ ಜೀವನೋತ್ಸಾಹ ಕಳೆದುಕೊಂಡವರಂತೆ ಆಡುವಂಥ ಮಹಿಳೆಯರಿಗೆ ಉತ್ಸಾಹ ತುಂಬುವಂಥ ಸುದ್ದಿಯಿದೆ ಓದಿ. ವಿಚ್ಛೇದನ ಪಡೆದುಕೊಂಡವರು, ಗಂಡನನ್ನು ಕಳೆದುಕೊಂಡವರು ಸಮಾಜದ ಕಟ್ಟಳೆಗಳನ್ನು ಧಿಕ್ಕರಿಸಿ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ, ಅದೂ ಐವತ್ತು ದಾಟಿದ ನಂತರ!

ಹೌದು, ಜೀವನಸಾಥಿ ಮದುವೆ ಅಂತರ್ಜಾಲ ತಾಣದಲ್ಲಿ ನೊಂದಾಯಿಸಿಕೊಂಡು ಎರಡನೇ ಬಾಳ ಸಂಗಾತಿಗೆ ಹುಡುಕುತ್ತಿರುವ ಶೇ.70ರಷ್ಟು ಮಹಿಳೆಯರು ಹೊಸ ಜೀವನಕ್ಕಾಗಿ ಕಾದು ಕುಳಿತಿದ್ದಾರೆ. ಸುತ್ತಲಿನ ಸಮಾಜ ಏನು ಹೇಳುತ್ತದೆ ಎಂಬುದನ್ನು ಕಿವಿಗೆ ಹಾಕಿಕೊಳ್ಳದೆ ತಮ್ಮ ಹೃದಯದ ಮಾತನ್ನು ಹೆಚ್ಚಿನ ಮಧ್ಯ ವಯಸ್ಸು ದಾಟಿದ ಮಹಿಳೆಯರು ಕೇಳುತ್ತಿದ್ದಾರೆ.

ಇದರಲ್ಲಿ ತಪ್ಪೇನು ಇಲ್ಲ. ಏಕಾಂಗಿಯಾಗಿರುವ, ಗಂಡನಿಂದ ದೂರಾಗಿರುವ, ವಿಧವೆಯಾಗಿರುವ, ವಿಚ್ಛೇದಿತರಾಗಿರುವ ಐವತ್ತು ದಾಟಿದ ಮಹಿಳೆಯರು ಸಂಧ್ಯಾಕಾಲದಲ್ಲಿ ಆಸರೆಯನ್ನು ಬಯಸುವುದು ಸಹಜ. ಹಾಗೆಯೇ, ಬಾಳ ಸಂಗಾತಿಯನ್ನು ಅಂತರ್ಜಾಲದ ಮುಖಾಂತರ ಹುಡುಕುವುದು ಕೂಡ ಸುಲಭ.

ಇಂಟರ್ನೆಟ್ ನಲ್ಲಿ ಮಾಹಿತಿಗಳು ಬೆರಳ ತುದಿಯಲ್ಲೇ ಲಭ್ಯವಾಗುತ್ತಿರುವುದರಿಂದ ಐವತ್ತರ ಹರೆಯ ದಾಟಿದ ಮಹಿಳಾಮಣಿಗಳು ಮದುವೆ ತಾಣಕ್ಕೆ ಮಾರುಹೋಗುತ್ತಿದ್ದಾರೆ. ಮದುವೆ ತಾಣದಲ್ಲಿ ನೊಂದಾಯಿಸಿಕೊಂಡವರಲ್ಲಿ ಶೇ.70ರಷ್ಟು ಮಹಿಳೆಯರು ತಾವೇ ಸ್ವತಃ ತಮ್ಮ ಬಗ್ಗೆ ಮಾಹಿತಿಯನ್ನು ದಾಖಲಿಸಿದ್ದಾರೆ, ಜೀವನಸಂಗಾತಿಯ ಹುಡುಕಾಟದಲ್ಲಿ ತಲ್ಲೀನರಾಗಿದ್ದಾರೆ.

ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಈ ಮಹಿಳೆಯರಲ್ಲಿ ಶೇ.60ರಷ್ಟು ಭಾರತೀಯರು ಮತ್ತು ಉಳಿದವರು ಎನ್ಆರ್ಐಗಳು. ನಲವತ್ತು ದಾಟಿದ ನಂತರ ಹೆಂಗಸರಿರಲಿ ಗಂಡಸರು ಕೂಡ ಮದುವೆ ಬಗ್ಗೆ ನಿರಾಸಕ್ತಿ ತಳೆಯುವ ಇಂಥ ಕಾಲದಲ್ಲಿ ಮಹಿಳೆಯರು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಇದು ಪುರುಷರಿಗೂ ದಾರಿದೀಪವಾಗಲಿ.

English summary
second marriage woman jeevansathi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X