ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಂತೆ ಖಾಸಗಿ ಬ್ಯಾಂಕ್ ಗಳ ಬಡ್ಡಿದರ

By Mahesh
|
Google Oneindia Kannada News

Pvt banks match SBI in base rate
ನವದೆಹಲಿ, ಜು.1: ದೇಶದ ಅತಿ ದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್ ಬಿಐ ತನ್ನ ಮೂಲ ಬಡ್ಡಿ ದರಗಳನ್ನು ಪ್ರಕಟಿಸಿದ ಬೆನ್ನಲ್ಲೇ ಖಾಸಗಿ ಬ್ಯಾಂಕ್ ಗಳೂ ಬಡ್ಡಿ ದರಗಳನ್ನು ಪ್ರಕಟಿಸಿದ್ದು ಅವು ಸರ್ಕಾರಿ ಬ್ಯಾಂಕ್ ಗಳ ಸಮೀಪದಲ್ಲೇ ಇವೆ.

ಐಸಿಐಸಿಐ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಗಳು ತಮ್ಮ ಮೂಲ ಬಡ್ಡಿ ದರವನ್ನು ಶೇ.7.5 ಎಂದು ಪ್ರಕಟಿಸಿವೆ. ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಹೆಚ್ ಡಿ ಎಫ್ ಸಿ ತನ್ನ ಮೂಲ ದರವನ್ನು ಶೇ.7.25 ಎಂದು ತಿಳಿಸಿದೆ.

ಕೆಲ ಸಣ್ಣ ಖಾಸಗಿ ಬ್ಯಾಂಕ್ ಗಳಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಾಗೂ ಇಂಡಸ್ ಇಂಡ್ ಬ್ಯಾಂಕ್ ಗಳು ತಮ್ಮ ಮೂಲದರವನ್ನು ಶೇ.7ಕ್ಕೆ ಇಳಿಸಿವೆ. ರಿಸರ್ವ್ ಬ್ಯಾಂಕು ಬಡ್ಡಿ ದರಗಳನ್ನು ನಿಗದಿ ಪಡಿಸಿಕೊಳ್ಳುವ ಅಧಿಕಾರವನ್ನು ಬ್ಯಾಂಕ್ ಗಳಿಗೆ ನೀಡಿರುವುದರಿಂದ ಹೆಚ್ಚಿನ ಬದಲಾವಣೆಯಾಗಿದೆ.

ಈ ಹಿಂದೆ ರಿಸರ್ವ್ ಬ್ಯಾಂಕಿನ ನಿಯಂತ್ರಣ ಇದ್ದಾಗ ಖಾಸಗಿ ಬ್ಯಾಂಕ್ ಗಳ ಬಡ್ಡಿ ದರ ಸರ್ಕಾರಿ ಬ್ಯಾಂಕ್ ಗಳ ಬಡ್ಡಿ ದರಕ್ಕಿಂತ 400 ಮೂಲ ಅಂಶಗಳಷ್ಟು ಜಾಸ್ತಿ ಇರುತಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್ ಸೇರಿದಂತೆ ಬಹುತೇಕ ಸರ್ಕಾರಿ ಬ್ಯಾಂಕ್ ಗಳು ತಮ್ಮ ಮೂಲ ಬಡ್ಡಿ ದರವನ್ನು ಶೇ.8ರಲ್ಲಿ ಉಳಿಸಿಕೊಂಡಿವೆ.

ಕಳೆದ ಒಂದು ವರ್ಷದ ಸತತ ಪರಿಶೀಲನೆಯ ನಂತರ ರಿಸರ್ವ್ ಬ್ಯಾಂಕು , ಬ್ಯಾಂಕ್ ಗಳ ನಗದು ಹರಿವಿನ ಪ್ರಮಾಣ, ಠೇವಣಿ, ವೆಚ್ಚ ಹಾಗೂ ಲಾಭಾಂಶಗಳನ್ನು ಆಧರಿಸಿ ಬ್ಯಾಂಕ್ ಗಳೇ ಬಡ್ಡಿ ದರವನ್ನು ನಿಗದಿಪಡಿಸಿಕೊಳ್ಳುವ ಅಧಿಕಾರ ನೀಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X