ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೂಟೌಟ್ ನಲ್ಲಿ ಶರಣಾದ ಸಮುರಾಯ್ ಗಳು

By Mahesh
|
Google Oneindia Kannada News

Kaisuki Honda
ಪ್ರಿಟೋರಿಯಾ, ಜೂ. 30: ಜಪಾನ್ ಹಾಗೂ ಪೆರುಗ್ವೆ ನಡುವೆ ನಡೆದ ಪ್ರಿ ಕ್ವಾಟರ್ ಫೈನಲ್ ಪಂದ್ಯವನ್ನು ಫೀಫಾ ವಿಶ್ವಕಪ್ ನ ಈ ವರೆಗಿನ ಉತ್ತಮ ಪಂದ್ಯ ಎಂದರೆ ತಪ್ಪಾಗಲಾರದು. ಎರಡೂ ತಂಡಗಳು ಸಮಬಲದ ಹೋರಾಟ ನೀಡಿ, ಅಂತಿಮವಾಗಿ ಸಮುರಾಯ್ ಗಳು ಪೆನಾಲ್ಟಿ ಶೂಟೌಟ್ ನಲ್ಲಿ ಪೆರುಗ್ವೆಗೆ ಶರಣಾದರು. ಈ ಮೂಲಕ ಪ್ರಪ್ರಥಮ ಬಾರಿಗೆ ಪೆರುಗ್ವೆ ವಿಶ್ವಕಪ್ ನ ಕ್ವಾಟರ್ ಫೈನಲ್ ಹಂತ ತಲುಪಿತು.

ನಿಗದಿತ 90 ನಿಮಿಷಗಳಲ್ಲಿ ಗೋಲು ಗಳಿಸಲು ಎರಡು ತಂಡಗಳು ಹೆಣಗಾಡಿದ ಮೇಲೆ ಹೆಚ್ಚುವರಿ 30 ನಿಮಿಷಗಳಲ್ಲೂ ಗೋಲು ಬರದಿದ್ದಾಗ,ಈ ವಿಶ್ವಕಪ್ ನ ಪ್ರಥಮ ಪೆನಾಲ್ಟಿ ಶೂಟೌಟ್ ಗೆ ವ್ಯವಸ್ಥೆ ಸಿದ್ಧವಾಯಿತು. ಎರಡು ತಂಡಗಳಿಗೂ ಇದ್ದದ್ದು ಐದು ಬಾರಿ ಗೋಲು ಗಳಿಸುವ ಅವಕಾಶ. ರೋಚಕತೆಗೆ ಸಾಕ್ಷಿಯಾದ ಪೆನಾಲ್ಟಿ ಶೂಟೌಟ್ ನಲ್ಲಿ ಪೆರುಗ್ವೆ 5-3 ಅಂತರದಲ್ಲಿ ಜಪಾನ್ ಅನ್ನು ಮಣಿಸಿ ಬೀಗಿತು.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಜಪಾನ್ ಸೂರ್ಯ ಮುಳುಗಿದ್ದು ಹೇಗೆ: ಡಿಫೆಂಡರ್ ಕೊಮಾನೊ ಸಮುರಾಯ್ ಗಳ ಪಾಲಿಗೆ ದುರಂತ ನಾಯಕನಾಗಿಬಿಟ್ಟ. ಕೊಮಾನೊ ಗೋಲು ಹೊಡೆದ ಚೆಂಡು ಗೋಲ್ ಬಾಕ್ಸ್ ನ ಅಂಚಿಗೆ ತಾಗಿ ಹೊರ ಚಿಮ್ಮಿದಾಗ ಜಪಾನ್ ತಂಡಕ್ಕೆ ಆಘಾತವಾಗಿತ್ತು. ಅಗ ಜಪಾನ್ ಗೌರವ ಉಳಿಸುವ ಹೊಣೆ ಗೋಲಿ ಕವಾಷಿಮಾ ಮೇಲಿತ್ತು. ಆದರೆ, ಒಂದೂ ಗೋಲನ್ನು ತಡೆಯಲಾಗದೆ ಐದು ಗೋಲನ್ನು ಬಾಕ್ಸ್ ಒಳಬಿಟ್ಟ ಕವಾಷಿಮಾ ಕಂಬನಿಗೆರೆದಿದ್ದಷ್ಟೆ ಬಂತು.

ಪೆರುಗ್ವೆ ಪರ ಎಡ್ಗರ್ ಬರೆಟೊ, ಲುಕಸ್ ಬಾರಿಯೊಸ್, ಕ್ರಿಸ್ಟಿಯನ್ ರೆವೆರೊ, ನೆಲ್ಸನ್ ವಾಲ್ಡೇಸ್ ಗೋಲು ಗಳಿಸಿದ್ದರು. ಅಂತಿಮವಾಗಿ ಎಡಗಾಲಿನ ಕಿಕ್ ಗೆ ಪ್ರಸಿದ್ಧಿಯಾದ ಆಸ್ಕರ್ ಕಾರ್ಡೋಸ್ ಗೋಲು ಗಳಿಸಿ ಪೆರುಗ್ವೆಯ ಐತಿಹಾಸಿಕ ಹೀರೋ ಆದರು. ಜಪಾನ್ ಪರ ಕೊಮೊನೊಗೂ ಮೊದಲು ಎಂಡೋ, ಹಸೆಬೆ ಗೋಲು ಗಳಿಸಿದ್ದರು. ನಂತರ ಕೈಸುಕಿ ಹೋಂಡಾ ಗೋಲು ದಾಖಲಿಸಿದರು.

ಕೈಸುಕಿ ಹೋಂಡಾರಂತಹ ಉತ್ತಮ ಸ್ಟ್ರೈಕರ್ ಹೊಂದಿದ್ದ ಜಪಾನ್ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲ್ಲುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಆದದ್ದೇ ಬೇರೆ ಪೆರುಗ್ವೆ ಪ್ರಪ್ರಥಮ ಬಾರಿಗೆ ಕ್ವಾಟರ್ ಫೈನಲ್ ಹಂತ ತಲುಪಿದ ಸಾಧನೆ ಮೆರೆಯಿತು. ಜು.3 ರಂದು ಜೋಹಾನ್ಸ್ ಬರ್ಗ್ ನಲ್ಲಿ ನಡೆಯುವ ಕ್ವಾಟರ್ ಫೈನಲ್ಸ್ ನಲ್ಲಿ ಪೆರುಗ್ವೆ ತಂಡ ಪ್ರಬಲ ಸ್ಪೇನ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X