ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲಿಯನ್ನು ಚಿಂದಿ ಮಾಡಿ ಸಾಂಬಾ ನೃತ್ಯ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಜೂ.29: ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಬ್ರೆಜಿಲ್ ತಂಡ ತನ್ನ ಶಕ್ತಿ ಸಾಮರ್ಥ್ಯದ ಸಂಪೂರ್ಣ ಪ್ರದರ್ಶನ ನೀಡಿ, ಅತ್ಯಾಕರ್ಷಕ ಗೋಲುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನೆರೆ ರಾಷ್ಟ್ರ ಚಿಲಿ ಮಾತ್ರ ಬ್ರೆಜಿಲ್ ದಾಳಿಗೆ ಕಂಗಾಲಾಗಿ 3-0 ಅಂತರದಲ್ಲಿ ಬ್ರೆಜಿಲ್ ಜಯಗಳಿಸುವುದನ್ನು ನೋಡುತ್ತಾ ನಿಂತುಬಿಟ್ಟಿತು.

ಜುವಾನ್, ಲೂಯಿಸ್ ಫ್ಯಾಬಿಯಾನೊ ಹಾಗೂ ರಾಬಿನ್ಹೊ ಉತ್ತಮ ಗೋಲುಗಳನ್ನು ದಾಖಲಿಸಿ, ಜಯತಂದಿತ್ತರು. ಬ್ರೆಜಿಲ್ ದಾಳಿಗೆ ಚಿಲಿ ಆಟಗಾರರ ಬಳಿ ಉತ್ತರವಿರಲಿಲ್ಲ. ಚಿಲಿ ಡಿಫೆನ್ಸ್ ನ ವೈಫಲ್ಯದ ಪೂರ್ಣ ಲಾಭ ಪಡೆದ ಸಾಂಬಾ ಬಾಯ್ಸ್ ಮನಮೋಹಕ ಆಟ ಪ್ರದರ್ಶಿಸಿದರು.

ಕಾಕಾಗೆ ಹಳದಿ ಕಾರ್ಡ್ :ರೆಡ್ ಕಾರ್ಡ್ ಪಡೆದು ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ 'ಗೋಲು ವಂಚಿತ' ಮೋಹಕ ಆಟಗಾರ ಕಾಕಾ ಕಣಕ್ಕಿಳಿದರೂ ಹೇಳಿಕೊಳ್ಳುವಂಥಾ ಕಮಾಲ್ ಏನೂ ಮಾಡಲಿಲ್ಲ. ಒಂದೆರಡು ಬಾರಿ ಡ್ರಿಬ್ಲಿಂಗ್, ಫ್ಯಾಬಿಯನೋ ಗೆ ಕೊಟ್ಟ ಉತ್ತಮ ಪಾಸ್ ಆಟದ ಹೈಲೈಟ್ ಆಗಿತ್ತು ಅಷ್ಟೇ. ಚೆಂಡು ಕಸಿದುಕೊಳ್ಳಲು ಹೋಗಿ ಫೌಲ್ ಮಾಡಿ ಮತ್ತೊಮ್ಮೆ ಹಳದಿಕಾರ್ಡ್ ಪಡೆದರು.

ಬ್ರೆಜಿಲ್ ಕೋಚ್ ಡುಂಗಾ ಪಂದ್ಯಕ್ಕೂ ಮುನ್ನ ಹೇಳಿದಂತೆ ಆಕ್ರಮಣಕಾರಿ ಆಟಕ್ಕಿಂತ ತಂತ್ರಗಾರಿಕೆ ಉಪಯೋಗಿಸಿ ಡಿಫೈನ್ ಬ್ರೇಕ್ ಮಾಡುವುದು ನಮ್ಮ ಉದ್ದೇಶ. ಉತ್ತಮ ಡಿಫೆಂಡರ್ ಗಳುಳ್ಳ ತಂಡದ ಎದುರು ಬ್ರೆಜಿಲ್ ಕಷ್ಟಪಡುವುದಂತೂ ನಿಜ ಎಂದಿದ್ದರು.

ಗೋಲುಗಳು: ಆದರೆ, ಚಿಲಿಯ ಡಿಫೆನ್ಸ್ ಬೇಧಿಸುವಲ್ಲಿ ಬ್ರೆಜಿಲ್ ಕಷ್ಟವಾಗಲಿಲ್ಲ. 34ನೇ ನಿಮಿಷದಲ್ಲಿ ಜುವಾನ್ ಬ್ರೆಜಿಲ್ ಗೆ ಮುನ್ನಡೆ ತಂದುಕೊಟ್ಟರು. 37 ನೇನಿಮಿಷದಲ್ಲಿ ಕಾಕಾ ನೀಡಿದ ಪಾಸ್ ಅನ್ನು ಫ್ಯಾಬಿಯಾನೋ ಸುಲಭವಾಗಿ ಗೋಲು ದಾಖಲಿಸಿ ಜಯಕ್ಕೆ ಮುನ್ನುಡಿ ಬರೆದರು. 59ನೇ ನಿಮಿಷದಲ್ಲಿ ರಾಬಿನ್ಹೋ ಅದ್ಭುತ ಗೋಲು ಬಾರಿಸಿ 5 ಬಾರಿ ವಿಶ್ವ ಚಾಂಪಿಯನ್ ಬ್ರೆಜಿಲ್ ವಿಜಯ ನಗೆ ಬೀರುವಂತೆ ಮಾಡಿದರು.

ಬ್ರೆಜಿಲ್ ಗೋಲಿ ಸೀಜರ್ ಗೆ ಚಿಲಿಯ ವಾಲ್ಡಿವಿಯಾ, ಸೋಜೋ ಮಾತ್ರ ಒಂದೆರಡು ಬಾರಿ ಕಷ್ಟಕೊಟ್ಟರು. ಸಾಂಚೇಜ್, ಗೊನ್ಜಾಲೀಸ್ ರಿಂದ ನಿರೀಕ್ಷಿತ ಆಟ ಬರಲಿಲ್ಲ. ಸುಲಭವಾಗಿ ಕ್ವಾಟರ್ ಫೈನಲ್ ತಲುಪಿರುವ ಬ್ರೆಜಿಲ್, ಜು.2ರಂದು ಪೋರ್ಟ್ ಎಲಿಜಬೆತ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲೆಂಡ್ ಅನ್ನು ಎದುರಿಸಲಿದ್ದು, ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ.

English summary
Mighty Brazil side turned on the style to cruise past Chile and set up a mouth-watering quarter-final clash against Holland this Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X