ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದ ಘನತೆಗೆ ತಕ್ಕ ಆಟವಾಡಿದ ಘಾನಾ

By Mahesh
|
Google Oneindia Kannada News

A Gyan
ರುಸ್ಟನ್ ಬರ್ಗ್, ಜೂ.27: ಮತ್ತೊಮ್ಮೆ ಘಾನಾಗೆ ಗೆಲುವು ತಂದುಕೊಡುವಲ್ಲಿ ಗ್ಯಾನ್ ಮಹತ್ವದ ಪಾತ್ರವಹಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಉಳಿದಿರುವ ಆಫ್ರಿಕಾದ ಏಕೈಕ ತಂಡವಾಗಿರುವ ಘಾನಾ, ಅಮೆರಿಕವನ್ನು ಬಗ್ಗುಬಡಿದು ಮುನ್ನುಗ್ಗಿದ್ದಾರೆ.

ಪಂದ್ಯದ ಆರಂಭದ 5ನೇನಿಮಿಷದಲ್ಲಿ ಕೆವಿನ್ ಪ್ರಿನ್ಸ್ ಇಬ್ಬರು ಯುಎಸ್ ಡಿಫೆಂಡರ್ ಗಳ ಮಧ್ಯದಿಂದ ಮುನ್ನುಗ್ಗಿ ಆಕರ್ಷಕ ಗೋಲು ಹೋಡೆದು, ಅಮೆರಿಕಕ್ಕ್ಕೆ ಎಚ್ಚರಿಕೆ ನೀಡಿದರು. ಗೋಲು ಹೊಡೆಯಲು ಡೊನೊವನ್ ಪಡೆ ಮಾಡಿದ ಎಲ್ಲಾ ಪ್ರಯತ್ನಗಳನ್ನು ಘಾನಾದ ರಕ್ಷಣಾ ಪಡೆ ಸಮರ್ಥವಾಗಿ ತಡೆಗಟ್ಟಿತು.

ಪಂದ್ಯದ 61 ನೇ ನಿಮಿಷದಲ್ಲಿ ಪೆನಾಲ್ಟಿಕಿಕ್ ಮೂಲಕ ಡೊನೊವನ್ ಗೋಲು ಹೊಡೆದು ಸಮಬಲ ಸಾಧಿಸಿದರು. ಪಂದ್ಯದ ಪೂರ್ಣಾವಧಿ ಮುಗಿದರೂ ಎರಡು ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಮತ್ತೆ ಹತ್ತು ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಘಾನಾದ ಹೆಮ್ಮೆಯ ಆಟಗಾರ ಗ್ಯಾನ್ ಅದ್ಭುತವಾಗಿ ಗೋಲು ಹೊಡೆದು ಘಾನಕ್ಕೆ ಜಯ ತಂದು ಕೊಟ್ಟರು. ಜುಲೈ.2ರಂದು ನಡೆಯಲಿರುವ ಕ್ವಾಟರ್ ಫೈನಲ್ಸ್ ನಲ್ಲಿ ಘಾನಾ ತಂಡ ಉರುಗ್ವೆಯನ್ನು ಎದುರಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X