ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಅಂಗಿ ಚಡ್ಡಿ ಇಂಗ್ಲೀಷರಿಗೆ ಜಯ ತರಬಲ್ಲದೇ?

By Mahesh
|
Google Oneindia Kannada News

ಬ್ಲೋಮ್ ಫೌಂಟನ್ , ಜೂ.27:ಕೆಂಪು ದಿರಿಸಿನಲ್ಲಿ ಸ್ಲೊವೆನಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿಜೃಂಭಿಸಿದ್ದ ಇಂಗ್ಲೀಷರು, ನಾಕೌಟ್ ಹಂತದಲ್ಲಿ ಜರ್ಮನಿ ವಿರುದ್ಧ ಕೂಡಾ ಅದೇ ಬಣ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿಯಲಿದ್ದಾರೆ.

ಸಾಮಾನ್ಯವಾಗಿ ಒಮ್ಮೆ ಗೆದ್ದ ತಂಡವನ್ನು ಮುಂದಿನ ಪಂದ್ಯಕ್ಕೆ ಬದಲಿಸದೆ ಹಾಗೆ ಮುಂದುವರೆಸಲಾಗುತ್ತದೆ. ಆದರೆ, ಇಂಗ್ಲೆಂಡ್ ನ ನಂಬಿಕೆಯೊ, ಮೂಢತೆಯೊ ಗೆದ್ದಾಗ ತೊಟ್ಟ ಅಂಗಿ ಚಡ್ಡಿಯ ಬಣ್ಣವೇ ಇರಲಿ ಎಂದು ತೀರ್ಮಾನಿಸಿದ್ದಾರೆ. ಇಂಗ್ಲೀಷರು ಮೈದಾನಕ್ಕೆ ಹೇಗೆ ಇಳಿಯಲಿ ನಮಗೇನೂ ಭಯವಿಲ್ಲ ಎಂದು ಜರ್ಮನಿಯ ಮೇರು ಆಟಗಾರ ಪೊಡೊಲಸ್ಕಿ ಹೇಳಿದ್ದಾರೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಹಳೆ ವೈರಿಗಳ ಕದನಕ್ಕೆ ಬ್ಲೊಮ್ ಫೌಟೇನ್ ಮೈದಾನ ಅಣಿಯಾಗಿದ್ದು, ಜೂ.27 ರ ಮಧ್ಯರಾತ್ರಿ ಕೆಂಪು ಕಪ್ಪು ದಿರಿಸಿನ ಯೋಧರ ಕಾಳಗ ರೋಮಾಂಚನಕಾರಿಯಾಗಲಿದೆ. ವಿಶ್ವಕಪ್ ಆರಂಭದಲ್ಲಿ ಎಲ್ಲರ ಕಣ್ಣು ವೇಯ್ನ್ ರೂನಿ ಮೇಲಿತ್ತು. ಆದರೆ, ಈಗ ಜೆರಾರ್ಲ್ಡ್ ಹಾಗೂ ಡೆಫೋ ಮೇಲೆ ತಿರುಗಿದೆ. ಜರ್ಮನಿಯ ತಂಡಕ್ಕೆ ಕ್ಲೋಸ್ ಮರಳುವ ಸಾಧ್ಯತೆಯಿದ್ದು, ಪೊಡಲಸ್ಕಿ ಜೊತೆ ಆಕ್ರಮಣಕಾರಿ ಆಟ ಆಡಲಿದ್ದಾರೆ.

ವಿಶ್ವಕಪ್ ಇತಿಹಾಸಲ್ಲಿ ಜರ್ಮನಿ ವಿರುದ್ಧ ಇಂಗ್ಲೆಂಡ್ ಉತ್ತಮ ಫಲಿತಾಂಶ ಹೊಂದಿದ್ದರೂ, ಪ್ರಸಕ್ತ ಟೂರ್ನಿಯಲ್ಲಿ ಜರ್ಮನಿ ತನ್ನ ಸಹಜ ಆಟದಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ, ಇಂಗ್ಲೆಂಡ್ ರಕ್ಷಣಾ ಪಡೆ ಸಶಕ್ತವಾಗಿದ್ದರೂ, ಜಮರ್ನಿಯನ್ನು ಮಣಿಸಬೇಕಾದರೆ ರೂನಿ, ಜೆರಾಲ್ಡ್ ,ಲ್ಯಾಂಪರ್ಡ್ ಘನತೆಗೆ ತಕ್ಕ ಆಟ ಆಡಲೇಬೇಕಾಗಿದೆ.

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಆಸೀಸ್ ವಿರುದ್ಧ ಭರ್ಜರಿ ಆಟವಾಡಿದ್ದ ಜರ್ಮನ್ನರು, ಸೆರ್ಬಿಯಾ ವಿರುದ್ಧ ಸೋತು ಸ್ವಲ್ಪ ಆತ್ಮವಿಶ್ವಾಸ ಕಳೆದುಕೊಂಡರೂ, ಘಾನಾ ವಿರುದ್ಧ ಓಜೆಲ್ ಉತ್ತಮ ಆಟ ಪ್ರದರ್ಶಿಸಿದ್ದು, ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಂತಾಗಿದೆ. ಲಾಹ್ಮ್,ಪೊಡಲ್ ಸ್ಕಿ, ಕ್ಲೊಸ್ ವುಳ್ಳ 4-5-1ಮಾದರಿ ಆಕ್ರಮಣಕಾರಿ ರಚನೆಯೊಂದಿಗೆ ಜರ್ಮನಿ ಇಳಿಯುವ ಸಾಧ್ಯತೆಯಿದೆ.

ಪಂದ್ಯದ ಆರಂಭ ಹಂತದಲ್ಲಿ ಗೋಲು ಗಳಿಸುವ ತಂಡಕ್ಕೆ ಮೇಲುಗೈ ಸಾಧಿಸುವ ಎಲ್ಲಾ ಅವಕಾಶ ಲಭ್ಯವಾಗಲಿದೆ. ಹಾಗಾಗಿ, ಜರ್ಮನಿ 2-1 ಅಂತರದಿಂದ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಬುಕ್ಕಿಗಳು. ಇಂಗ್ಲೆಂಡ್ ಗೆಲ್ಲಲು ಸಂಘಟಿತ ಹೋರಾಟ ಅಗತ್ಯ. ಕೆಪೆಲೋ ನಿರ್ಧರಿಸುವ ಕಾಂಬಿನೇಷನ್ ಹಾಗೂ ಗೇಮ್ ಪ್ಲಾನ್ (4-4-2)ಕುತೂಹಲ ಹುಟ್ಟಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X