ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಷಿಬಾದಿಂದ ಅದ್ಭುತ ಲ್ಯಾಪ್ ಟಾಪ್ ಅನಾವರಣ

By Mahesh
|
Google Oneindia Kannada News

World's 1st dual screen e-book laptop from Toshiba
ಬೆಂಗಳೂರು, ಜೂ.27 : ತೋಷಿಬಾ ಕಾರ್ಪೊರೇಷನ್ ವಿಶ್ವದ ಮೊದಲ ಡ್ಯುಯೆಲ್ ಟಚ್ ಸ್ಕ್ರೀನ್ ಲ್ಯಾಪ್ ಟಾಪ್ ನ್ನು ಬಿಡುಗಡೆಗೊಳಿಸಿದೆ . ಲಿಬ್ರೆಟ್ಟೊ ಡಬ್ಲ್ಯೂ 100 ಎಂದು ಹೆಸರಿಸಲಾಗಿರುವ ಈ ಮಿನಿ ಲ್ಯಾಪ್ ಟಾಪ್ ನ್ನು ತೊಷಿಬಾದ 25 ನೇ ರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಮಾಡಲಾಗಿದೆ .

ಲಿಬ್ರೆಟ್ಟೊ ತೊಷಿಬಾದ ಇಂಜಿನಿಯರಿಂಗ್ ದಕ್ಷತೆ ಹಾಗೂ ಕೌಶಲ್ಯಕ್ಕೆ ಈ ಲ್ಯಾಪ್ ಟಾಪ್ ಸಾಕ್ಷಿಯಾಗಿದ್ದು 7 ಇಂಚುಗಳ ಎರಡು ಸ್ಕ್ರೀನ್ ಹೊಂದಿದೆ . ಈ ಲ್ಯಾಪ್‌ಟಾಪ್ ನ್ನು ಅಡ್ಡವಾಗಿಯೂ ಮತ್ತು ಪತ್ರಿಕೆ ಓದುವಂತೆ ಲಂಬವಾಗಿಯೂ ಬಳಸಬಹುದಾಗಿದೆ . ಬರೇ ಬೆರಳಿನಿಂದಲೇ ಫೈಲುಗಳನ್ನು ಹಾಗೂ ವಿಷಯಗಳನ್ನು ಒಂದು ಸ್ಕ್ರೀನ್ ನಿಂದ ಇನ್ನೊಂದಕ್ಕೆ ಎಳೆದು ಬಿಡಬಹುದಾಗಿದೆ .

ಸುಮಾರು 819 ಗ್ರಾಂ ತೂಕುವ ಲ್ಯಾಪ್ ಟಾಪ್, ಹಗುರವಾದ ಲ್ಯಾಪ್ ಟಾಪ್ ಎಂದು ದಾಖಲಾಗಿದೆ. ಇ ಬುಕ್, ಇ ಪೇಪರ್ ಓದುವವರಿಗೆ ಅನುಕೂಲಕರವಾಗಿ ಟಚ್ ಸ್ಕ್ರೀನ್ ವಿನ್ಯಾಸಗೊಳಿಸಲಾಗಿದೆ. ಪೆಂಟಿಯಂ U5400 processor, 2Gb RAM ,62 GB SSD ಜೊತೆಗೆ 1 mega pixel webcam, ಬೆಲೆ ಸುಮಾರು 75,000.

ತೊಷಿಯಾ ಇಂಡಿಯಾ 2010 ರಲ್ಲಿ ತನ್ನ ವಹಿವಾಟನ್ನು ಮೂರುಪಟ್ಟು ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಸುಮಾರು 55 ನಗರಗಳಲ್ಲಿ 800 ಮಳಿಗೆಗಳನ್ನು ಆರಂಭಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X