ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಡು ತೀರಿಸಿಕೊಳ್ಳಲು ಮೆಕ್ಸಿಕೋ ತಹತಹ

By Prasad
|
Google Oneindia Kannada News

Raefel Marquez, Mexico captain
ಜೋಹಾನ್ಸ್ ಬರ್ಗ್, ಜೂ. 26 : 2006ರಲ್ಲಿ ಅರ್ಜೆಂಟಿನಾ ವಿರುದ್ಧ ಅನುಭವಿಸಿದ ಸೋಲಿನ ಸೇಡನ್ನು ತೀರಿಸುಕೊಳ್ಳಲು ಮೆಕ್ಸಿಕೋ ತಂಡ ತಹತಹಿಸುತ್ತಿದೆ. ಇಂದು ಭಾರತೀಯ ಕಾಲಮಾನ ರಾತ್ರಿ 12 ಗಂಟೆಗೆ ಆರಂಭವಾಗುತ್ತಿರುವ ನಾಕೌಟ್ ಪಂದ್ಯದಲ್ಲಿ ರೋಚಕ ಪಂದ್ಯ ನಡೆಯಲಿದೆ.

2006ರಲ್ಲಿ ಇದೇ ಹಂತದಲ್ಲಿ ಮೆಕ್ಸಿಕೋ ತಂಡ ಅರ್ಜೆಂಟಿನಾ ವಿರುದ್ಧ ಸೋತು ವಿಶ್ವಕಪ್ ನಿಂದ ಹೊರಬಿದ್ದಿತ್ತು. 1970 ಮತ್ತು 1986ರಲ್ಲಿ ಮಾತ್ರ ಕ್ವಾರ್ಟರ್ ಫೈನಲ್ ತಲುಪಲು ಮೆಕ್ಸಿಕೋ ಸಫಲವಾಗಿತ್ತು.

ಉರುಗ್ವೆ ವಿರುದ್ಧ ಏಕೈಕ ಗೋಲಿನಿಂದ ಸೋತ ಮೆಕ್ಸಿಕೋ ಭಾರೀ ಒತ್ತಡದಲ್ಲಿದೆ. ಸೋಲಿಗೆ ಅಭಿಮಾನಿಗಳಿಂದ ಮತ್ತು ಮಾಧ್ಯಮಗಳಿಂದ ಕೂಡ ಟೀಕೆ ಎದುರಿಸಿತ್ತು ಮೆಕ್ಸಿಕೋ. ಆದರೆ, ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿರುವ ಡಿಯಾಗೋ ಮರಡೋನಾ ಕೈಕೆಳಗೆ ಪಳಗಿರುವ ಅರ್ಜೆಂಟಿನಾ ಭರ್ಜರಿ ಗೆಲುವುಗಳಿಂದ ಮತ್ತು ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಅರ್ಜೆಂಟಿನಾದ ಪ್ರಮುಖ ಆಟಗಾರ ಮೆಸ್ಸಿಯನ್ನು ಕಟ್ಟಿಹಾಕಲು ಮತ್ತು ಗೋಲು ಹೊಡೆಯದಂತೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಮೆಕ್ಸಿಕೋ ನಾಯಕ ಮಾರ್ಕ್ವೆಜ್ ಹೇಳಿದ್ದಾರೆ. ಮೆಸ್ಸಿ ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸಬಲ್ಲ. ಆತನಿಗೆ ಚೆಂಡು ಸಿಗದಂತೆ ಮಾಡುವುದು ನಮ್ಮ ಗುರಿ ಎಂದು ಮಾರ್ಕ್ವೆಜ್ ನುಡಿದಿದ್ದಾರೆ.

ನೆದರ್ಲ್ಯಾಂಡ್ ಹೊರತುಪಡಿಸಿದರೆ ಅರ್ಜೆಂಟಿನಾ ಮಾತ್ರ ಈ ವಿಶ್ವಕಪ್ ನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಎರಡೂ ತಂಡಗಳ ತಾಳಮೇಳ ಗಮನಿಸಿದರೆ ಅರ್ಜೆಂಟಿನಾ ಖಂಡಿತ ಗೆಲ್ಲುವ ಫೆವರಿಟ್ ತಂಡವಾಗಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದರೂ ಅರ್ಜೆಂಟಿನಾ ಗ್ರೀಸ್ ವಿರುದ್ಧ ವಿಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲಿ ಟಾವೆಜ್ ಮತ್ತು ಹಿಗ್ವೇನ್ ತಂಡಕ್ಕೆ ಮರಳುತ್ತಿರುವುದರಿಂದ ಮತ್ತಷ್ಟು ಬಲಿಷ್ಠವಾಗಲಿದೆ.

ಈ ಪಂದ್ಯದಲ್ಲಿ ಗೆಲುವು ಸಾಧಿಸಿದವರು ಕ್ವಾರ್ಟರ್ ಫೈನಲ್ ನಲ್ಲಿ ಭಾನುವಾರ ಇಂಗ್ಲೆಂಡ್ ಅಥವಾ ಜರ್ಮನಿಯನ್ನು ಎದುರಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X