ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಪ್ಪನಿಗೆ ಷರತ್ತುಬದ್ಧ ಜಾಮೀನು ಮಂಜೂರು

By Mahesh
|
Google Oneindia Kannada News

Halappa gets bail
ಬೆಂಗಳೂರು, ಜೂ. 24: ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಗುರುವಾರ ಷರತ್ತು ಬದ್ದ ಜಾಮೀನು ನೀಡಿದೆ. ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪದಲ್ಲಿ ಬಂಧಿತರಾಗಿ ಹಾಲಪ್ಪ ಅವರು ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮುಕ್ತರಾಗಬಹುದು.

ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಆದೇಶದ ಪ್ರತಿಯನ್ನು ಶಿವಮೊಗ್ಗ ಕೋರ್ಟ್‌ಗೆ ಹಾಜರುಪಡಿಸಿ, ಅಲ್ಲಿಂದ ಬಿಡುಗಡೆಯ ಅನುಮತಿ ಪಡೆಯಬೇಕು. ನಂತರ ಶಿವಮೊಗ್ಗ ಠಾಣೆಗೆ ಹಾಜರಾಗಬೇಕಾಗಿದೆ. ಈ ಪ್ರಕರಣದಲ್ಲಿ ವೆಂಕಟೇಶ್, ಚಂದ್ರಾವತಿ ಕುಟುಂಬದವರು ಸೇರಿದಂತೆ ಸುಮಾರು 41 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಜಾಮೀನು ಮಂಜಾರಾತಿಗೆ ಪ್ರಾಸಿಕ್ಯೂಟರ್ ನಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ ಎಂದು ಹಾಲಪ್ಪ ಪರ ವಕೀಲ ಅಶೋಕ್ ಭಟ್ ತಿಳಿಸಿದರು.

ಷರತ್ತುಗಳೇನು:
*ಹಾಲಪ್ಪ ಅವರು 15 ದಿನಕ್ಕೊಮ್ಮೆ ಶಿವಮೊಗ್ಗ ಠಾಣಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು.
* ಶಿವಮೊಗ್ಗದಿಂದ ಹೊರಹೋಗಬೇಕಿದ್ದರೆ ಮ್ಯಾಜಿಸ್ಟ್ರೇಟ್ ಅವರ ಪರವಾನಿಗೆ ಅಗತ್ಯ.
* ತನಿಖೆಗೆ ಸಹಕರಿಸಬೇಕು.ಸಾಕ್ಷ್ಯ ನಾಶ, ಸಾಕ್ಷಿಗಳಿಗೆ ಬೆದರಿಕೆ ಒಡ್ಡುವಂತಿಲ್ಲ
* 1ಲಕ್ಷರು ವೈಯಕ್ತಿಕ ಬಾಂಡ್ ಭದ್ರತಾ ಠೇವಣಿ ನೀಡಬೇಕು
*ಇಬ್ಬರ ಷ್ಯೂರಿಟಿ ಸಹಿ ಜಾಮೀನು ಮಂಜೂರು ಮಾಡಲು ಅಗತ್ಯ.

ವೆಂಕಟೇಶ್ ಮೂರ್ತಿ ಅವರ ಪತ್ನಿ ಚಂದ್ರಾವತಿ ಮೇಲಿನ ನೀಡಿರುವ ಅತ್ಯಾಚಾರ ಆರೋಪ ಪ್ರಕರಣ ಕುರಿತಂತೆ ಹಾಲಪ್ಪ ಅವರ ವಿಚಾರಣೆ ಪೂರ್ಣಗೊಂಡಿದ್ದು, ಇನ್ನು ಅವರ ತನಿಖೆಯ ಅಗತ್ಯವಿಲ್ಲ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಒಂದು ದಿನವೂ ಸೆರೆಮನೆವಾಸ ಅನುಭವಿಸದ ಹಾಲಪ್ಪ ಅವರಿಗೆ ಕೊನೆಗೂ ಜಾಮೀನು ಸಿಕ್ಕಿರುವುದು ತಾತ್ಕಾಲಿಕ ರಿಲೀಫ್ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X