ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ದಿನಗಳಲ್ಲಿ 3 ಮಿಲಿಯನ್ ಐಪ್ಯಾಡ್ ಮಾರಾಟ

By Mahesh
|
Google Oneindia Kannada News

ಹೂಸ್ಟನ್ , ಜೂ.24:ಐ ಪ್ಯಾಡ್ ಬಿಡುಗಡೆ ಮಾಡಿದ 80 ದಿನದಲ್ಲಿ ಆಪಲ್ ಕಂಪೆನಿ ಮೂರು ಮಿಲಿಯ ಐ ಪ್ಯಾಡ್ ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೆ ಕಂಪೆನಿ ಹೊಸ ಐ ಫೋನ್ 4ನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಈಗಾಗಲೇ 6 ಲಕ್ಷ ಆರ್ಡರ್ ಗಳಿವೆ.

ಆಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಅವರು ಜನರು ಐ ಪ್ಯಾಡ್ ಗಳನ್ನು ಹೆಚ್ಚು ಇಷ್ಟಪಡುತ್ತಿದ್ದು ಇದು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು. ಮುಂದಿನ ತಿಂಗಳು 9 ದೇಶಗಳಲ್ಲಿ ಈ ಐಪ್ಯಾಡ್ ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, 11,000 ಹೊಸ ಅಪ್ಲಿಕೇಷನ್ ಗಳನ್ನು ಸೃಷ್ಟಿ ಮಾಡಲಾಗಿದೆ ಎಂದರು.

ಆಪಲ್ ಈಗ ತಿಂಗಳಿಗೆ ಒಂದು ಮಿಲಿಯನ್ ಐಪ್ಯಾಡ್ ಗಳನ್ನು ಮಾರಾಟ ಮಾಡುತ್ತಿದೆ. ಐಪ್ಯಾಡ್ ಈಗ ಅಮೆರಿಕ ಹೊರತುಪಡಿಸಿ ಫ್ರಾನ್ಸ್, ಜರ್ಮನಿ, ಕೆನಡಾ ಮತ್ತು ಜಪಾನ್ ನಲ್ಲಿ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X