ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16ರ ಹಂತಕ್ಕೆ ಏಷ್ಯನ್ ಟೈಗರ್ಸ್ ದ.ಕೊರಿಯಾ

By Mahesh
|
Google Oneindia Kannada News

Yakubu
ಡರ್ಬನ್ ,ಜೂ.23: ಫೀಫಾ ವಿಶ್ವಕಪ್ ನ ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಏಷ್ಯನ್ ಟೈಗರ್ಸ್ ದಕ್ಷಿಣ ಕೊರಿಯಾ ಆಫ್ರಿಕಾದ ಬಲಿಷ್ಠ ನೈಜೀರಿಯಾ ತಂಡದೊಡನೆ 2-2ರ ಡ್ರಾ ಸಾಧಿಸಿ, ಅಂಕಗಳ ಆಧಾರದ ಮೇಲೆ ಬಿ ಗುಂಪಿನಿಂದ ಎರಡನೇ ತಂಡವಾಗಿ16 ರ ಹಂತವನ್ನು ತಲುಪಿದೆ. ನಾಕೌಟ್ ಹಂತದಲ್ಲಿ ಎ ಗುಂಪಿನ ಅಗ್ರಸ್ಥಾನ ಪಡೆದ ಪ್ರಬಲ ಉರುಗ್ವೆ ವಿರುದ್ಧ ದಕ್ಷಿಣ ಕೊರಿಯಾ ಸೆಣಸಲಿದೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಈ ಪಂದ್ಯ ದಕ್ಷಿಣ ಕೊರಿಯಾ, ನೈಜೀರಿಯಾ ನಡುವಿನ ಪಂದ್ಯ ಗ್ರೀಸ್ ಗೆ ಹೆಚ್ಚಿನ ಮಹತ್ವದ್ದಾಗಿತ್ತು. ಪಂದ್ಯದ ಫಲಿತಾಂಶದ ಮೇಲೆ ಕಣ್ಣಿರಿಸಿದ್ದ ಗ್ರೀಸ್ ಅತ್ತ ಅರ್ಜೆಂಟೀನಾ ವಿರುದ್ಧ ಸೋತು ಸುಣ್ಣವಾಯಿತು. ಲೀಗ್ ಪಂದ್ಯದಲ್ಲಿ ಗ್ರೀಸ್ ಆನ್ನು ಮಣಿಸಿದ್ದ ಕೊರಿಯಾ, ಅರ್ಜೆಂಟಿನಾ ವಿರುದ್ಧ ಸೋಲುಂಡರು ಕೊನೆಯ ಪಂದ್ಯದಲ್ಲಿ ಡ್ರಾ ಸಾಧಿಸುವ ಭರವಸೆ ಹೊಂದಿತ್ತು.

ಎಂಥಾ ಛಾನ್ಸ್ ಮಿಸ್ ಯಕುಬೂ: ಆದರೆ, ನೈಜೀರಿಯಾ, ಅರ್ಜೆಂಟೀನಾ ಹಾಗೂ ಗ್ರೀಸ್ ವಿರುದ್ಧ ಸೋತು ನಿರ್ಗಮಿಸುವ ಹಾದಿಯಲ್ಲಿತ್ತು. ಕೊನೆ ಪಂದ್ಯದಲ್ಲಿ ಕೊಂಚ ಹೋರಾಟ ತೋರಿ ಕೊರಿಯಾ ವಿರುದ್ದ ಡ್ರಾ ಸಾಧಿಸಿತ್ತು ಸಾಧನೆ ಎನ್ನಬಹುದು.

ಆದರೆ, ಈ ಪಂದ್ಯದಲ್ಲಿ ನೈಜೀರಿಯಾ ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ, ಇದುವರೆವಿಗೂ ನಡೆದಿರುವ ಪಂದ್ಯಗಳಲ್ಲೇ ಅತ್ಯಂತ ಕಳಪೆ ಆಟ (ಗೋಲ್ ಮಿಸ್ ಮಾಡಿದ್ದು) ಎಂಬ ಅಪಕೀರ್ತಿಗೆ ನೈಜೀರಿಯಾದ ಯಕುಬೂ ಪಾತ್ರರಾದರು. ಆದರೆ, ತಾನು ಮಾಡಿದ ತಪ್ಪನ್ನು ತಿದ್ದಿಕೊಂಡು ಸಿಕ್ಕ ಪೆನಾಲ್ಟಿಯನ್ನು ಗೋಲಾಗಿಸಿದರೂ ಕಾಲ ಮಿಂಚಿತ್ತು. 3-2 ರಿಂದ ಪಂದ್ಯ ಗೆಲ್ಲಬೇಕಿದ್ದ ನೈಜೀರಿಯಾ ತಂಡ ನಿರಾಸೆ ಮೂಡಿಸಿತ್ತು.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಆದದಿಷ್ಟು, ಎಡಬದಿಯಿಂದ ಪಾಸ್ ಪಡೆದ ಯಕುಬೂ ತನ್ನಿಂದ ಕೇವಲ ಮೂರು ಯಾರ್ಡ್ ದೂರವಿದ್ದ ಖಾಲಿ ಗೋಲ್ ಪೋಸ್ಟ್ ನೊಳಗೆ ಒದೆಯಲಾಗದೆ ಪಕ್ಕಕ್ಕೆ ಒದ್ದು ತಲೆ ಮೇಲೆ ಕೈ ಹೊತ್ತು ನಿಂತಿದ್ದು, ನಾಚಿಕೆಗೇಡಿನ ವಿಷಯವಾಗಿತ್ತು. ಗೋಲ್ ಕೀಪರ್ ಇಲ್ಲದ ಮೂರು ಹೆಜ್ಜೆ ಇಟ್ಟರೆ ಗೋಲಿನೊಳಗೆ ತೂರಬಹುದಾದಂಥ ಅವಕಾಶವಿದ್ದರೂ ಯಕುಬೂ ಒದ್ದ ಚೆಂಡು ಗೋಲ್ ಪೋಸ್ಟ್ ದಾಟಿ ದೂರ ಸಾಗಿತ್ತು.

ಈ ಪಂದ್ಯದಲ್ಲಿ ತೋರಿದ ಪರಕ್ರಾಮವನ್ನು ಹಿಂದಿನ ಎರಡು ಪಂದ್ಯಗಳಲ್ಲಿ ತೋರಿದ್ದರೆ ನೈಜೀರಿಯಾಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಉಚೆ ಹೊಡೆದ ಗೋಲಿಗೆ ಯಕುಬೂ ಪೆನಾಲ್ಟಿ ಗೋಲು ಸೇರಿದರೂ ಗೆಲ್ಲಲಾಗಲಿಲ್ಲ. ಲೀ ಜಂಗ್ ಸೂ ಹಾಗೂ ಪಾರ್ಕ್ ಚೂ ಯಂಗ್ ತಲಾ ಒಂದು ಗೋಲು ಗಳಿಸಿ ಕೊರಿಯಾವನ್ನು ಮುಂದಿನ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X