ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮಹಿಳೆಯರಿಗೆಲ್ಲ ಮೈಸೂರು ರೇಷ್ಮೆ ಸೀರೆ

By Mahesh
|
Google Oneindia Kannada News

Mysore Silks
ಬೆಂಗಳೂರು, ಜೂ.20: ದೇಶದೆಲ್ಲೆಡೆ ಮೈಸೂರು ರೇಷ್ಮೆ ಮಳಿಗೆಗಳನ್ನು ಆರಂಭಿಸಿ, ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ರೇಷ್ಮೆ ಸೀರೆಗಳನ್ನು ಇಡೀ ದೇಶಕ್ಕೆ ಪರಿಚಯಿಸುವ ಕಾಯಕಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಸಿಪಿ ಸಿಪಿ ಯೋಗೀಶ್ವರ್ ಮುಂದಾಗಿದ್ದಾರೆ.

ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಸುಮಾರು 14 ಹೊಸ ಮೈಸೂರು ಸಿಲ್ಕ್ ಷೋರೂಮ್ ಗಳು ಆರಂಭಿಸಲಾಗುವುದು. ಬೆಂಗಳೂರಿನ ವಿದ್ಯಾರಣ್ಯಪುರ, ಯುಟಿಲಿಟೀ ಬಿಲ್ಶೀಂಗ್ ,ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಹೊಸ ಮಳಿಗೆಗಳು ಆರಂಭವಾಗಲಿದೆ.

ಬಡವರಿಗೆ ಸಿಲ್ಕ್ ಸ್ಯಾರಿ: ಸುಮಾರು 80 ಬಗೆ ಹೊಸ ವಿನ್ಯಾಸದ ಸೀರೆಗಳು, ಈಗಿರುವ 16 ಹಾಗೂ ಪ್ರಾರಂಭವಾಗಲಿರುವ 14 ಮಳಿಗೆಗಳಲ್ಲಿ ಲಭ್ಯವಾಗಲಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಸುಮಾರು 2 ಸಾವಿರಕ್ಕೆ ಉತ್ತಮವಾದ ರೇಷ್ಮೆ ಸೀರೆಗಳು ದೊರೆಯಲಿದೆ. ಪುರುಷರಿಗೆ ಆಕರ್ಷಕ ಜುಬ್ಬಾ ಕೂಡಾ ಮಾರಾಟ ಮಾಡಲಾಗುವುದು.

ಯೋಜನೆಗಳು, ದಾಖಲೆಗಳು: ಚನ್ನಪಟ್ಟಣದಲ್ಲಿ ಸ್ಪನ್ ಸಿಲ್ಕ್ ಕಾರ್ಖಾನೆ ಪುನರಾಂಭಿಸಲಾಗುವುದು, ಮೈಸೂರು ಮೃಗಾಲಯದ ಎದುರು ಬೃಹತ್ ಸಿಲ್ಕ್ ಷೋರೂಮ್ ನಿರ್ಮಾಣ ಮಾಡಲಾಗುವುದು. 2 ಕೋಟಿ ರು. ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೆ ಸ್ಮಾರಕ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅನ್ ಲೈನ್ ನಲ್ಲೂ ಸೀರೆ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

2008-09ರಲ್ಲಿ ಮೈಸೂರು ಸಿಲ್ಕ್ ಷೋರೂಮ್ ಗಳಿಂದ 71 ಸಾವಿರ ಸೀರೆ ಮಾರಾಟ ಮಾಡಲಾಗಿದೆ. 2009-10ರಲ್ಲಿ ಮಾರಾಟ ಸಂಖ್ಯೆ 75 ಸಾವಿರಕ್ಕೇರಿದೆ. ಒಟ್ಟಾರೆ 7.5 ಕೋಟಿ ರು ಲಾಭ ಗಳಿಸಿದೆ ಎಂದು ಯೋಗೀಶ್ವರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X