ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟಿನಾ ವಿರುದ್ಧ ಗ್ರೀಸ್ ಪವಾಡ ಮಾಡುವುದೆ?

By Prasad
|
Google Oneindia Kannada News

Group B: Argentina Vs Greece Preview
ಜೋಹಾನ್ಸ್ ಬರ್ಗ್, ಜೂ. 22 : ನೈಜೀರಿಯಾ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿರುವ ಅರ್ಜೆಂಟಿನಾ ಫೀಫಾ ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಗ್ರೀಸ್ ತಂಡವನ್ನು ಎದುರಿಸಲಿದೆ. ಭಾರತೀಯ ಕಾಲಮಾನ ರಾತ್ರಿ ಹನ್ನೆರಡು ಗಂಟೆಗೆ ಆಟ ಆರಂಭವಾಗುತ್ತದೆ.

ಡ್ರಾ ಅಥವಾ ಎರಡು ಗೋಲುಗಳ ಅಂತರದಲ್ಲಿ ಗ್ರೀಸ್ ವಿರುದ್ಧ ಸೋತರೂ ಅರ್ಜೆಂಟಿನಾ ಸುಸೂತ್ರವಾಗಿ ಹದಿನಾರರ ಹಂತ ತಲುಪಲಿದೆ. ಕೊರಿಯಾ ವಿರುದ್ಧ ಸೋತು, ನೈಜೀರಿಯಾ ವಿರುದ್ಧ ಜಯ ಸಾಧಿಸಿರುವ ಗ್ರೀಸ್ ಇಂದು ಭಾರೀ ಅಂತರದ ಗೆಲುವಿಗೆ ಯತ್ನಿಸಬೇಕಿದೆ.

ನಾಕ್ ಔಟ್ ಹಂತ ತಲುಪಬೇಕಿದ್ದರೆ ಗ್ರೀಸ್ ಕನಿಷ್ಠ ಮೂರು ಗೋಲುಗಳ ಅಂತರದಿಂದ ಗೆಲ್ಲಬೇಕು. ಆದರೆ, ಅದ್ಭುತ ಲಯದಲ್ಲಿರುವ ಅರ್ಜೆಂಟಿನಾ ತಂಡದೆದಿರು ಈ ಜಯ ಸಾಧ್ಯವೆ ಎಂಬುದು ಫುಟ್ಬಾಲ್ ಪಂಡಿತರ ಲೆಕ್ಕಾಚಾರ. ಭಾರೀ ಅಂತರದ ಜಯ ಸಾಧ್ಯವಾಗದಿದ್ದರೆ ನೈಜೀರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯದ ಫಲಿತಾಂಶ ಬರುವವರೆಗೆ ಕಾಯಬೇಕು.

ಎರಡು ಪಂದ್ಯಗಳ ಗೆಲುವಿನಿಂದ ಬೀಗುತ್ತಿರುವ ಡಿಯಾಗೋ ಮರಡೋನಾ ಸದ್ಯಕ್ಕೆ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿ ತಲುವುವ ತವಕದಲ್ಲಿದ್ದಾರೆ. ಗ್ರೀಸ್ ವಿರುದ್ಧ ಡ್ರಾ ಸಾಧಿಸಿದರೂ ಕೂಡ ಗುಂಪಿನಲ್ಲಿ ಅರ್ಜೆಂಟಿನಾ ಅಗ್ರಸ್ಥಾನಕ್ಕೆ ತಲುಪಲಿದೆ. ಈ ಪಂದ್ಯದಲ್ಲಿ ನಾಯಕ ಜೇವಿಯರ್ ಮ್ಯಾಸ್ಚೆರಾನೋ, ಕಾರ್ಲೋಸ್ ಟಾವೆಜ್, ಮೊದಲ ಹ್ಯಾಟ್ರಿಕ್ ಬಾರಿಸಿದ್ದ ಗೊಂಜಾಲೋ ಹಿಗ್ವೇನ್ ಮತ್ತು ಮೆಸ್ಸಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇವೆರಡೂ ತಂಡಗಳು ಕೊನೆಯಬಾರಿ ಸಂಧಿಸಿದ್ದು 1994ರಲ್ಲಿ ಮತ್ತು ಆ ಪಂದ್ಯದಲ್ಲಿ ಡಿಯಾಗೋ ಮರಡೋನಾ ತಮ್ಮ 34ನೇ ಕೊನೆಯ ಅಂತಾರಾಷ್ಟ್ರೀಯ ಗೋಲು ಗಳಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X