• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಕಾರನ್ನು ಬಲೆಗೆ ಬೀಳಿಸಿದವನಿಗೆ ಆಸ್ಕರ್?

By Mahesh
|

ಜೋಹಾನ್ಸ್ ಬರ್ಗ್, ಜೂ.22: ಛೇ! ಹೀಗಾಗಬಾರದಿತ್ತು...ಇದು ಎಲ್ಲರ ಒಕ್ಕೊರಲ ಉದ್ಗಾರ. ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ಕಾಕಾರನ್ನು ಫ್ರೆಂಚ್ ರೆಫ್ರಿ ಸ್ಟಿಫನ್ ನೊಯ್ ವಿನಾಕಾರಾಣ ಮೈದಾನದಿಂದ ಹೊರಕ್ಕೆ ಕಳಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಪಂದ್ಯದಲ್ಲಿ ಎರೆಡೆರಡು ಹ್ಯಾಂಡ್ ಬಾಲ್ ಆದರೂ ರೆಫ್ರಿ ಕಣ್ಣಿಗೆ ಬೀಳದೇ ಹೋದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಹಳದಿ ಕಾರ್ಡ್ ನಿಯಮಕ್ಕೆ ಬದಲಾವಣೆ ತಂದಿದ್ದೇವೆ. ಸ್ಟಾರ್ ಆಟಗಾರರನ್ನು ಮುಂದಿನ ಹಂತದವರೆಗೂ ಉಳಿಸಿಕೊಳ್ಳಲಾಗುವುದು ಎಂದು ಫೀಫಾ ಇತ್ತೀಚೆಗೆ ಬೊಬ್ಬೆ ಹಾಕಿದ್ದು, ಬಹುಶಃ ಫ್ರಾನ್ಸ್ ನ ರೆಫ್ರಿ ಕಿವಿಗೆ ಬಿದ್ದಂತ್ತಿಲ್ಲ.

ಬ್ರೆಜಿಲ್ ಹಾಗೂ ಐವರಿ ಕೋಸ್ಟ್ ಪಂದ್ಯದಲ್ಲಿ ಅಬ್ದುಲ್ ಕದರ್ ಕೈಟ ನಾಟಕೀಯವಾಗಿ ಬಿದ್ದು,ಮುಖಮುಚ್ಚಿಕೊಂಡದ್ದನ್ನು ನೋಡಿದ ರೆಫ್ರಿಗೆ ಕರ್ತವ್ಯ ಜಾಗೃತಿಕೊಂಡು, ಮೊದಲೇ ಹಳದಿ ದಿರಿಸಿನಲ್ಲಿ ಸುಂದರವಾಗಿ ಕಾಣುತ್ತಿದ್ದ ಕಾಕಾಗೆ ಹಳದಿ ಕಾರ್ಡ್ ತೋರಿಸಿ, ಎರಡನೇ ಹಳದಿ ಕಾರ್ಡ್ ಪಡೆದ ಮೈದಾನದಿಂದ ಹೊರಗಟ್ಟಿಬಿಟ್ಟ.

ನಿಜ. ಮರಡೋನಾ ಸುಮ್ಮನೆ ಏನೇನೊ ಬಡಬಡಾಯಿಸುವ ಪೈಕಿಯಲ್ಲ. ಅರ್ಜೆಂಟೀನಾದ ಸ್ಟಾರ್ ಆಟಗಾರರಾದ ಮೆಸ್ಸಿ, ಟೆವೆಜ್ ಗೆ ಎದುರಾಳಿ ತಂಡದ ಒರಟಾಟದಿಂದ ರಕ್ಷಣೆ ಬೇಕಿದೆ ಎಂದಿದ್ದರು. ಈ ಮಾತು ಬ್ರೆಜಿಲ್ ಆಟಗಾರರಿಗೂ ಅನ್ವಯಿಸುತ್ತದೆ. ತನ್ನದಲ್ಲದ ತಪ್ಪಿಗೆ ಕಾಕಾ ಬಲಿಯಾಗಿದ್ದಾರೆ.

ಮಾಧ್ಯಮಗಳು ಐವರಿ ಕೋಸ್ಟ್ ಆಟಗಾರ ಕೈಟರನ್ನು ಸಕತ್ತಾಗಿ ಕಿಚಾಯಿಸಿವೆ. ಹಾಲಿವುಡ್ ನ ಮುಂದಿನ ಸೂಪರ್ ಸ್ಟಾರ್ ಎಂದರೆ, ಕೆಲವರು ಮುಂದಿನ ಆಸ್ಕರ್ ಪ್ರಶಸ್ತಿಗೆ ಕೈಟ ಸಂಪೂರ್ಣ ಅರ್ಹ ಎಂದಿದ್ದಾರೆ. ಕಾಕಾ ಮುಖಕ್ಕೆ ಒದಿಯುವ ಸಾಧ್ಯತೆಯೇ ಇರಲಿಲ್ಲ. ಕಾಕಾ ಹ್ಯಾರಿ ಪಾಟರ್ ನಂತೆ ಜಾದೂ ಮಾಡಿ ಕೈಟ ಮುಖ ಮುಟ್ಟಬಹುದಾಗಿತ್ತು ಅಷ್ಟೇ ಎಂದು ಗೇಲಿ ಮಾಡಲಾಗಿದೆ.

ಕಾರಣ, ಕೈಟ ಮಾಡಿದ ನಟನೆ ಹಾಗಿತ್ತು. ಕಾಕಾ ಟಾಂಗ್ ಕೊಟ್ಟಂತೆ ನಟಿಸಿ ಬಿದ್ದ ಕೈಟ, ಮುಖ ಮುಚ್ಚಿಕೊಂಡಿದ್ದು ಯಾಕೆ ಎಂದು ನಾಲ್ಕಾರು ಬಾರಿ ರಿಪ್ಲೇ ನೋಡಿದ ಮಾಧ್ಯಮದವರಿಗೆ, ಅಭಿಮಾನಿಗಳಿಗೆ ಇನ್ನೂ ಆರ್ಥವಾಗದ ಸಂಗತಿ.

ಭಾನುವಾರ ನಡೆದ ಪಂದ್ಯದಲ್ಲಿ ನಡೆದ ಈ ಘಟನೆ, ಇನ್ನೂ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಸುದ್ದಿಯಗಿದೆ. ಪಂದ್ಯವನ್ನು ಬ್ರೆಜಿಲ್ 3-1 ಅಂತರದಿಂದ ಗೆದ್ದರೂ, ಬ್ರೆಜಿಲ್ ಆಟ ಕೂಡಾ ಕಳಂಕದಿಂದ ಹೊರತಾಗಿರಲಿಲ್ಲ. ಫ್ಯಾಬಿಯಾನೊ ಹೊಡೆದ ಎರಡನೇ ಗೋಲಿಗೂ ಮುನ್ನ ಹ್ಯಾಂಡ್ ಬಾಲ್ ಆದರೂ, ಲೆಕ್ಕಿಸದೆ ಮೋಸದಾಟ ಆಡಿದ್ದು, ಅಗ್ರತಂಡಕ್ಕೆ ಶೋಭೆ ತರುವ ವಿಚಾರವೇನಲ್ಲ.

English summary
Ivory Coast player Kader Keita deserves an oscar after Kaka yellow card incidence medias all around the world criticize for cheating Fifa world cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X