ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಸುಗ್ಗಿ

By Mahesh
|
Google Oneindia Kannada News

BSNL offers special broadband plans for rural subscribers
ಬೆಂಗಳೂರು, ಜೂ.22: ದೇಶದ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ , ಗ್ರಾಮೀಣ ಭಾಗಕ್ಕೆ ಕೈಗೆಟುಕುವ ದರದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ. ದೂರ ಸಂಪರ್ಕ ಇಲಾಖೆಯ Universal Service Obligation Fund(USOF) ನ ಆರ್ಥಿಕ ಸೌಲಭ್ಯ ಯೋಜನೆಗೆ ಅನುಗುಣವಾಗಿ ಗ್ರಾಮೀಣ ಭಾಗದಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲಾಗುತ್ತದೆ.

ಯೋಜನೆಯ ವಿವರಗಳು ಇಂತಿವೆ:
ಗ್ರಾಮೀಣ USOF ಪ್ಲಾನ್ 99 :
*ತಿಂಗಳಿಗೆ 99 ರುಪಾಯಿ ಪಾವತಿಸಿದರೆ, ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಲಭ್ಯ.
* 400 MB ಡಾಟಾ ರವಾನೆಗೆ ಅವಕಾಶವಿರುತ್ತದೆ.
* ಅಂದರೆ, ತಿಂಗಳಿಗೆ 400MB ಮಿತಿಯೊಳಗೆ ಡೌನ್ ಲೋಡ್ ಮಾಡಿಕೊಳ್ಳಬೇಕು.
* ಟೆಲಿಫೋನ್ ಬಿಲ್ ಮೊತ್ತಕ್ಕೂ ಇದಕ್ಕೂ ಸಂಬಂಧವಿಲ್ಲ. ಟೆಲಿಫೋನ್ ಬಿಲ್ ಪ್ರತ್ಯೇಕವಾಗಿ ಕಟ್ಟಬೇಕು.

BBG Rural USOF 150:
*ತಿಂಗಳಿಗೆ 150 ರುಪಾಯಿ ಬಾಡಿಗೆ ಪಾವತಿಸಿದರೆ, ಬ್ರಾಡ್ ಬ್ಯಾಂಡ್ ಲಭ್ಯ.
* 1GB ಡಾಟಾ ರವಾನೆಗೆ ಅವಕಾಶವಿರುತ್ತದೆ.

ಜೋಡಿ ಪ್ಲಾನ್ ಕೂಡಾ ಇದೆ: BBG Rural Combo 250 plan
* 2 Mbps ಬ್ರಾಡ್ ಬ್ಯಾಂಡ್ ವೇಗ.
* 1GB ಡಾಟಾ ರವಾನೆ.
* ತಿಂಗಳಿಗೆ 100 ಫೋನ್ ಕರೆಗಳನ್ನು ಉಚಿತವಾಗಿ ಮಾಡಬಹುದು.

BBG Rural Combo 550 ಹಾಗೂ BBG Rural Combo 999 plans
* 2 Mbps ಬ್ರಾಡ್ ಬ್ಯಾಂಡ್ ವೇಗ.
* 8 GBಡಾಟಾ ರವಾನೆ.(550 plan)
* 12 GB ಡಾಟಾ ರವಾನೆ ( 999 plan)
* ತಿಂಗಳಿಗೆ 250 ಫೋನ್ ಕರೆ ಉಚಿತ(550 plan)
* ತಿಂಗಳಿಗೆ 450 ಫೋನ್ ಕರೆ ಉಚಿತ(550 plan)

ಗ್ರಾಮೀಣ ಭಾಗದಲ್ಲಿ ಬ್ರಾಡ್ ಬ್ಯಾಂಡ್ ಜನಪ್ರಿಯಗೊಳಿಸಲು ಪಣ ತೊಟ್ಟಿರುವ ಬಿಎಸ್ಸೆನ್ನೆಲ್, ನೋಂದಣಿ, ಮೋಡೆಮ್, ಸುರಕ್ಷಿತ ಠೇವಣಿ, ಅಳವಡಿಕೆ ವೆಚ್ಚ ಮುಂತಾದ ಹೊರೆಯನ್ನು ಗ್ರಾಮೀಣ ಜನರಿಗೆ ಹೊರೆಸಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X