ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ ಮತ್ತಿತರರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

By Prasad
|
Google Oneindia Kannada News

Vishweshwar Bhat
ಬೆಂಗಳೂರು, ಜೂ.21 : ಪ್ರಜಾವಾಣಿಯ ಸಂಪಾದಕ ಶಾಂತಕುಮಾರ್, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ 2008 ಮತ್ತು 2009ನೇ ಸಾಲಿನ ಪ್ರಶಸ್ತಿಗಾಗಿ ಈ ಕೆಳಕಂಡ ಪತ್ರಕರ್ತರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಆಯ್ಕೆ ಮಾಡಿದೆ. ಅಕಾಡೆಮಿಯ ಅಧ್ಯಕ್ಷರಾದ ಡಿ.ಪಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು ಈ ಎಲ್ಲಾ ಪ್ರಶಸ್ತಿಗಳು ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

2008ರ ವಿಶೇಷ ಪ್ರಶಸ್ತಿ: ಕೆ.ಎನ್. ಶಾಂತಕುಮಾರ್, ಸಂಪಾದಕ, ಪ್ರಜಾವಾಣಿ.
2009ರ ವಿಶೇಷ ಪ್ರಶಸ್ತಿ: ಕೃಷ್ಣಪ್ರಸಾದ್ , ಸ್ಥಾನಿಕ ಸಂಪಾದಕ, ಔಟ್‌ಲುಕ್ ಹಾಗೂ ಮಾಜಿ ಸಂಪಾದಕ, ವಿಜಯಾ ಟೈಮ್ಸ್.
ವರ್ಷದ ಪ್ರಶಸ್ತಿ: ವಿಶ್ವೇಶ್ವರ ಭಟ್ (2008) ಸಂಪಾದಕ, ವಿಜಯ ಕರ್ನಾಟಕ, ಗೌರಿ ಲಂಕೇಶ್ (2009) ಸಂಪಾದಕಿ, ಲಂಕೇಶ್.

2008-09ನೇ ಸಾಲಿನ ಪ್ರಶಸ್ತಿ:

ಪದ್ಮರಾಜ ದಂಡಾವತಿ ಸಹ ಸಂಪಾದಕ, ಪ್ರಜಾವಾಣಿ. ಜಯಶ್ರೀ ವಿಜಯೇಂದ್ರ, ಭುವನವಾರ್ತೆ, ಶಿವಮೊಗ್ಗ. ಮೃತ್ಯುಂಜಯ ಕಪಗಲ್, ಪ್ರಧಾನ ವರದಿಗಾರ, ವಿಜಯ ಕರ್ನಾಟಕ, ರಾಯಚೂರು. ಬಿ.ಕೆ. ಕಿರಣ್‌ಮಯಿ, ಸಂಪಾದಕ, ಯೋಜನಾ ಪತ್ರಿಕೆ, ಬೆಂಗಳೂರು. ವಿ. ನಾಗರಾಜು, ಸಂಪಾದಕ, ಇಂದು ಸಂಜೆ ಬೆಂಗಳೂರು. ನ ವಿ. ಹನುಮಂತಪ್ಪ, ಸಂಪಾದಕ, ಜಿಲ್ಲಾ ಸಮಾಚಾರ, ದಾವಣಗೆರೆ. ಸುರೇಶ್ ಟೋಪಣ್ಣನವರ್, ಸಂಪಾದಕ, ಸಿರಿನಾಡು, ಬೆಳಗಾವಿ. ಬಾಬುರೆಡ್ಡಿ ತುಂಗಳ, ಸಂಪಾದಕ, ಕುರುಕ್ಷೇತ್ರ, ಬಾಗಲಕೋಟೆ. ಎನ್.ಬಿ. ಪಾಟೀಲ್, ಹಿರಿಯ ಪತ್ರಕರ್ತ, ಬಿಜಾಪುರ. ವೈ.ಎನ್. ಜೋಶಿ, ಹಿರಿಯ ಪತ್ರಕರ್ತ, ಹುಬ್ಬಳ್ಳಿ. ವಾದಿರಾಜ ವ್ಯಾಸಮುದ್ರ ಸ್ಥಾನಿಕ ಸಂಪಾದಕ, ವಿಜಯ ಕರ್ನಾಟಕ ಗುಲ್ಬರ್ಗಾ.

ನಾರಾಯಣ ಸುವರ್ಣ, ಸಂಪಾದಕ, ಸುದ್ದಿ ಮಾಧ್ಯಮ, ಚಿಕ್ಕಮಗಳೂರು. ಎಂ.ಬಿ. ಮರಮಕಲ್ ವಿಶೇಷ ವರದಿಗಾರ, ಟೈಮ್ಸ್ ಆಫ್ ಇಂಡಿಯಾ, ಮೈಸೂರು. ಬಿ.ವಿ. ಸೀತಾರಾಂ ಸಂಪಾದಕ, ಕರಾವಳಿ ಅಲೆ, ಮಂಗಳೂರು. ಜಿ. ರಾಜೇಂದ್ರ, ಶಕ್ತಿ, ಮಡಿಕೇರಿ. ತೋ.ಚ. ಅನಂತಸುಬ್ಬರಾವ್, ಸಂಪಾದಕ, ಮಾರ್ಗಪ್ರಭ, ಬೇಲೂರು. ಪ್ರಸನ್ನಕುಮಾರ್, ಪೌರವಾಣಿ, ಮಂಡ್ಯ. ಹೆಚ್.ಕೆ. ಮುರುಗೇಶ್, ಪ್ರಿಯಾ, ಚಿತ್ರದುರ್ಗ. ಎಸ್. ನಾಗಣ್ಣ, ಪ್ರಜಾಪ್ರಗತಿ ತುಮಕೂರು. ನಿರ್ಮಲ ಎಲಿಗಾರ್, ಕಾರ್ಯಕ್ರಮ ನಿರ್ವಾಹಕ, ಬೆಂಗಳೂರು ದೂರದರ್ಶನ. ವೆಂಕಟೇಶಪ್ರಸಾದ್, ಉದಯ ಟಿ.ವಿ. ಬೆಂಗಳೂರು. ಗೋಪಾಲ ವಾಜಪೇಯಿ, ನಿವೃತ್ತ ಸಹ ಸಂಪಾದಕ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ. ಬಾಬುರಾವ್ ಸ್ವಾಮಿ, ಛಾಯಾಗ್ರಾಹಕ, ಗುಲ್ಬರ್ಗಾ. ಹೆಚ್.ಎಸ್. ಸುಂದರೇಶ್, ಸಂಪಾದಕ, ಮಲೆನಾಡು ಸಂಗತಿ, ಚಿಕ್ಕಮಗಳೂರು. ಬಿ.ವಿ. ರಾಜಶೇಖರ್, ಸಹಾಯಕ ಸಂಪಾದಕ, ಪ್ರಜಾವಾಣಿ, ಬೆಂಗಳೂರು. ಎ. ಡಿಸಿಲ್ವಾ, ಮುಖ್ಯ ವರದಿಗಾರರು, ರೇಷ್ಮೆನಾಡು ಚಾಮರಾಜನಗರ.

ಅತ್ಯುತ್ತಮ ಜಿಲ್ಲಾಮಟ್ಟದ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ: ಸಂಧ್ಯಾಕಾಲ ದಿನಪತ್ರಿಕೆ ಗುಲ್ಬರ್ಗಾ(2008), ನವೋದಯ ಗದಗ(2009).

ಮಾನವೀಯ ಸಮಸ್ಯೆಗಳ ಅತ್ಯುತ್ತಮ ಲೇಖನಕ್ಕೆ ಮೈಸೂರು ದಿಗಂತ ಪ್ರಶಸ್ತಿ: ಕೃ.ಪ. ಗಣೇಶ್ ಅವರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ 'ಸಾಹಸ ಕಲಾವಿದರ ಅಸಹಾಯಕತೆ ತೆರೆಯ ಹಿಂದಿನ ವ್ಯಥೆ'(2008). ಕೆ. ಶಶಿಕುಮಾರ್ ಅವರ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ 'ಜೀವ ಬಿಂದುವೂ ನಿತ್ಯ ಸ್ವರೂಪ ಪ್ರಳಯವಾದಾಗ' (2009).

ಸಾಮಾಜಿಕ ಸಮಸ್ಯೆಯ ಅತ್ಯುತ್ತಮ ಲೇಖನಕ್ಕೆ ಅಭಿಮಾನ ಪ್ರಶಸ್ತಿ :
ಸುಚೇತನಾ ನಾಯಕ್ ಅವರ ಪ್ರಜಾವಾಣಿಯಲ್ಲಿ ಪ್ರಕಟವಾದ 'ಶವ ಸಾಗಿಸಲು ಹೆಣಗಾಟ: ದೇವರಿಗೂ ಪರದಾಟ' (2008). ಎಚ್.ಟಿ. ಅನಿಲ್ ಅವರು ಕನ್ನಡ ಪ್ರಭದಲ್ಲಿ ಬರೆದಿರುವ 'ಸಂತ್ರಸ್ತರ ಕಣ್ಣೀರು ನದಿಯಲ್ಲಿ ಕೊಚ್ಚಿತೇ' (2009).

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X