ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಿಯಾ ಕೊಚ್ಚಿ ಹಾಕಿದ ಪೊರ್ಚುಗೀಸರು

By Mahesh
|
Google Oneindia Kannada News

Portugal hrash minnows North Korea
ಕೇಪ್ ಟೌನ್, ಜೂ.21: ವಿಶ್ವಕಪ್ ಗೆಲ್ಲುವ ಸಾಮರ್ಥ್ಯವುಳ್ಳ ತಂಡ ಎಂದೇ ಬಿಂಬಿತವಾಗಿರುವ ರೊನಾಲ್ಡೊ ನೇತೃತ್ವದ ಪೋರ್ಚುಗಲ್ , ಇಂದು ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿ ಉತ್ತರ ಕೊರಿಯಾ ವಿರುದ್ಧ 7-0 ಅಂತರದ ಭರ್ಜರಿ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಐವರಿ ಕೋಸ್ಟ್ ವಿರುದ್ಧ ಡ್ರಾ ಸಾಧಿಸಿದ್ದರಿಂದ ಅಭಿಮಾನಿಗಳಲ್ಲಿ ಮೂಡಿದ್ದ ನಿರಾಶೆಯ ಮೋಡ ಸರಿದಿದೆ.

ಪಂದ್ಯದ 29ನೇ ನಿಮಿಷದಲ್ಲಿ ಮಿಡ್ ಫೀಲ್ಡರ್ ರೌಲ್ ಮೆರೇಲ್ಸ್ ಹೊಡೆತ ಅದ್ಭುತ ಗೋಲಿನಿಂದ ಪೋರ್ಚುಗೀಸರಿಗೆ ಉತ್ತಮ ಆರಂಭ ತಂದುಕೊಟ್ಟರು. ನಂತರ ದ್ವಿತೀಯಾರ್ಧದ 53ನೇ ನಿಮಿಷದಲ್ಲಿ ಸಿಮೊ ಸಬ್ರೊಸಾ ಮತ್ತೊಂದು ಗೋಲು ದಾಖಲಿಸಿದ ಬೆನ್ನಲ್ಲೇ, 56ನೇ ನಿಮಿಷದಲ್ಲಿ ಹೆಡ್ ಮಾಡುವ ಮೂಲಕ ಹ್ಯೂಗೊ ಅಲ್ಮೇಡಾ ಹೊಡೆತ ಗೋಲು ಪೋರ್ಚುಗೀಸರ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಗೋಲಿನ ದಾಹ ಇಂಗದ ಪೋರ್ಚುಗೀಸರು 60ನೇ ನಿಮಿಷದಲ್ಲಿ ರೊನಾಲ್ಡೊ ನೀಡಿದ ಪಾಸ್ ಅನ್ನು ಟಿಯಾಗೋ ಸುಲಭವಾಗಿ ಗೋಲ್ ಪೋಸ್ಟ್ ನೊಳಗೆ ತಳ್ಳಿದರು. ಬದಲಿ ಆಟಗಾರನಾಗಿ ಬಂದ ಲೆಯೆಡ್ಸನ್ 81ನೇ ನಿಮಿಷದಲ್ಲಿ ಹೊಡೆತ ಗೋಲಿನ ಮೂಲಕ ಪೋರ್ಚುಗಲ್ ಈ ವಿಶ್ವಕಪ್ ನಲ್ಲಿ ಅಧಿಕ ಗೋಲು ಗಳಿಸಿದ ತಂಡ ಎಂಬ ಕೀರ್ತಿ ಪಡೆಯಿತು.

ಇಷ್ಟಕ್ಕೇ ತೃಪ್ತಿಗೊಳ್ಳದ ಪೋರ್ಚುಗೀಸರ ನಾಯಕ, ಸ್ಟಾರ್ ಆಟಗಾರ ರೊನಾಲ್ಡೊ, 87ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ವಿಶ್ವಕಪ್ ನಲ್ಲಿ ತಮ್ಮ ಖಾತೆ ತೆರೆದರು. ಆಗಲೇ 6 ಗೋಲುಗಳನ್ನು ಬಾರಿಸಿ ಬೀಗುತ್ತಿದ್ದ ಪೋರ್ಚುಗೀಸರಿಗೆ ಟಿಯಾಗೋ ತಮ್ಮ ಎರಡನೇ ಗೋಲಿನ ಮೂಲಕ ಏಳನೇ ಗೋಲಿನ ಕಾಣಿಕೆ ನೀಡಿದರು.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ

ಇದುವರೆವಿಗೂ ಅಸ್ಟ್ರೇಲಿಯಾ ವಿರುದ್ಧ ಜರ್ಮನಿ ನಾಲ್ಕು ಗೋಲು ಗಳಿಸಿದ್ದು, ದಾಖಲೆಯಾಗಿತ್ತು. ಇಂದು ಪೋರ್ಚುಗೀಸರು 7 ಗೋಲುಗಳನ್ನು ಹೊಡೆದು ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X