ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈವ್ ಬ್ಯಾಂಡ್ ಬೆಡಗಿಯರು ಪೊಲೀಸ್ ಬಲೆಗೆ

By Mahesh
|
Google Oneindia Kannada News

44 Live Band Girls held, Img source: Bangalore Mirror
ಬೆಂಗಳೂರು, ಜೂ.20: ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶುಭಂ ರೆಸ್ಟೋರೆಂಟ್ ನ ಮೇಲೆ ದಾಳಿ ನಡೆಸಿದ ಪೊಲೀಸರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಸುಮಾರು 44 ಲೈವ್ ಬ್ಯಾಂಡ್ ಯುವತಿಯರನ್ನು ಹಾಗೂ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಕೋರಮಂಗಲ ರಿಂಗ್ ರಸ್ತೆ ಬಳಿಯ ಈ ರೆಸ್ಟೋರೆಂಟ್ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಲಾಗಿದ್ದು, ವಿವೇಕ್ ಹಾಗೂ ಮುನ್ನಾ ಎಂಬುವವರನ್ನು ಬಂಧಿಸಲಾಗಿದೆ. ಈ ಇಬ್ಬರು ಬಂಧಿತರು ಲೈವ್ ಬ್ಯಾಂಡ್ ಕುಣಿತಕ್ಕೆ ಉತ್ತರಪ್ರದೇಶದಿಂದ ಹುಡುಗಿಯರನ್ನು ಪೂರೈಸುತ್ತಿದ್ದರು. ಸೆರೆ ಸಿಕ್ಕಿರುವ 44 ಲೈವ್ ಬ್ಯಾಂಡ್ ಯುವತಿಯರು ಕೂಡಾ ಉತ್ತರಪ್ರದೇಶ ಮೂಲದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯರಾತ್ರಿ ನಂತರ ಹೆಚ್ಚುವರಿ ಅವಧಿ ಮದ್ಯ ಪೂರೈಕೆಗೆ ಬೇಕು ಎಂದು ಅಬಕಾರಿ ಸಚಿವರು ಪಟ್ಟು ಹಿಡಿದಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಶುಭಂ ರೆಸ್ಟೋರೆಂಟ್ ನಲ್ಲಿ ಲೈವ್ ಬ್ಯಾಂಡ್ ನಡೆಸುತ್ತಿರುವ ಬಗ್ಗೆ ಈ ಮುಂಚೆ ಕೂಡಾ ಮಾಹಿತಿ ಸಿಕ್ಕಿತ್ತು, ಪಬ್ ಮಾಲೀಕರಿಗೆ ಎಚ್ಚರಿಕೆ ನೀಡಿದರೂ ಲೈವ್ ಬ್ಯಾಂಡ್ ಮುಂದುವರೆಸಿದ್ದರು. ವಿವೇಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X