ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಪೊಲೀಸರಿಗೆ ಚಿನ್ನಾಭರಣದ 'ಉಡುಗೊರೆ'

By Prasad
|
Google Oneindia Kannada News

Two women cheated by fake police in Mysore
ಮೈಸೂರು, ಜೂ. 19 : ಪೊಲೀಸ್ ವೇಷದಲ್ಲಿ ಬಂದ ವಂಚಕರು ಅಮಾಯಕ ಮಹಿಳೆಯರನ್ನು ನಂಬಿಸಿ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪರಾರಿಯಾದ ಘಟನೆ ಮೈಸೂರಿನಲ್ಲಿ ಶನಿವಾರ ಹಾಡುಹಗಲೇ ಜರುಗಿದೆ.

ಭಾಗ್ಯಮ್ಮ ಎಂಬುವವರು ಮಧ್ಯಾಹ್ನ ಮತ್ತೊಬ್ಬ ಮಹಿಳೆಯೊಂದಿಗೆ ರಸ್ತೆಯಲ್ಲಿ ಬರುತ್ತಿದ್ದಾಗ ಏಕಾಏಕಿ ಅಡ್ಡಬಂದ ಪೊಲೀಸ್ ದಿರಿಸಿನಲ್ಲಿದ್ದ ಇಬ್ಬರು, ಮುಂದಿನ ರಸ್ತೆಯಲ್ಲಿ ಗಲಾಟೆಗಳಾಗುತ್ತಿವೆ ಆಭರಣ ಧರಿಸಿ ಹೋಗಬೇಡಿ ಎಂದು ದುಂಬಾಲು ಬಿದ್ದಿದ್ದಾರೆ. ಮನೆ ಹತ್ತಿರದಲ್ಲಿಯೇ ಇದೆ ಪರವಾಗಿಲ್ಲ ಎಂದರೂ ಕೇಳದೆ ಅವರನ್ನು ಮರುಳು ಮಾಡಿ ಆಭರಣಗಳನ್ನು ಬಿಚ್ಚಿಸಿಕೊಂಡಿದ್ದಾರೆ. ನಂತರ ಬಟ್ಟೆಯಲ್ಲಿ ಹಿತ್ತಾಳೆ ಆಭರಣ ಕೈಯಲ್ಲಿಟ್ಟು ಪರಾರಿಯಾಗಿದ್ದಾರೆ.

3 ಲಕ್ಷ ರು.ಯಷ್ಟು ಆಭರಣಗಳನ್ನು ಕಳೆದುಕೊಂಡಿರುವ ಭಾಗ್ಯಮ್ಮ ಮತ್ತೊಬ್ಬ ಮಹಿಳೆ ಲಕ್ಷ್ಮಿಪುರಂ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. ಅತ್ಯಂತ ಸಂಭಾವಿತರಾಗಿರುವ ಭಾಗ್ಯಮ್ಮ ತಮ್ಮ ದೌರ್ಭಾಗ್ಯವನ್ನು ಹಳಿದುಕೊಂಡು ಕಣ್ಣೀರಾಗಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೂಡ ಇದೇ ರೀತಿಯಲ್ಲಿ ಮಹಿಳೆಯರಿಬ್ಬರು ವಂಚನೆಗೊಳಗಾಗಿದ್ದರು. ಗಲಾಟೆಯಾಗುತ್ತಿದೆ ಎಂದು ಹೇಳಿ ಮಹಿಳೆಯರಿಬ್ಬರಿಂದ ಆಭರಣಗಳನ್ನು ಬಿಚ್ಚಿಸಿ ಬಲವಂತವಾಗಿ ಆಟೋದಲ್ಲಿ ಹತ್ತಿಸಿದ್ದರು. ತಮ್ಮ ಬ್ಯಾಗು ತೆಗೆದು ನೋಡಿದಾಗ ಆಭರಣದ ಚೀಲ ಮಂಗಮಾಯವಾಗಿತ್ತು.

ಯಾಕೆ ಹೀಗಾಗುತ್ತಿದೆ?

ಪೊಲೀಸರ ಸೋಗಿನಲ್ಲಿ ಬರುತ್ತಿರುವ ವಂಚಕರು ಅಮಾಯಕ ಮಹಿಳೆಯರನ್ನು ಇದೇ ರೀತಿ ವಂಚಿಸುತ್ತಿದ್ದಾರೆ. ಈ ಬಗೆಯ ವರದಿಗಳನ್ನು ಓದಿದ್ದರೂ ಅನೇಕ ವೃದ್ಧ ಮಹಿಳೆಯರು ಆಭರಣಗಳನ್ನು ಕಳೆದುಕೊಂಡಿದ್ದಾರೆ. ವಂಚಕರು ಹೆಚ್ಚಾಗಿ ಪೊಲೀಸರ ದಿರಿಸಿನಲ್ಲಿಯೇ ಬರುವುದರಿಂದ ನಿರಾಯಾಸವಾಗಿ ಅಮಾಯಕ ಮಹಿಳೆಯರು ವಂಚನೆಗೊಳಗಾಗುತ್ತಿದ್ದಾರೆ.

ಮಹಿಳೆಯರಿಗೆ ಕಿವಿಮಾತು

* ಮನೆಯಿಂದ ಮಹಿಳೆಯರ ಜೊತೆಯೇ ತೆರಳುವಾಗ ದುಬಾರಿ ಆಭರಣ ಧರಿಸಲೇಬೇಡಿ.
* ಗದ್ದಲವಿರುವಲ್ಲಿ, ನಿರ್ಜನ ಪ್ರದೇಶದಲ್ಲಿ ಮೈತುಂಬ ಸೆರಗು ಹೊದೆಯಿರಿ.
* ಆಭರಣ ಪ್ರದರ್ಶನ ಬೇಡ, ಸಾಧ್ಯವಾದಷ್ಟು ಸರಳವಾಗಿರಿ.
* ಮೈತುಂಬ ಆಭರಣವಿದ್ದಾಗಲಂತೂ ಮೈತುಂಬ ಎಚ್ಚರವಿರಲಿ.
* ರಸ್ತೆಯಲ್ಲಿ ಅಡ್ಡಬಂದ ಯಾರನ್ನೂ ನಂಬಬೇಡಿ.
* ಆಭರಣ ಧರಿಸುವಂಥ ಸಂದರ್ಭ ಬಂದರೆ ಫ್ಯಾನ್ಸಿ ಆಭರಣ ಧರಿಸಿ, ಚಿನ್ನ ಬೇಡ.
* ಯಾರು ಏನೇ ಹೇಳಿದರೂ ಆಭರಣ ಬಿಚ್ಚಲೇಬೇಡಿ, ಮೋಸ ಕಟ್ಟಿಟ್ಟಬುತ್ತಿ.
* ಚಿನ್ನದ ಮೇಲಿನ ವ್ಯಾಮೋಹ ಕಡಿಮೆಮಾಡಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X