ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಹೆಣ್ಣುಮಕ್ಕಳಿಗೆ ಕೇವಲ ರು.1ಕ್ಕೆ ನ್ಯಾಪ್ ಕಿನ್

By Rajendra
|
Google Oneindia Kannada News

Sanitary napkins for rural girls at Re.1
ನವದೆಹಲಿ, ಜೂ.17: ಮಾಸಿಕ ಋತುಚಕ್ರದ ವೇಳೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ ಹೆಣ್ಣುಮಕ್ಕಳಿಗೆ ಕೇವಲ 1ರೂಪಾಯಿಗೆ ಸ್ಯಾನಿಟರಿ ನ್ಯಾಪ್ ಕಿನ್ ಪ್ಯಾಕ್ ಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮಕ್ಕೆ ಸಚಿವಾಲಯ ರು.150 ಕೋಟಿ ಮಂಜೂರು ಮಾಡಿದೆ. ಒಂದು ಪ್ಯಾಕ್ ನಲ್ಲಿ 6 ಅತ್ಯುತ್ಕೃಷ್ಟ ನ್ಯಾಪ್ ಕಿನ್ ಗಳಿರುತ್ತವೆ. ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಹೆಣ್ಣುಮಕ್ಕಳಿಗೆ ರು.1ಕ್ಕ್ಕೆ ವಿತರಿಸಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ ಹೆಣ್ಣು ಮಕ್ಕಳಿಗೆ ರು.5ಕ್ಕೆ ವಿತರಿಸಲಾಗುತ್ತದೆ ಎಂದು ಸಚಿವಾಲಾಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ವರ್ಷ ಈ ಕಾರ್ಯಕ್ರಮ 150 ಜಿಲ್ಲೆಗಳಲ್ಲಿ ಆರಂಭಗೊಳ್ಳಲಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ದಕ್ಷಿಣದ ನಾಲ್ಕು ರಾಜ್ಯಗಳ 30 ಜಿಲ್ಲೆಗಳು ಹಾಗೂ ಉತ್ತರ, ಮಧ್ಯ ಹಾಗೂ ಈಶಾನ್ಯ ರಾಜ್ಯಗಳ 120 ಜಿಲ್ಲೆಗಳು ಒಳಪಡುತ್ತವೆ. ಮೂರು ಹಂತಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X